ಹೈದರಾಬಾದ್ – ಟಾಲಿವುಡ್ ಸೂಪರ್ ಸ್ಟಾರ್ ಸಾಯಿ ಧರ್ಮತೇಜ (Sai Dharmateja) ಯಾರಿಗೆ ಗೊತ್ತಿಲ್ಲ ಹೇಳಿ.. ಮೆಗಾಸ್ಟಾರ್ ಚಿರಂಜೀವಿ ಅವರ ಸೋದರ ಸಂಬಂಧಿಯಾದ ಈ ನಟ, ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆ ಉಳ್ಳ ಸ್ಟಾರ್.
ಇವರ ಅನೇಕ ಸಿನಿಮಾಗಳು ಸೂಪರ್ ಹಿಟ್. ಹೀಗಾಗಿ ತೆಲುಗು ಚಿತ್ರರಂಗದಲ್ಲಿ ಇತ್ತೀಚಿನ ಟ್ರೆಂಡ್ ಸಾಯಿ ಧರ್ಮತೇಜ ಎನ್ನುವಂತಾಗಿದೆ.
ಅಷ್ಟೇ ಅಲ್ಲ ಇವರು ಅತ್ಯಂತ ಪ್ರತಿಭಾನ್ವಿತ ನಟ ಕೂಡ. ಇಂತಹ ನಟನಿಗೆ, ಬೈಕುಗಳ ಬಗ್ಗೆ ವಿಶೇಷ ಆಸಕ್ತಿ. ಅತ್ಯಾಧುನಿಕ ಬೆಲೆಬಾಳುವ ಬೈಕ್ ಗಳಲ್ಲಿ ಸವಾರಿ ಮಾಡುವುದೆಂದರೆ ಈ ನಟನಿಗೆ ಎಲ್ಲಿಲ್ಲದ ಖುಷಿ.
ಇಂತಹ ಕ್ರೇಜಿಗೆ ಸಿಲುಕಿರುವ ನಟ ಸಾಯಿ ಸಿದ್ದಾರ್ಥ್ ಎರಡು ವರ್ಷದ ಹಿಂದೆ ವಿಜಯ ದಶಮಿ ಹಬ್ಬದ ದಿನ ಅತ್ಯಂತ ವೇಗವಾಗಿ ಬೈಕ್ ಚಲಾಯಿಸುತ್ತಾ ಹೋಗುತ್ತಿದ್ದರು. ಈ ವೇಳೆ ಅವರ ಬೈಕ್ ಸ್ಕಿಡ್ ಆಗಿ ಉರುಳಿ ಬಿದ್ದಿತ್ತು ನಟ ಗಂಭೀರವಾಗಿ ಗಾಯಗೊಂಡು ಹಲವು ದಿನಗಳ ಕಾಲ ಕೋಮಾದಲ್ಲಿದ್ದರು. ಈ ನಟ ಶೀಘ್ರವಾಗಿ ಚೇತರಿಸಿಕೊಂಡು ಮಾಮೂಲಿಯಂತಾಗಬೇಕು ಎಂದು ಆತನ ಅಭಿಮಾನಿಗಳು ವಿಶೇಷ ಪೂಜೆ, ಪುನಸ್ಕಾರ, ಹೋಮ, ಹವನಗಳನ್ನು ನಡೆಸಿದ್ದರು. (Sai Dharmateja)
ಈ ಎಲ್ಲರ ಹಾರೈಕೆ ಪೂಜೆಗೆ ತಕ್ಕ ಪ್ರತಿಫಲವೆಂಬಂತೆ ಚೇತರಿಸಿಕೊಂಡ ನಟ ಮತ್ತೆ ಸಿನಿಮಾ ಜಗತ್ತಿಗೆ ಮರಳಿದ್ದಾನೆ.
ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನಟ ತಾನು ಅಪಘಾತಕ್ಕೀಡಾದ ಘಟನೆಯನ್ನು ಸ್ಮರಿಸಿದ್ದಾನೆ. ಅಲ್ಲದೆ ಅಂದು ತಾನು ಅಪಘಾತ ದಿಂದ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾಗ ತಕ್ಷಣವೇ ತನ್ನನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅಬ್ದುಲ್ ಎಂಬ ಯುವಕ ಮರುಜನ್ಮ ನೀಡಿದ್ದಾನೆ. ಆತನಿಗೆ, ನಾನು ಜೀವಮಾನವಿಡಿ ಕೃತಜ್ಞನಾಗಿದ್ದೇನೆ. ಅಬ್ದುಲ್ ಗೆ ನನ್ನ ಖಾಸಗಿ ಮೊಬೈಲ್ ನಂಬರ್ ನೀಡಿದ್ದು ನಿನ್ನ ಜೊತೆ ನಾನು ಸದಾ ಕಾಲ ಇದ್ದೇನೆ ನಿನಗೆ ಯಾವುದೇ ಕ್ಷಣ ಯಾವುದೇ ಸಮಸ್ಯೆ ಆದರೂ ಸರಿ ನಾನು ನೆರವಿಗೆ ಧಾವಿಸುತ್ತೇನೆ ಅಷ್ಟೇ ಅಲ್ಲ ನನ್ನ ಇಡೀ ಕುಟುಂಬ ನಿನ್ನ ನೆರವಿಗಿದೆ ಎಂದು ಹೇಳಿರುವುದಾಗಿ ತಿಳಿಸಿದರು. ಇದಾದ ನಂತರ ಅಸಲಿ ಕಹಾನಿ ಆರಂಭವಾಗುತ್ತದೆ ಸ್ಟಾರ್ ನಟನ ಅತ್ಯಂತ ಆಪ್ತನಾಗಿದ್ದಾನೆ ಎಂಬ ಕಾರಣಕ್ಕೆ ಅಬ್ದುಲ್ಲಾ ಕೆಲಸ ಮಾಡುತ್ತಿದ್ದ ಸಂಸ್ಥೆ ಆತನನ್ನು ಕೆಲಸದಿಂದ ತೆಗೆದು ಹಾಕುತ್ತದೆ ಇದಾದ ನಂತರ ಆತನಿಗೆ ಸರಣಿ ಸಮಸ್ಯೆಗಳು ಎದುರಿಗುತ್ತವೆ. (Sai Dharmateja)
ಅಬ್ದುಲ್ಲಾ ತನ್ನ ನೋವನ್ನು ಖಾಸಗಿ ಟಿವಿ ವಾಹಿನಿಯೊಂದರ ಮುಂದೆ ಹೇಳಿಕೊಂಡಿದ್ದಾನೆ. ಸಾರ್ವಜನಿಕ ಸಭೆಯಲ್ಲಿ ಸಾಯಿ ಧರ್ಮತೇಜ ನನಗೆ ಮೊಬೈಲ್ ನಂಬರ್ ಕೊಟ್ಟಿರುವುದಾಗಿ ಹೇಳಿದ್ದಾರೆ ಆದರೆ ಅದು ಸುಳ್ಳು ಇಲ್ಲಿಯವರೆಗೆ ನಾನು ಅವರನ್ನು ಭೇಟಿಯಾಗಿಲ್ಲ. ಆದರೆ, ನನ್ನ ಸಂಬಂಧಿಗಳು ಮತ್ತು ಸ್ನೇಹಿತರು ನನಗೆ ಸಾಯಿ ಧರ್ಮತೇಜ ಮತ್ತವರ ಕುಟುಂಬದ ಸದಸ್ಯರಾದ ಮೆಗಾಸ್ಟಾರ್ ಚಿರಂಜೀವಿ ಪವನ್ ಕಲ್ಯಾಣ್ ಸೇರಿದಂತೆ ಅಪಾರ ಪ್ರಮಾಣ ಹಣ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ ಅಲ್ಲದೆ ಪ್ರತಿನಿತ್ಯ ನನಗೆ ಕರೆ ಮಾಡಿ ಆರ್ಥಿಕ ಸಹಾಯ ಮಾಡು ಎಂದು ಗೋ ಗರೆಯುತ್ತಿದ್ದಾರೆ. ವಾಸ್ತವವಾಗಿ ಇರುವ ಕೆಲಸ ಕಳೆದುಕೊಂಡು ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದೇನೆ. ಮೊನ್ನೆಯಷ್ಟೇ, ಹೊಸ ಕೆಲಸ ಸಿಕ್ಕಿದೆ ಆದರೆ ಮಾಡಿದ ಸಹಾಯಕ್ಕೆ ಯಾವುದೇ ಪ್ರತಿಫಲವೂ ಇಲ್ಲದೆ ಅಪಪ್ರಚಾರದಿಂದ ಜರ್ಜರಿತನಾಗಿದ್ದೇನೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ. (Sai Dharmateja)
Also read
Auto, Two-wheeler Ban ಎಲ್ಲಿ ಗೊತ್ತಾ? (Bengaluru-Mysuru expressway)