ಬೆಂಗಳೂರು – ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ರಂಗು ಬಂದಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ವಿರುದ್ಧ ಇದೀಗ ಪಕ್ಷಿಯರೇ ತಿರುಗಿಬಿದ್ದಿದ್ದಾರೆ.
ಕಾಂಗ್ರೆಸ್ ಈ ಬಾರಿ ಬಹುಮತ ಗಳಿಸುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಇದಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುರ್ಜೇವಾಲ ಅವರು ಅನುಸರಿಸುತ್ತಿರುವ ತಂತ್ರಗಾರಿಕೆಗಯೇ ಪ್ರಮುಖ ಕಾರಣ ಎಂದು ಬಣ್ಣಿಸಲಾಗಿತ್ತು ಆದರೆ ಇದೀಗ ಅವರ ಒಂದು ನಡೆ ಕಾಂಗ್ರೆಸ್ ಗೆಲುವಿನ ಸಾಧ್ಯತೆಯನ್ನು ಕ್ಷೀಣಿಸುವಂತೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಕರ್ನಾಟಕದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಉತ್ತಮ ಆರಂಭ ಮಾಡಬೇಕು ಎಂಬ ತಂತ್ರ ಮಾಡಿರುವ ಕಾಂಗ್ರೆಸ್ ಅತ್ಯಂತ ವ್ಯವಸ್ಥಿತವಾಗಿ ಕರ್ನಾಟಕದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ ಪ್ರಚಾರದ ವೈಖರಿಯಂತೂ ಈ ಹಿಂದೆ ಯಾವುದೇ ಚುನಾವಣೆಯಲ್ಲಿ ಅನುಸರಿಸಿದ ರೀತಿಯಲ್ಲಿ ಇಲ್ಲ. ಇಡೀ ಚುನಾವಣೆ ಪ್ರಚಾರದ ಅಖಾಡದಲ್ಲಿ ಒಮ್ಮೆಯೂ ಭಾವನಾತ್ಮಕ ಅಂಶಗಳ ಬಗ್ಗೆ ಚಕಾರ ಎತ್ತಿಲ್ಲ ಅಲ್ಪಸಂಖ್ಯಾತ ಸಮುದಾಯವನ್ನು ಅತಿಯಾಗಿ ಓಲೈಸುವ ಮಾತನಾಡಿಲ್ಲ ಈ ಮೂಲಕ ಬಹು ಸಂಖ್ಯಾತ ಮತಗಳ ಕ್ರೋಢೀಕರಣಕ್ಕೆ ಬಿಜೆಪಿ ಮಾಡುತ್ತಿದ್ದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ ಉಂಟಾಗುವಂತೆ ಮಾಡಿತ್ತು. ಈ ಎಲ್ಲವೂ ಕಾಂಗ್ರೆಸ್ ನ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿದ್ದವು ಎಂಬ ವಿಶ್ಲೇಷಣೆಗಳು ಕೇಳಿ ಬಂದಿದ್ದವು. (Randeep Singh Surjewala)
ಇಂತಹ ಯಶಸ್ವಿ ತಂತ್ರಗಾರಿಕೆಯನ್ನು ರೂಪಿಸಿದ ಸುರ್ಜೆವಾಲ (Randeep Singh Surjewala) ಕೊನೆಯ ಹಂತದಲ್ಲಿ ಎಡವಿದರಾ ಎಂಬ ಪ್ರಶ್ನೆಗಳು ಕೇಳಿಬಂದಿವೆ ಅದು ಪ್ರಣಾಳಿಕೆಯಲ್ಲಿ ಹೇಳಿರುವ ಭಜರಂಗದಳ ನಿಷೇಧ ಎಂಬ ಪ್ರಸ್ತಾಪ ಕಾಂಗ್ರೆಸ್ ಪಾಲಿಗೆ ದುಬಾರಿ ಆಗಲಿದೆ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.
ಬಿಜೆಪಿ ತಾನಾಗಿಯೇ ಯಾವುದನ್ನು ಮಾಡುವುದಿಲ್ಲ ಕಾಂಗ್ರೆಸ್ ತಪ್ಪು ಮಾಡುವುದನ್ನು ಕಾಯುತ್ತದೆ ಆನಂತರ ಆ ತಪ್ಪನ್ನು ಎತ್ತಿ ತೋರಿಸುವ ಮೂಲಕ ತನ್ನ ಪರವಾಗಿ ಅಲೆ ಏಳುವಂತೆ ಮಾಡುತ್ತದೆ ಎಂಬ ಅಭಿಪ್ರಾಯಕ್ಕೆ ತಕ್ಕಂತೆ ಈಗಿನ ಬೆಳವಣಿಗೆ ನಡೆದಿದೆ.
ಯಾವಾಗ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ವಿಷಯ ಪ್ರಸ್ತಾಪ ಮಾಡಿತೋ ಆ ಕ್ಷಣವೇ ಬಿಜೆಪಿಯ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದು ಪ್ರಣಾಳಿಕೆಯಲ್ಲಿ ಈ ಅಂಶ ಸೇರುವಂತೆ ಮಾಡಿದ ಸುರ್ಜೇವಾಲಾ (Randeep Singh Surjewala) ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಿ ಎಫ್ ಐ ಅನ್ನು ನಿಷೇಧಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಇದೇ ಆಧಾರದಲ್ಲಿ ಕಾಂಗ್ರೆಸ್ ಭಜರಂಗದಳವನ್ನು ನಿಷೇಧಿಸಿದರೆ, ನಮಗೆ ಅನುಕೂಲವಾಗಲಿದೆ ಎನ್ನುವುದು ಸುರ್ಜೇವಾಲ ಅವರ ಲೆಕ್ಕಾಚಾರ ಆದರೆ ಅದೇ ಇದೀಗ ತಿರುಗುಬಾಣವಾದಂತಾಗಿದೆ. (Randeep Singh Surjewala)
ಯಾವಾಗ ಕಾಂಗ್ರೆಸ್ಸಿನ ಘೋಷಣೆ ಹೊರ ಬಿತ್ತೋ ಮರುಕ್ಷಣವೇ ಎದ್ದು ನಿಂತ ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದಾರೆ. ಭಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್ ದೇಶ ಬಿಟ್ಟು ಹೋಗಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರೆ ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯಕರ್ತರು “ನಾನೊಬ್ಬ ಕನ್ನಡಿಗ,ನನ್ನ ನಾಡು ಹನುಮ ಜನಿಸಿದ ನಾಡು ನಾನೊಬ್ಬ ಬಜರಂಗಿ” ಎಂದು ಹೇಳುತ್ತಾ ಇದನ್ನು ತಮ್ಮ ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. (Randeep Singh Surjewala)
ಈ ಪ್ರಚಾರ ತಂತ್ರ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಲಿದೆ ಎನ್ನಲಾಗಿತ್ತಿದ್ದು,ಇದಕ್ಕೆ ಕಾರಣರಾದ ಸುರ್ಜೇವಾಲಾ ತಮ್ಮ ಪಕ್ಷದ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. (Randeep Singh Surjewala)
Also read.
1 ಟಿಪ್ಪಣಿ
Начните экономить с нашим промокодом прямо сейчас! http://www.free-promocode.ru/ .