ಬೆಂಗಳೂರು- ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತಕ್ಕೀಡಾಗಿದೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಸಕಾಲದಲ್ಲಿ ಕಾರಿನ ಏರ್ ಬ್ಯಾಗ್ ತೆರೆದುಕೊಂಡ ಪರಿಣಾಮ ದೊಡ್ಡ ದುರಂತ ತಪ್ಪಿದೆ.
ಮೈಸೂರು ತಾಲೂಕು ಕಡಕೊಳ ಬಳಿ ಅಪಘಾತ ನಡೆದಿದ್ದು ಕಾರು ಜಖಂ ಆಗಿದೆ. ಪ್ರಧಾನಿ ಸಹೋದರ, ಬೆಂಗಳೂರಿನಿಂದ ಬಂಡೀಪುರಕ್ಕೆ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ತೆರಳುವಾಗ ಈ ಘಟನೆ ನಡೆದಿದೆ.
ಸದ್ಯ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು ಏರ್‌ಬ್ಯಾಗ್‌ಗಳು ಜೀವ ಉಳಿಸಿವೆ. ಸ್ಥಳಕ್ಕೆ ಮೈಸೂರು ಎಸ್ ಪಿ ಸೀಮಾ ಭೇಟಿ ನೀಡಿದ್ದಾರೆ. ಈಗ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೋದಿ ಸಹೋದರ ಪ್ರಹ್ಲಾದ್ ದಾಮೋದರ್ ಮೋದಿ 70.
ಮೋದಿ ಸಹೋದರ ಪ್ರಹ್ಲಾದ್ ಮೋದಿ ಪುತ್ರ ಮೆಹೂಲ್ ಪ್ರಹ್ಲಾದ್ ಮೋದಿ 40 ವರ್ಷ.
ಮೋದಿ ಸಹೋದರನ ಸೊಸೆ ಜಿಂದಾಲ್ ಮೋದಿ 35 ವರ್ಷ.
ಮೋದಿ ಸಹೋದರನ ಮೊಮ್ಮಗ ಮಾಸ್ಟರ್ ಮೆಹತ್ ಮೆಹೋಲ್ ಮೋದಿ 06 ವರ್ಷ.
ಕಾರು ಚಾಲಕ ಸತ್ಯನಾರಾಯಣ ಚಾಲಕ 46 ವರ್ಷ.
‘ಅಪಘಾತದಲ್ಲಿ ಮೋದಿ ಸಹೋದರನ ಮೊಮ್ಮಗನ ಕಾಲಿಗೆ ಗಾಯವಾಗಿದ್ದು ಮೋದಿ ಸಹೋದರನಿಗೆ ಮುಖದ ಬಳಿ ಗಾಯವಾಗಿದೆ. ಯಾರಿಗೂ ದೊಡ್ಡ ಪ್ರಮಾಣದಲ್ಲಿ ಪೆಟ್ಟು ಬಿದ್ದಿಲ್ಲ. ಎಲ್ಲರೂ ಅರಾಮಾಗಿದ್ದಾರೆ. ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ. ಎಲ್ಲಾ ಗಾಯಾಳುಗಳು ಸುರಕ್ಷಿತರಾಗಿದ್ದಾರೆ’ ಎಂದು ಜೆಎಸ್‌ಎಸ್ ಆಸ್ಪತ್ರೆಯ ವೈದ್ಯ ಡಾ. ಮಧು ಹೇಳಿಕೆ ನೀಡಿದ್ದಾರೆ.