ಬೆಂಗಳೂರು – ದೇಶಾದ್ಯಂತ ದೇಶಾದ್ಯಂತ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲು ಹಲವಾರು ತಂತ್ರ ರೂಪಿಸಿದರೂ ಮತದಾರರು ಒಲಿಯಲಿಲ್ಲ.
ಹಳೆ ಮೈಸೂರು ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಿ ಪ್ರಧಾನಿ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರು ಬಿರುಸಿನ ಪ್ರಚಾರ ನಡೆಸಿ ಬಿಜೆಪಿ ಪರವಾದ ಅಲೆ ಎಬ್ಬಿಸಲು ನಡೆಸಿದ ಪ್ರಯತ್ನ ಸಂಪೂರ್ಣ ವಿಫಲವಾಗಿದೆ.
ಫಲಿತಾಂಶದ ಬಗ್ಗೆ ಬಿಜೆಪಿ ಪಾಳಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಕೆಲವೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದವಾಯಿತು. ಅನೇಕ ಕ್ಷೇತ್ರಗಳಲ್ಲಿ ಕೆಲವೇ ಕೆಲವು ನೂರು ಮತಗಳ ಅಂತರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ ರಾಜ್ಯದಲ್ಲಿಡೆ ಬಿಜೆಪಿಯ ಬಗ್ಗೆ ಅಪಾರವಾದ ಒಲವು ಹೊಂದಿದ್ದಾರೆ ಎಂದೆಲ್ಲಾ ಹೇಳುತ್ತಿದ್ದಾರೆ.
ಸಂಘ ಪರಿವಾರದ ಹಿರಿಯ ನಾಯಕ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಂತೂ ರಾಜ್ಯದ ಮುವತ್ತು ಸಾವಿರಕ್ಕೂ ಅಧಿಕ ಬೂತ್ ಗಳಲ್ಲಿ ಬಿಜೆಪಿ ಅತಿ ಹೆಚ್ಚಿನ ಮತಗಳನ್ನು ಗಳಿಸಿದೆ ಎಂದಲ್ಲ ಹೇಳಿದ್ದಾರೆ ಆದರೆ ವಾಸ್ತವವಾಗಿ ಬಿಜೆಪಿ ಅಭ್ಯರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ.
ಬಹುತೇಕ ಕಡೆ ಸೋತಿರುವ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಗೆಲುವು ಸಾಧಿಸಿರುವ ಅಭ್ಯರ್ಥಿಗಳ ಮತಗಳ ಅಂತರ ಕೆಲವೇ ಕೆಲವು ನೂರು ಮತಗಳು ಮಾತ್ರ ಬೆಂಗಳೂರಿನ ಗಾಂಧಿನಗರದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಅಂತರ ಅತ್ಯಂತ ಕಡಿಮೆ ಇದೆ ಉಳಿದಂತೆ ಬಿಜೆಪಿ ಗೆದ್ದಿರುವ ಬಹುತೇಕ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದ್ದಾರೆ.
ಗುಜರಾತ್ ಹಾಗೂ ಉತ್ತರ ಪ್ರದೇಶ ಮಾದರಿ ಮೂಲಕ ಹೊಸ ಮುಖಗಳಿಗೆ ಮಣೆಹಾಕಿದ್ದ ಕೇಸರಿ ಪಡೆಯ ಹಲವಾರು ಅಭ್ಯರ್ಥಿಗಳು ಕನಿಷ್ಟ ಪಕ್ಷ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಂದು ಕಡೆ ಆಡಳಿತ ವಿರೋಧಿ ಆಲೆ, ಮತ್ತೊಂದು ಕಡೆ ಜನರ ಆಕ್ರೋಶಕ್ಕೆ ಸಿಲುಕಿ ಬಿಜೆಪಿಯ 38 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ
ಠೇವಣಿ ಕಳೆದುಕೊಂಡವರು-
ಗುರುಮಿಠಕಲ್ – ಲಲಿತ ಅನಪೂರ್ -14488
ಬೀದರ್ – ಈಶ್ವರ್ ಸಿಂಗ್ ಠಾಕೂರ್ -17505
ಹಗರಿಬೊಮ್ಮನಹಳ್ಳಿ -ಬಿ.ರಾಮಣ್ಣ -26696
ಚಳ್ಳಕೆರೆ -ಅನಿಲ್ ಕುಮಾರ್ -22737
ಚನ್ನಗಿರಿ -ಶಿವಕುಮಾರ್ -21229
ಭದ್ರಾವತಿ – ಮಂಗೋಟಿ ರುದ್ರೇಶ್ -21014
ಕೊರಟಗೆರೆ -ಅನಿಲ್ ಕುಮಾರ್ -23804
ಪಾವಗಡ -ಕೃಷ್ಣ ನಾಯಕ್ -7098
ಮಧುಗಿರಿ -ಎಲ್.ಸಿ.ನಾಗರಾಜ್ -15461
ಗೌರಿಬಿದನೂರು -ಡಾ.ಶಶಿಧರ್ -8024
ಶಿಡ್ಲಘಟ್ಟ -ರಾಮಚಂದ್ರ ಗೌಡ -15349
ಚಿಂತಾಮಣಿ -ವೇಣು ಗೋಪಾಲ್ -21462
ಶ್ರೀನಿವಾಸಪುರ -ಗುಂಜೂರು ಶ್ರೀನಿವಾಸ್ ರೆಡ್ಡಿ -6524
ಮುಳಬಾಗಿಲು -ಶೀಗೆಹಳ್ಳಿ ಸುಂದರ್ -9036
ಬಂಗಾರಪೇಟೆ -ಎಂ.ನಾರಾಯಣಸ್ವಾಮಿ -8617
ಪುಲಕೇಶಿನಗರ -ಮುರಳಿ -10585
ಮಾಗಡಿ -ಪ್ರಸಾದ್ ಗೌಡ -20073
ರಾಮನಗರ -ಗೌತಮ್ ಗೌಡ -12821
ಕನಕಪುರ -ಆರ್.ಅಶೋಕ್ -19602
ಮಳವಳ್ಳಿ -ಮುನಿರಾಜು -24910
ಮದ್ದೂರು -ಎಸ್.ಪಿ.ಸ್ವಾಮಿ -28650
ಮೇಲುಕೋಟೆ -ಇಂದ್ರೇಶ್ ಕುಮಾರ್ -6378
ನಾಗಮಂಗಲ -ಸುಧಾ ಶಿವರಾಮ್ -7683
ಶ್ರವಣಬೆಳಗೊಳ -ಚಿದಾನಂದ -5585
ಅರಸೀಕೆರೆ -ಜಿ.ವಿ.ಬಸವರಾಜು -6456
ಹೊಳೆನರಸೀಪುರ -ದೇವರಾಜೇಗೌಡ -4764
ಅರಕಲಗೂಡು -ಯೋಗ ರಮೇಶ್ -19385
ಪಿರಿಯಾಪಟ್ಟಣ -ಸಿ.ಎಚ್.ವಿಜಯಶಂಕರ್ -7297
ಕೃಷ್ಣರಾಜನಗರ – ವೆಂಕಟೇಶ್ ಹೊಸಳ್ಳಿ – 2337
ಹುಣಸೂರು -ದೇವರಹಳ್ಳಿ ಸೋಮಶೇಖರ್ -6215
ಟಿ.ನರಸೀಪುರ -ರೇವಣ್ಣ -20252
Previous ArticleBJP ವಿರುದ್ಧ ಪ್ರತಿಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ
Next Article ವಿದ್ಯುತ್ ಬಿಲ್ ಕಟ್ಟೋಲ್ಲ ಅಂತಾರೆ – ಏನು ಮಾಡೋದು?