ಪ್ರತಿ ವರ್ಷ ಈದ್ ಸಂಭ್ರಮಕ್ಕೆ ಬಾಲಿವುಡ್ ಬ್ಯಾಡ್ ಭಾಯ್ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳಿಗೆ ಹೊಸ ಸಿನಿಮಾದ ಮೂಲಕ ರಸದೌತಣ ಉಣ ಬಡಿಸುತ್ತಾ ಬಂದಿದ್ದಾರೆ.
ಪ್ರತಿ ವರ್ಷ ಸಲ್ಲು ಬಾಯ್ ನ ಹೊಸ ಸಿನಿಮಾಗಾಗಿ ಆತನ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಾರೆ. ಸಿನಿಮಾ ರಿಲೀಸ್ ಆಗಿದೆ ತಡ ಥಿಯೇಟರ್ ಗಳಿಗೆ ಲಗ್ಗೆ ಹಾಕಿ ಸಲ್ಲು ಮಿಯಾನ ಆಕ್ಟಿಂಗ್ ನೋಡಿ ಸಂಭ್ರಮಿಸುತ್ತಾರೆ.
ಈ ಬಾರಿಯೂ ಇಂತಹದೇ ನಿರೀಕ್ಷೆ ಹುಟ್ಟಿಸಿದ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’.
ಸಲ್ಮಾನ್ ಖಾನ್, ಪೂಜಾ ಹೆಗ್ಡೆ, ಶಹನಾಜ್ ಗಿಲ್, ಜಗಪತಿ ಬಾಬು, ಭೂಮಿಕಾ ಚಾವ್ಲಾ, ತೆಲುಗಿನ ಸೂಪರ್ ಸ್ಟಾರ್ ಗಳಾದ ವೆಂಕಟೇಶ್, ರಾಮ್ ಚರಣ್ ತೇಜ, ರಾಘವ್ ಜುಯಾಲ್, ಪಲಕ್ ತಿವಾರಿ ನಟನೆಯ ಈ ಸಿನಿಮಾ ಥಿಯೇಟರ್ ಗೆ ಲಗ್ಗೆ ಹಾಕುವ ಮುನ್ನ ಬಾರಿ ಸದ್ದು ಮಾಡಿತ್ತು.
ಈ ವರ್ಷ ಈ ಸಿನಿಮಾ ಬಾಲಿವುಡ್ ನಲ್ಲಿ ಹೊಸ ದಾಖಲೆ ನಿರ್ಮಿಸಲಿದೆ ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದರು ಸಿನಿಮಾ ವಿತರಕರಂತೂ ಇದರ ಮೇಲೆ ಬಾರಿ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದರು.
ಆದರೆ ಮೊದಲ ದಿನವೇ ಎಲ್ಲ ನಿರೀಕ್ಷೆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ತಮಿಳಿನಾ ವೀರಂ ಸಿನಿಮಾದ ರಿಮೇಕ್ ಆಗಿರುವ ಇದು ಜನರನ್ನ ಆಕರ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದೇ ಹೇಳಬಹುದು. ಐಪಿಎಲ್ ಸೇರಿದಂತೆ ಹಲವಾರು ಕಾರಣಗಳನ್ನು ಮುಂದಿಡಬಹುದಾದರೂ ಈ ಸಿನಿಮಾಗೆ ಜನ ನಿರೀಕ್ಷಿತ ಪ್ರತಿಕ್ರಿಯೆ ನೀಡಿಲ್ಲ ಅಭಿಮಾನಿಗಳು ಕೂಡ ಸಲ್ಲುಮಿಯಾನ ಈ ಸಿನಿಮಾವನ್ನು ಅಷ್ಟಾಗಿ ಇಷ್ಟಪಟ್ಟಿಲ್ಲ ಹೀಗಾಗಿ ದೇಶದ ಬಹುತೇಕ ಎಲ್ಲಾ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸಿನಿಮಾ ಮಂದಿರಗಳು ಖಾಲಿ ಹೊಡೆಯುತ್ತಿವೆ.
ಸಿನಿಮಾ ವಿಮರ್ಶಕ ತರಣ್ ಆದರ್ಶ್ ಅವರು ಟ್ವೀಟ್ ಮಾಡಿ, ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಬಿಚ್ಚಿಟ್ಟಿದ್ದಾರೆ. “2010ರಿಂದ 2019ರ ವರೆಗೆ ಸಲ್ಮಾನ್ ಖಾನ್ ಅವರ ಸಿನಿಮಾಗಳು ಈದ್‌ಗೆ ರಿಲೀಸ್ ಆಗಿದ್ದು, ಅವುಗಳಿಗೆ ಹೋಲಿಕೆ ಮಾಡಿ ನೋಡಿದರೆ ಈ ಚಿತ್ರ ಕಮ್ಮಿ ಕಲೆಕ್ಷನ್ ಮಾಡಿದೆ. ಮೊದಲ ದಿನ 15.81 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ” ಎಂದು ಹೇಳಿದ್ದಾರೆ
5 ಪ್ರತಿಕ್ರಿಯೆಗಳು
вызов нарколога на дом частная скорая помощь вызов нарколога на дом частная скорая помощь .
Кодирование от алкоголизма цена в Алматы kodirovanie-ot-alkoholizma-v-almaty.kz .
вип проститутки https://www.drive-models.ru .
view instagram stories http://www.anon-story-view.com .
instagram viewer online instagram viewer online .