ಬೆಂಗಳೂರು, ಸೆ.19- ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದ ಜನತೆಗೆ ನೀಡಿದ್ದ ಪಂಚ ಗ್ಯಾರಂಟಿಗಳ ಭರವಸೆ ಈಡೇರಿಸಲು ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಲು ಪರದಾಡುತ್ತಿರುವ ರಾಜ್ಯ ಸರ್ಕಾರ ಇದಕ್ಕಾಗಿ ಈಗ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಲು ತೀರ್ಮಾನಿಸಿದೆ.
ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಳದಿಂದ ಮುದ್ರಾಂಕ ಹಾಗೂ ನೊಂದಣಿ ಶುಲ್ಕ ದರ ಹೆಚ್ವಳವಾಗಲಿದೆ ಇದರಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ಹೆಚ್ಚಳವಾಗಲಿದೆ.
ಮಾರ್ಗಸೂಚಿ ದರ ಹೆಚ್ಚಳ ನಿರ್ಧಾರದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಜ್ಯದಲ್ಲಿ ಅಕ್ಟೋಬರ್ ಒಂದರಿಂದ ಸ್ಥಿರಾಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷ್ಕರಣೆಯಾಗಲಿದೆ ಎಂದು ಹೇಳಿದರು
ಪ್ರತಿವರ್ಷ ಆಸ್ತಿ ನೊಂದಣಿ ಮಾರ್ಗಸೂಚಿ ದರ ಪರಿಷಕರಣೆ ಮಾಡಬೇಕ ಎಂಬ ನಿಯಮ ಇದೆ.
ಅದರಂತೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಖಂಡಿತ ಹೆಚ್ಚಳ ಆಗಲಿದೆ.
ಆದರೆ,ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳವಿದ್ದರೆ ಮಾರ್ಗಸೂಚಿ ದರ ಹೆಚ್ಚು ಆಗಲ್ಲ ಎಂದರು.
ಹೆದ್ದಾರಿ, ವಿಮಾನನಿಲ್ದಾಣ, ಐಟಿ ಬಿಟಿ ಬಂದಿರೋ ಕಡೆಯೇ ಮಾರ್ಗಸೂಚಿ ದರ ಕಡಿಮೆ ಇದ್ದು, ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ. ಸರಾಸರಿ ಶೇ. 30 ರಷ್ಟು ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪಣೆ ಪರಿಶೀಲಿಸಿದ ಬಳಿಕ ಅಧಿಸೂಚನೆ ಪ್ರಕಟ ಆಗಲಿದೆ ಎಂದು ಅವರು ಹೇಳಿದರು
ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2000 ಕೋಟಿ ರೂ ಆದಾಯ ಬರಲಿದೆ. ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಅದು ಎರಡು ತಿಂಗಳ ಬಳಿಕ ಸರಿ ಆಗಲಿದೆ ಎಂದರು.
ಹಿಂದಿನ ಐದು ವರ್ಷಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳ ಪರಿಷ್ಕರಣೆ ಆಗಿರಲಿಲ್ಲ. ಹಿಂದೆ ದರಗಳಲ್ಲಿ ಬಹಳ ವ್ಯತ್ಯಾಸಗಳಿದ್ದವು. ಈಗ ಆ ವ್ಯತ್ಯಾಸಗಳನ್ನು ಸರಿಪಡಿಸುವ ಪ್ರಯತ್ನ ಮಾಡಲಾಗಿದೆ ಶೇಕಡ 20ರಿಂದ ಶೇ 50ರವರೆಗೂ ಹೆಚ್ಚಳ ಮಾಡಲಾಗಿದೆ. ಸರಾಸರಿ ಶೇ 30ರಷ್ಟು ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಕಪ್ಪು ಹಣದ ವಹಿವಾಟಿನ ನಿಯಂತ್ರಣಕ್ಕೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಆ್ಯಪ್ ಸಿದ್ಧ:
ಸರ್ಕಾರಿ ಜಮೀನುಗಳ ಸಮಗ್ರ ಮಾಹಿತಿ ಸಂಗ್ರಹ ಮತ್ತು ರಕ್ಷಣೆಗಾಗಿ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಅದನ್ನು ಬಳಕೆಗೆ ತರಲಾಗುವುದು ಎಂದು ತಿಳಿಸಿದರು.
ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳ ವಿವರಗಳನ್ನು ಜಿಪಿಎಸ್ ಮಾಹಿತಿ ಸಮೇತ ದಾಖಲಿಸಬೇಕು. ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿನೀಡಿ ಫೋಟೊ ಸಮೇತ ಮಾಹಿತಿ ಅಪ್ಲೋಡ್ ಮಾಡಬೇಕು ಎಂದರು.
ಸರ್ಕಾರಿ ಜಮೀನುಗಳ ಕಬಳಿಕೆ ತಡೆಯಲು ಕಂದಾಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ತಂಡವೊಂದನ್ನು ರಚಿಸಲಾಗುವುದು ಎಂದು ತಿಳಿಸಿದರು.
3 ಪ್ರತಿಕ್ರಿಯೆಗಳು
Переезд в Испанию Переезд в Испанию .
варианты бизнеса варианты бизнеса .
Купить диплом медицинского института
kyc-diplom.com/diplom-articles/kupit-diplom-medicinskogo-instituta.html