ಬೆಂಗಳೂರು,ಮೇ. 30- ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ .
ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಗುಪ್ತಚರದಳದ ಮುಖ್ಯಸ್ಥರಾಗಿದ್ದ ಬಿ.ದಯಾನಂದ್ ಅವರನ್ನು ನೇಮಕ ಮಾಡಿದೆ. ಇಲ್ಲಿಯವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ
ಆಯುಕ್ತರಾಗಿದ್ದ ಸಿಎಚ್ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ
ಇಲ್ಲಿವರೆಗೂ ಬೆಂಗಳೂರು ಪೊಲೀಸ್ ಸಂಚಾರಿ ವಿಭಾಗದ ವಿಶೇಷ ಆಯುಕ್ತರಾಗಿ ಕೆಲಸ ಮಾಡುತ್ತಿದ್ದ ಎಡಿಜಿಪಿ ಎಂಎ ಸಲೀಂ ಅವರಿಗೆ ಬಡ್ತಿ ನೀಡಿ ಸಿಐಡಿ ವಿಭಾಗದ ಡಿಜಿಪಿ ಆಗಿ ನೇಮಿಸಲಾಗಿದೆ. ಇಲ್ಲಿಯವರೆಗೆ ಸಿಐಡಿ ಮುಖ್ಯಸ್ಥರಾಗಿದ್ದ ಶರತ್ ಚಂದ್ರ ಅವರನ್ನು ಗುಪ್ತದಳದ ಮುಖ್ಯಸ್ಥರನ್ನಾಗಿ ವರ್ಗಾಯಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ದಯಾನಂದ ಅವರು ಈ ಹಿಂದೆ ನಗರದಲ್ಲಿ ಸಿಸಿಬಿಯ ಜಂಟಿ ಆಯುಕ್ತರಾಗಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಬಳ್ಳಾರಿಯ ಹರಪನಹಳ್ಳಿ ಮೂಲದ 1994 ನೇ ಸಾಲಿನ ರಾಜ್ಯ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಹಿರಿಯ ಕೆಎಎಸ್ ಅಧಿಕಾರಿ ದಿ. ಅಷ್ಟಮೂರ್ತಿ ಅವರ ಪುತ್ರರಾಗಿರುವ ದಯಾನಂದ್ ನಿಷ್ಠೆ ಪ್ರಮಾಣಿಕತೆ ದಕ್ಷತೆಗೆ ಹೆಸರಾದವರು.
ದಯಾನಂದ ಅವರು ಮಂಗಳೂರು, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಎಸ್ ಪಿಯಾಗಿ ಮೈಸೂರು ಪೊಲೀಸ್ ಆಯುಕ್ತರಾಗಿ,ಸಾರಿಗೆ ಕಮೀಷನರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷದ ಆಡಳಿತದಲ್ಲೂ ಉತ್ತಮ ಸ್ಥಾನಗಳನ್ನು ನೀಡಲಾಗಿತ್ತು. ಎಲ್ಲರಿಗೂ ನಂಬಿಕರ್ಹ, ದಕ್ಷ ಅಧಿಕಾರಿ ಎನ್ನಿಸಿಕೊಂಡಿದ್ದಾರೆ. ಗೃಹ ಇಲಾಖೆಗೆ ಸೇರಿದ್ದರೂ ಗುಪ್ತಚರ ಇಲಾಖೆಯನ್ನು ಮುಖ್ಯಮಂತ್ರಿ ತಾವೇ ಇಟ್ಟುಕೊಳ್ಳುತ್ತಾರೆ. ಈ ಇಲಾಖೆಗೆ ತಮ್ಮ ಅತ್ಯಂತ ನಂಬಿಕರ್ಹ ಅಧಿಕಾರಿಯನ್ನಷ್ಟೆ ನೇಮಿಸಿಕೊಳ್ಳಲಾಗುತ್ತದೆ.
ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿಯವರ ಅವಧಿಯಲ್ಲಿ ಮೂವರು ಸಿಎಂಗಳಿಗೂ ಇತ್ತೀಚೆಗೆ ಬಸವರಾಜ ಬೊಮ್ಮಾಯಿ ಅವರಿಗೂ ಗುಪ್ತಚರ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯನ್ನು ದಯಾನಂದ ಹೊಂದಿದ್ದಾರೆ.
ಗುಪ್ತಚರ ದಳಕ್ಕೆ ಚಂದ್ರ:
ದಯಾನಂದ ಅವರಿಂದ ತೆರವಾಗಿರುವ ಗುಪ್ತಚರ ದಳಕ್ಕೆ ಮುಖ್ಯಸ್ಥರಾಗಿ ಎಡಿಜಿಪಿ ಶರತ್ ಚಂದ್ರ ಅವರನ್ನು ನಿಯೋಜಿಸಲಾಗಿದೆ.
ಮಂಡ್ಯ ಜಿಲ್ಲೆಯ ಕಿಕ್ಕೇರಿ ಮೂಲದ ಶರತ್ ಚಂದ್ರ ಅವರು 1997 ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿದ್ದು ನಗರದಲ್ಲಿ ಡಿಸಿಪಿ ಬಳ್ಳಾರಿ, ಕೊಡಗು,ಹಾಸನಗಳಲ್ಲಿ ಎಸ್ ಪಿಯಾಗಿ ನಗರದಲ್ಲಿ ಜಂಟಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಗುಪ್ತಚರ ದಳದ ಐಜಿಪಿಯಾಗಿ ಸೇವೆ ಸಲ್ಲಿಸಿದ್ದಾರೆ.
ಶರತ್ ಚಂದ್ರ ಅವರು ದಕ್ಷ ಪ್ರಮಾಣಿಕ ನಿಷ್ಠಾವಂತ ಅಧಿಕಾರಿಯಾಗಿದ್ದು ಇಲಾಖೆಯ ಹಲವು ಸವಾಲುಗಳನ್ನು ಸಮರ್ಥ ವಾಗಿ ನಿಭಾಯಿಸಿದ್ದಾರೆ ದಯಾನಂದ ಹಾಗೂ ಶರತ್ ಚಂದ್ರ ಅವರು ಕನ್ನಡಿಗರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಒಟ್ಟಾರೆ ನಾಲ್ವರು ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Previous ArticleIslamನ ಚೀನೀಕರಣಕ್ಕೆ ಮುಂದಾದ China ಸರ್ಕಾರ
Next Article ಗೃಹಬಳಕೆಗೆ ಫ್ರೀ ಕರೆಂಟ್