ಬೆಂಗಳೂರು,ಏ.11 – ಆಂತರಿಕ ಸಮೀಕ್ಷೆಗಳನ್ನು ಆಧರಿಸಿ, ಗೆಲ್ಲುವ ಮಾನದಂಡದೊಂದಿಗೆ, ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಸಂಸದೀಯ ಮಂಡಳಿ ಮುಂದಾಗಿರುವ ಹಿನ್ನೆಲೆಯಲ್ಲಿ ,ಕೆಲವು ಹಾಲಿ ಶಾಸಕರು ಮತ್ತು ಪ್ರಭಾವಿಗಳಿಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಇಂಥವರನ್ನು ಗುರುತಿಸಿರುವ ಕಾಂಗ್ರೆಸ್ ಅವರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ನಡೆಸಿದೆ.
ಪ್ರಮುಖವಾಗಿ, ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ನಾಯಕರನ್ನು ಕಾಂಗ್ರೆಸ್ ತನ್ನತ್ತ ಸೆಳೆಯುತ್ತಿದ್ದು, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದರ ನೇತೃತ್ವ ವಹಿಸಿದ್ದಾರೆ.
ಜನತಾ ಪರಿವಾರದಲ್ಲಿದ್ದು ಸದ್ಯ ಬಿಜೆಪಿಯಲ್ಲಿರುವ ತಮ್ಮ ಆಪ್ತರನ್ನು ಕಾಂಗ್ರೆಸ್ ಗೆ ಬರುವಂತೆ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಬೆಳಗಾವಿಯ ಅಥಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಪಟ್ಟು ಹಿಡಿದಿರುವ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದೆ. ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಇವರಿಗೆ ಟಿಕೆಟ್ ನೀಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದೆ. ವಿಧಾನಸಭೆಗೆ ಸ್ಪರ್ಧಿಸಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಲಕ್ಷ್ಮಣ ಸವದಿ ಇದೀಗ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

ತಮ್ಮ ಆಪ್ತರೊಂದಿಗೆ ಈ ಸಂಬಂಧ ಚರ್ಚೆ ನಡೆಸಿರುವ ಅವರು ಸಿದ್ದರಾಮಯ್ಯ ಅವರೊಂದಿಗೆ ಕೂಡ ಮಾತುಕತೆ ನಡೆಸಿದ್ದಾರೆ. ಇವರೊಂದಿಗೆ ಬಾಗಲಕೋಟೆಯಲ್ಲಿ ತೇರದಾಳದಲ್ಲಿ ಟಿಕೆಟ್ ಕೈತಪ್ಪಿದೆ ಎಂದು ಭಾವಿಸಿರುವ ಸಿದ್ದು ಸವದಿ ಹಾಗೂ ತಮಗೆ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕೇಳುತ್ತಿರುವ ಸಂಸದ ಕರಡಿ ಸಂಗಣ್ಣ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸುವೆ
ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಸವದಿ ಮತ್ತು ಕರಡಿ ಸಂಗಣ್ಣ, ಉತ್ತರ ಕರ್ನಾಟಕದ ಕೆಲ ಪ್ರಭಾವಿ ಲಿಂಗಾಯತ ಮುಖಂಡರು ಮುಖಂಡರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಕರಡಿ ಸಂಗಣ್ಣ ಸಂಸತ್ ಸದಸ್ಯರು ರಾಜೀನಾಮೆ ನೀಡಿ, ಕೊಪ್ಪಳದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ಪರ್ಧಿಸಿದರೆ, ಅವರ ಪುತ್ರ ಗವಿಸಿದ್ದ ಕರಡಿ ಅವರು ಲಿಂಗಸಗೂರಿನಿಂದ ಕಣಕ್ಕಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕಳೆದ 2004, 2008 ಹಾಗೂ 2013ರಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಸವದಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಹೇಶ ಕುಮಠಳ್ಳಿ ವಿರುದ್ಧ ಸೋತಿದ್ದರು. 2019ರಲ್ಲಿ ‘ಆಪರೇಷನ್ ಕಮಲ’ದ ಮೂಲಕ ಮಹೇಶ ಕುಮಠಳ್ಳಿ ಅವರನ್ನು ಬಿಜೆಪಿಗೆ ಕರೆತಂದು ಗೆಲ್ಲಿಸಲಾಗಿತ್ತು.
ಕ್ಷೇತ್ರ ಬಿಟ್ಟುಕೊಟ್ಟ ಕಾರಣಕ್ಕೆ ಸವದಿ ಅವರನ್ನು ವಿಧಾನ ಪರಿಷತ್‌ಗೆ ನೇಮಕ ಮಾಡಿ, ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಪ್ರಸಕ್ತ ಟಿಕೆಟ್‌ಗಾಗಿ ಕುಮಠಳ್ಳಿ ಹಾಗೂ ಸವದಿ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆಪರೇಷನ್ ಕಮಲದ ಸೂತ್ರಧಾರ ರಮೇಶ ಜಾರಕಿಹೊಳಿ ಕೂಡ ಕುಮಠಳ್ಳಿ ಪರ ಲಾಬಿ ನಡೆಸಿದ್ದರು.
ಈ ಲಾಭಿಯಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದು ಲಕ್ಷ್ಮಣ ಸವದಿ ಇದನ್ನು ತಮ್ಮ ಹಿನ್ನಡೆ ಎಂದು ಭಾವಿಸಿದ್ದಾರೆ. ಹೀಗಾಗಿ ರಾಜಕೀಯ ತೀರ್ಮಾನಕ್ಕೆ ಬಂದಿರುವ ಅವರು ಸಿದ್ದರಾಮಯ್ಯ ಅವರೊಂದಿಗಿನ ಆಪ್ತತೆ ಹಿನ್ನೆಲೆ ಅವರು ಕಾಂಗ್ರೆಸ್ ಸೇರಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕೇವಲ ಲಕ್ಷ್ಮಣ ಸವದಿ ಮಾತ್ರವಲ್ಲ ಕಿತ್ತೂರು ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ ಲಕ್ಷ್ಮಣ ಸವದಿ ಅವರ ಕೆಲ ಆಪ್ತರು ಕೂಡ ಇದೀಗ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲು ಸಚ್ಚಾಗಿದ್ದಾರೆ ಎಂದು ಗೊತ್ತಾಗಿದೆ.


1 ಟಿಪ್ಪಣಿ
australia cigerettes
Australian Cigarette Delivery stands as a trusted online tobacco retailer in the nation. Founded in 2024, the platform quickly earned customer trust through competitive pricing and fast shipping. The company prioritises customer convenience with: Free delivery across Australia, no base amount; Same-day dispatch for orders before 5:00 AM (GMT+11); Discreet packaging with no signs of contents; Flexible payments: USDT.
Why Choose Australian Cigarette Delivery? A licensed store dedicated to authentic products at competitive prices. All items comply with local regulations. Sales for adults 18+ only. The available labels include a wide selection: the brand — globally admired for refined taste (includes Red); Manchester — delicate to menthol blends; Benson & Hedges — premium with refined taste; the brand — British-origin with cultured experience; the brand — classic Asian brand with rich fragrance.
Common Questions: Delivery times? Orders before 5:00 AM (GMT+11) dispatched same day. Delivery takes 2–5 business days. Ship abroad? Delivery available only within the nation. Track orders? Tracking number provided via email after shipment. Payment methods? Accept USDT. All transactions processed securely. Refund policy? Refunds for defects only. Unopened items not returned for different decision. Cancel orders? Cancelled only before execution. Reach support? Available seven days. Questions via email, responses within hours.
Summary: Australia Cig Delivery distinguishes through authenticity and value. With same-day dispatch, free shipping and discreet packaging, it provides a reliable solution for adult smokers. Sales strictly for 18+ persons.