ಭಾರತೀಯ ಸೇನೆಯಲ್ಲಿ ಮಿಲಿಟರಿ ಕಾರ್ಯಾಚರಣೆ ವಿಭಾಗದ ಮಹಾನಿರ್ದೇಶಕರಾಗಿದ್ದ ಲೆಫ್ಟಿನೆಂಟ್ ಜನರಲ್ ಬಗ್ಗವಳ್ಳಿ ಸೋಮಶೇಖರ ರಾಜು ಅವರನ್ನ ಸೇನಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯದವಾದ ಲೆ| ಜ| ಬಿ ಎಸ್ ರಾಜು ಅವರು ಹೊಸ ಹುದ್ದೆಯ ಅಧಿಕಾರ ಸ್ವೀಕರಿಸಲಿದ್ದಾರೆ. ಥ್ರೀ ಸ್ಟಾರ್ ಮಟ್ಟದ ಅಧಿಕಾರಿಯೊಬ್ಬರು ಸೇನಾ ಸಿಬ್ಬಂದಿಯ ಉಪಮುಖ್ಯಸ್ಥ ಸ್ಥಾನಕ್ಕೆ ಬಡ್ಡಿ ಪಡೆಯುವುದು ಅಪರೂಪ. ಕನ್ನಡಿಗರೊಬ್ಬರಿಗೆ ಈ ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ.
ಸದ್ಯ ಸೇನಾ ಸಿಬ್ಬಂದಿಯಲ್ಲಿ ಉಪಮುಖ್ಯಸ್ಥರಾಗಿರುವ ಲೆ| ಜ| ಮನೋಜ್ ಪಾಂಡೆ ಅವರು ಇಂದು ಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ನರವಣೆ ಅವರ ಸ್ಥಾನವನ್ನು ತುಂಬಲಿದ್ದಾರೆ. ಈಗ ಮನೋಜ್ ಪಾಂಡೆ ಸ್ಥಾನಕ್ಕೆ ಬಗ್ಗವಳ್ಳಿ ಸೋಮಶೇಕರ್ ರಾಜು ಅವರು ಆಯ್ಕೆಯಾಗಿದ್ದಾರೆ.
ಲೆ. ಜ. ಸೊಮಶೇಖರ್ ರಾಜು ಅವರು ವಿಜಯಪುರದ ಸೈನಿಕ್ ಸ್ಕೂಲ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ತೇರ್ಗಡೆಯಾಗಿ ಹೋದವರು. 1984ರಲ್ಲಿ ಜ್ಯಾಟ್ ರೆಜಿಮೆಂಟ್‌ಗೆ ನಿಯೋಜಿತರಾದರು. ಜಮ್ಮು ಕಾಶ್ಮೀರದಲ್ಲಿ ನಡೆಸಲಾದ ಆಪರೇಶನ್ ಪರಾಕ್ರಮ್ ಕಾರ್ಯಾಚರಣೆಯಲ್ಲಿ ಅವರು ಒಂದು ಬಟಾಲಿಯನ್ ಅನ್ನು ಮುನ್ನಡೆಸಿದ್ದರು.
Previous Articleವಿದ್ಯುತ್ ಸ್ಟಾಕ್ ಇದೆ, ಭಯ ಪಡಬೇಡಿ
Next Article ನಾನು ಸೋತಾಗಲು ಗೆದ್ದಾಗಲು ಒಂದೇ ತರ ಇದ್ದೇನೆ