ಹಾಸನ,ಡಿ.27-ಮಂಗಳೂರಿನ ಕುಕ್ಕರ್ ಸ್ಫೋಟ ಬೆನ್ನಲ್ಲೇ ಹಾಸನದಲ್ಲಿ ಕೊರಿಯರ್ ಮೂಲಕ ಬಂದಿದ್ದ ಮಿಕ್ಸರ್ ನಿಗೂಢವಾಗಿ ಸ್ಫೋಟಗೊಂಡಿದ್ದು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್ ಗೆ ಕೊರಿಯರ್ ಮೂಲಕ ಬಂದಿದ್ದ ಹೊಸ ಮಿಕ್ಸರ್ ಟೆಸ್ಟ್ ಮಾಡುತ್ತಿರುವಾಗ ಸ್ಫೋಟಗೊಂಡಿದೆ. ಕೊರಿಯರ್ ಮಾಲೀಕ ಶಶಿಗೆ ಗಂಭೀರ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
ಮಂಗಳೂರು ಸ್ಪೋಟ ಕೇವಲ ರಾಜ್ಯ ಮಾತ್ರವಲ್ಲ ದೇಶದಲ್ಲಿ ಸುದ್ದಿಯಾಗಿದೆ. ಆ ಸುದ್ದಿ ಇನ್ನು ಮಾಸುವ ಮುನ್ನವೇ ಇಲ್ಲಿ ನಿಗೂಢವಾಗಿ ಮಿಕ್ಸರ್ ಸ್ಫೋಟಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಹಾಸನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರಿರಾಮ್ ದೌಡಾಯಿಸಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಆರ್ ಪುರಂನ ಡಿಟಿಡಿಸಿ ಕೊರೊಯರ್ ಶಾಪ್ ನಲ್ಲಿ ಸಂಜೆ 7-3೦ ಕ್ಕೆ ಮಿಕ್ಸಿ ಸ್ಪೋಟ ಆಗಿದೆ. ಕೊರಿಯರ್ ಬಂದಿದ್ದ ಮಿಕ್ಸಿ ಸ್ಪೋಟಗೊಂಡಿರುವ ಮಾಹಿತಿ ಇದೆ. ಮಿಕ್ಸ್ ಆನ್ ಮಾಡದೆಯೇ ಸ್ಪೋಟಗೊಂಡಿದ ಎಂದೂ ಹೇಳಲಾಗುತ್ತಿದೆ. ಕೊರಿಯರ್ ಆಫೀಸ್ ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದೆ. ಗಾಯಾಳುಗೆ ಯಾವುದೇ ಪ್ರಾಣಾಪಾಯ ಇಲ್ಲ. ಮಿಕ್ಸಿಯ ಬ್ಲೇಡ್ ತಾಗಿ ಅವರಿಗೆ ಪೆಟ್ಟಾಗಿದೆ.ಸ್ಪೋಟ ಬೇರೆ ಏನೂ ಇದೆ ಎಂದು ಕಂಡು ಬಂದಿಲ್ಲ. ಮೈಸೂರಿನಿಂದ ಎಫ್.ಎಸ್.ಎಲ್ ಅಧಿಕಾರಿಗಳು ಆಗಮಿಸಿ ಸ್ಪೋಟದ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ಕೊರಿಯರ್ ಎಲ್ಲಿಂದ ಬಂತು ಎನ್ನುವ ಮಾಹಿತಿ ಇದೆ. ಎಲ್ಲವನ್ನೂ ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲಕ್ಕೆ ಒಳಗಾಗುವುದು ಬೇಡ ಸದ್ಯಕ್ಕೆ ಯಾವುದೇ ಆತಂಕ ಇಲ್ಲ ವೈಜ್ಞಾನಿಕ ಸಾಕ್ಷ್ಯ ಪಡೆದ ಬಳಿಕ ಎಲ್ಲವೂ ಗೊತ್ತಾಗುತ್ತೆ ಎಂದು ತಿಳಿಸಿದರು.
Previous Articleಬೆಂಗಳೂರಲ್ಲಿ ಬೌಬೌ ಹಾವಳಿ
Next Article ಹತ್ತು ದಿನ ತೆರೆದಿರಲಿದೆ ತಿರುಪತಿಯ ವೈಕುಂಠ ಬಾಗಿಲು