ಬೆಂಗಳೂರು,ಜ.19- ಸಿಲಿಕಾನ್ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಇಡೀ ವಿಶ್ವದಲ್ಲೇ ಪ್ರಸಿದ್ಧ. ಈ ಟ್ರಾಫಿಕ್ ನಲ್ಲಿ ಯಾರೂ ಕೂಡ ನಿಗದಿತ ಅವಧಿಯಲ್ಲಿ ತಲುಪಬೇಕಾದ ಸ್ಥಳಕ್ಕೆ ತಲುಪುವುದು ಅಸಾಧ್ಯ.ಇಂತಹ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸಂಚಾರಿ ಪೊಲೀಸರು ಮಾಡುತ್ತಿರುವ ಪ್ರಯೋಗ ಅಷ್ಟಿಷ್ಟಲ್ಲ.
ಇವೆಲ್ಲದರ ನಡುವೆ ನಗರದ ಭಾರೀ ಟ್ರಾಫಿಕ್ ನಡುವೆ ಸಿಕ್ಕಿ ಹಾಕಿಕೊಂಡ ವಧುವೊಬ್ಬರು ನಿಗದಿತ ಸಮಯಕ್ಕೆ ಮದುವೆ ಮಂಟಪವನ್ನು ತಲುಪಲು ತಮ್ಮ ಕಾರನ್ನು ಬಿಟ್ಟು ಮೆಟ್ರೋವನ್ನು ಹತ್ತಿ ಮದುವೆ ಮಂಟಪಕ್ಕೆ ಹೋಗಿದ್ದಾರೆ.
ವಧು ಆಭರಣಗಳನ್ನು ಧರಿಸಿ, ಮದುಮಗಳ ದಿರಿಸಿನಲ್ಲಿ ಮೆಟ್ರೊ ಸವಾರಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಕಿರಿಕಿರಿಯ ಟ್ರಾಫಿಕ್ ದಟ್ಟಣೆಯು ವಧು ತನ್ನ ಸ್ವಂತ ಮದುವೆಗೆ ತಡವಾಗಿ ಬರಲು ಕಾರಣವಾಯಿತು, ಆದರೆ ಅವಳು ನಗುವಿನೊಂದಿಗೆ ಮೆಟ್ರೋ ಸವಾರಿ ಮಾಡಿದ್ದು, ಮದುಮಗಳು ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ಜಾಲತಾಣದಲ್ಲಿ ಅನೇಕರು ಆಕೆಯನ್ನು ಪ್ರಶಂಸಿದ್ದಾರೆ.
ವಧುವನ್ನು “ವಾಟ್ ಎ ಬ್ರೈಡ್” ಎಂದು ಕರೆದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಟ್ವಿಟರ್ ಬಳಕೆದಾರರೊಬ್ಬರು, ವಾಟ್ ಸ್ಟಾರ್ ಎಂದಿದ್ದಾರೆ. ವೀಡಿಯೊ 8000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ ಮತ್ತು ವಧು ಮೆಟ್ರೋದ ಸ್ವಯಂಚಾಲಿತ ಪ್ರವೇಶ ಗೇಟ್ ಮೂಲಕ ಮತ್ತು ಮೆಟ್ರೋ ರೈಲಿನಲ್ಲಿ ಬರುವಾಗ ಕೈ ಬೀಸುತ್ತಿರುವುದನ್ನು ತೋರಿಸುತ್ತದೆ.
ನಂತರ ಅವಳು ಮದುವೆಯ ಸ್ಥಳಕ್ಕೆ ತಲುಪಿ ವೇದಿಕೆಯ ಮೇಲೆ ಕುಳಿತು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾಳೆ. “ಅವಳು ಮಸ್ತ್ ವಧು, ನಮ್ ಕನ್ನಡ ಹುಡ್ಗಿ” ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ಮೆಟ್ರೋಗೆ ಧನ್ಯವಾದ ಅರ್ಪಿಸಿ ಮೆಟ್ರೋ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ ಅದಕ್ಕೆ ಉತ್ತರವಾಗಿ “ಮದುವೆ ರದ್ದು” ಎಂದು ಮತ್ತೊಬ್ಬರು ಬರೆದಿದ್ದಾರೆ.
Previous ArticleChe Guevara ಮಗಳು ಮೊಮ್ಮಗಳು ಬೆಂಗಳೂರಿಗೆ ಬರುತ್ತಿದ್ದಾರೆ
Next Article Al Qaeda ಜೊತೆ ನಂಟು ಹೊಂದಿದ್ದ Tilak Nagar ಯುವಕರು