ಬೆಂಗಳೂರು,ಸೆ.17-ಕೋಳಿಫಾರಂ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಶಂಕಾಸ್ಪದವಾಗಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಬಳಿಯ ಹೊಲೆಯರಹಳ್ಳಿ ಬಳಿ ನಡೆದಿದೆ.
ನೇಪಾಳ ಮೂಲದವರಾದ ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ (16) ಮೃತಪಟ್ಟವರು.
ಸ್ಮಶಾನ ರಸ್ತೆಯಲ್ಲಿರುವ ಕೋಳಿ ಫಾರಂನಲ್ಲಿ 8 ದಿನಗಳ ಹಿಂದೆಯಷ್ಟೇ ಕೆಲಸ ಅರಸಿ ಕುಟುಂಬ ಸಮೇತ ಬಂದಿದ್ದರು.ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು ಇಂದು ಬೆಳಗ್ಗೆ ನೋಡಿದಾಗ ಮಲಗಿದ್ದಂತೆಯೇ ಎಲ್ಲರೂ ಶವವಾಗಿ ಪತ್ತೆಯಾಗಿದ್ದಾರೆ.
ಬೆಳಗ್ಗೆ ಕೋಳಿ ಫಾರಂ ಮಾಲೀಕ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ, ಇದರಿಂದ ಅನುಮಾನಗೊಂಡು ಪಕ್ಕದ ಊರಿನ ಕೋಳಿ ಫಾರಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೃತರ ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಅವರು ಶೆಡ್ ಕಿಟಕಿ ಬಳಿ ಹೋಗಿ ನೋಡಿದಾಗ, ಮಲಗಿದ್ದವರು ಮಲಗಿದ್ದಂತೆಯೇ ಸಾವನ್ನಪ್ಪಿರುವುದು ಕಂಡುಬಂದಿದೆ .
ಸೊಳ್ಳೆ ಕಾಟ ಎಂದು ಕುಟುಂಬಸ್ಥರು ಇದ್ದಿಲು ಮೂಲಕ ಹೊಗೆ ಹಾಕಿದ್ದರು. ಶೆಡ್ ನ ಕಿಟಕಿ ಬಾಗಿಲು ಸಂಪೂರ್ಣ ಮುಚ್ಚಿದ ಹಿನ್ನೆಲೆಯಲ್ಲಿ ಹೊಗೆ ತುಂಬಿಕೊಂಡಿದೆ. ಕೋಣೆ ತುಂಬಾ ಹೊಗೆ ತುಂಬಿಕೊಂಡು ಆಮ್ಲಜನಕದ ಕೊರತೆಯಿಂದ ನಾಲ್ವರು ಸಾವನ್ನಪ್ಪಿರುವ ಶಂಕೆ ಎದುರಾಗಿದೆ. ನಾಲ್ವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


3 ಪ್ರತಿಕ್ರಿಯೆಗಳು
Betano https://betanogame.org/el/mobile-app/ ОєО±О»П‰ПѓОїПЃОЇО¶ОµО№ ОЅО№ОєО·П„ОП‚. О›О¬ОІОµ 100% ОП‰П‚ €500 + ОґП‰ПЃОµО¬ОЅ ПЂОµПЃО№ПѓП„ПЃОїП†ОП‚ ПѓП„О·ОЅ ПЂПЃПЋП„О· ПѓОїП… ОєО±П„О¬ОёОµПѓО·. О‘ПЂПЊО»О±П…ПѓОµ П„О·ОЅ ПЂО№Ої ОїОјО±О»О® ОµОјПЂОµО№ПЃОЇО± ОєО±О¶ОЇОЅОї ОјОµ ОєОїПЃП…П†О±ОЇО± О±ПѓП†О¬О»ОµО№О± ОєО±О№ ОіПЃО®ОіОїПЃО· П…ПЂОїПѓП„О®ПЃО№ОѕО·. О О±ОЇОѕОµ П„ПЋПЃО±.
+125% de bГґnus + 250 giros grГЎtis? SГі tem no Mostbet – https://mostbetpt.pro/ , Entre no Mostbet e transforme R$100 em R$225 para jogar imediatamente .
Your shadow just cashed out bigger than you – https://phenytoinbuy.com , Turn the night into pure adrenaline — start winning today .