Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ವಿಮಾನದಲ್ಲಿ ಪ್ರಯಾಣಿಕರು ಯಾಕೆ ಹೀಗೆ?
    ಸುದ್ದಿ

    ವಿಮಾನದಲ್ಲಿ ಪ್ರಯಾಣಿಕರು ಯಾಕೆ ಹೀಗೆ?

    vartha chakraBy vartha chakraಜನವರಿ 24, 2023ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ನವದೆಹಲಿ,ಜ.24-
    ವಿಮಾನ ಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ ವರ್ತಿಸಿದ ಪ್ರಯಾಣಿಕನನ್ನು ಸ್ಪೈಸ್​ಜೆಟ್ ವಿಮಾನಯಾನ ಸಂಸ್ಥೆಯು ವಿಮಾನದಿಂದ ಕೆಳಗಿಳಿಸಿದೆ.
    ಈ ಘಟನೆ ನಿನ್ನೆ ನಡೆದಿದ್ದು, ದೆಹಲಿ-ಹೈದರಾಬಾದ್ ವಿಮಾನದಿಂದ ಪ್ರಯಾಣಿಕನನ್ನು ಕೆಳಗಿಸಿದ ಕುರಿತು ಸ್ಪೈಸ್​ಜೆಟ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
    ‘ವಿಮಾನದ ಬೋರ್ಡಿಂಗ್ ವೇಳೆ ಪ್ರಯಾಣಿಕರೊಬ್ಬರು ಅಲ್ಲಿನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದರು,ಲೈಂಗಿಕ ಹಿಂಸೆ ನೀಡಲು ಮುಂದಾದರು. ಇದರಿಂದ ಎಚ್ಚೆತ್ತ ಮಹಿಳಾ ಉದ್ಯೋಗಿ ತಕ್ಷಣ ಈ ಕುರಿತು ಭದ್ರತಾ ದಳ ಹಾಗೂ ಇತರ ಸಿಬ್ಬಂದಿಗೆ ಮಾಹಿತಿ ನೀಡಿದರು. ನಂತರ ಆರೋಪಿ ಪ್ರಯಾಣಿಕ ಹಾಗೂ ಸಹಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಯಿತು’ ಎಂದು ಸ್ಪೈಸ್​ಜೆಟ್​  ಹೇಳಿಕೆಯಲ್ಲಿ ತಿಳಿಸಿದೆ.
    ಗಗನಸಖಿಯೊಬ್ಬರಿಗೆ ಹಿಂಸೆಯಾಗುವ ರೀತಿಯಲ್ಲಿ ಆರೋಪಿ ಪ್ರಯಾಣಿಕ ಅಂಗಾಂಗ ಸ್ಪರ್ಶ ಮಾಡಿದ್ದ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ಆರೋಪಿ ಪ್ರಯಾಣಿಕನು ತಾನು ಅಂಥ ದುಷ್ಕೃತ್ಯ ಎಸಗಿಲ್ಲ. ಅಚಾನಕ್​ ಆಗಿ ನನ್ನ ಕೈ ಅವರನ್ನು ತಾಗಿತು. ವಿಮಾನದಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಹೀಗಾಯಿತೇ ವಿನಃ ಇದು ಉದ್ದೇಶಪೂರ್ವಕ ಕೃತ್ಯ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಿಬ್ಬಂದಿಯ ಪರವಾಗಿ ವಿಮಾನಸಂಸ್ಥೆಯು ಗಟ್ಟಿಯಾಗಿ ನಿಂತ ನಂತರ ಆರೋಪಿ ಪ್ರಯಾಣಿಕನು ಲಿಖಿತ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಕ್ಷಮೆಯಾಚಿಸಿದ. ಆದರೆ ಪ್ರಯಾಣದಲ್ಲಿ ಮುಂದೆಯೂ ತೊಂದರೆಯಾಗಬಹುದು ಎಂದು ಅಂದಾಜಿಸಿದ ಸ್ಪೈಸ್​ಜೆಟ್​ ವ್ಯವಸ್ಥಾಪಕರು ಆರೋಪಿ ಪ್ರಯಾಣಿಕನನ್ನು ಕೆಳಗಿಳಿಸಲು ನಿರ್ಧರಿಸಿದರು.
    ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಏರ್​ ಇಂಡಿಯಾದಲ್ಲಿ ಪ್ರಯಾಣಿಕರು ಅನುಚಿತವಾಗಿ ವರ್ತಿಸಿದ ಎರಡು ಘಟನೆಗಳು ಒಂದಾದ ಮೇಲೊಂದರಂತೆ ವರದಿಯಾದ ನಂತರ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು (ಡಿಜಿಸಿಎ) ಏರ್ ​ಇಂಡಿಯಾದ ವ್ಯವಸ್ಥಾಪಕರಿಗೆ ಕಟುವಾಗಿ ನೊಟೀಸ್ ಜಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
    ಏರ್​ ಇಂಡಿಯಾದ ಓರ್ವ ಪ್ರಯಾಣಿಕ ಶೌಚಾಲಯದಲ್ಲಿ ಸಿಗರೇಟ್ ಸೇದುತ್ತಿದ್ದ. ನಿಲ್ಲಿಸುವಂತೆ ಹೇಳಿದ ಸಿಬ್ಬಂದಿಯ ಮಾತಿಗೆ ಬೆಲೆ ಕೊಟ್ಟಿರಲಿಲ್ಲ. ಮತ್ತೋರ್ವ ಪ್ರಯಾಣಿಕ ಮಹಿಳಾ ಸಹಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಎರಡೂ ಪ್ರಕರಣಗಳನ್ನು ಡಿಜಿಸಿಎ ಗಂಭೀರವಾಗಿ ಪರಿಗಣಿಸಿತ್ತು.
    ಪ್ರಯಾಣಿಕರಲ್ಲಿ ಶಿಸ್ತು ಕಾಪಾಡುವ ಜವಾಬ್ದಾರಿಯನ್ನೂ ವಿಮಾನಯಾನ ಸಂಸ್ಥೆಗಳು ನಿರ್ವಹಿಸಬೇಕು. ನಿಯಮ ಉಲ್ಲಂಘಿಸುವ ಪ್ರಯಾಣಿಕರ ಬಗ್ಗೆ ಭದ್ರತಾ ಸಿಬ್ಬಂದಿಗೆ ಮಾಹಿತಿ ಕೊಟ್ಟು, ಮುಂದಿನ ಕ್ರಮಕ್ಕೆ ನೆರವಾಗಬೇಕು ಎಂದು ಪರೋಕ್ಷವಾಗಿ ಡಿಜಿಸಿಎ ಎಚ್ಚರಿಸಿತ್ತು. ಈ ನೊಟೀಸ್ ನಂತರ ಪ್ರಯಾಣಿಕರ ಬಗ್ಗೆ ವೈಮಾನಿಕ ಕಂಪನಿಗಳ ಧೋರಣೆಯ ಬಗ್ಗೆ ಮಾಹಿತಿ ನೀಡಿದೆ.

    Verbattle
    Verbattle
    Verbattle
    delhi News
    Share. Facebook Twitter Pinterest LinkedIn Tumblr Email WhatsApp
    Previous Articleಸಾರಿಗೆ ನೌಕರರ ಪ್ರತಿಭಟನೆ.
    Next Article ಕೇಸ್ ಮುಚ್ಚಿ ಹಾಕಲು ಲಂಚ ಕೇಳಿದ CID ಅಧಿಕಾರಿ.
    vartha chakra
    • Website

    Related Posts

    ಕಾಂಗ್ರೆಸ್ ಶಾಸಕ ಅನರ್ಹ

    ಫೆಬ್ರವರಿ 17, 2026

    ಸತ್ತವಳು ಎದ್ದು ಬಂದಾಗ!

    ಫೆಬ್ರವರಿ 15, 2026

    ಕಪ್ಪೆ ವಿಷದಿಂದ ಪ್ರತಿಪಕ್ಷ ನಾಯಕನ ಹತ್ಯೆ!

    ಫೆಬ್ರವರಿ 15, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಕಾಂಗ್ರೆಸ್ ಶಾಸಕ ಅನರ್ಹ

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    ಮಹಾಶಿವರಾತ್ರಿ ವಿಶೇಷ: ‘ಶಿವ’ ಎಂದರೆ ಶೂನ್ಯವೂ ಹೌದು, ಅನಂತವೂ ಹೌದು!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Tracymix ರಲ್ಲಿ CM ಮತ್ತು DCM ಬದಲಾವಣೆ ಚರ್ಚೆಯಲ್ಲಿ ಇವರಿಲ್ಲವಂತೆ.
    • LinwoodGah ರಲ್ಲಿ ಸಫಾರಿ ಪ್ರಿಯರಿಗೆ ಸಿಹಿ ಸುದ್ದಿ
    • Tracymix ರಲ್ಲಿ ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್
    Latest Kannada News

    ಕಾಂಗ್ರೆಸ್ ಶಾಸಕ ಅನರ್ಹ

    ಫೆಬ್ರವರಿ 17, 2026

    CID ಪೊಲೀಸ್ ಮುಂದೆ ಬೈರತಿ ಬಸವರಾಜ್ ನರಳಾಟ

    ಫೆಬ್ರವರಿ 16, 2026

    ಬೆಂಗಳೂರು ಪೊಲೀಸ್ ಆಯುಕ್ತರನ್ನು ಬಿಡದ ಖದೀಮರು

    ಫೆಬ್ರವರಿ 16, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.