ಬೆಂಗಳೂರು, ಸೆ.29 -ಹುಟ್ಟು ಹಬ್ಬದ ದಿನವೇ ಕುಖ್ಯಾತ ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯ್ ನನ್ನು ಭೀಕರವಾಗಿ ಕೊಚ್ಚಿ ಮಾಡಿರುವ ದುರ್ಘಟನೆ ದೇವರಜೀವನ( ಡಿಜೆ) ಹಳ್ಳಿಯ ಮೋದಿ ರಸ್ತೆಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಸ್ನೇಹಿತರ ಜೊತೆಗೆ ಬರ್ತಡೇ ಕೇಕ್ ಕತ್ತರಿಸಿ ಭರ್ಜರಿ ಪಾರ್ಟಿ ಮಾಡಿದ್ದ ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯ್ ಮೋದಿ ರಸ್ತೆಯ ಮಸೀದ್ ಬಳಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಕೊಚ್ಚಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯ್ ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
ರೌಡಿ ಸುಹೇಲ್ ಅಲಿಯಾಸ್ ಪಪ್ಪಾಯ್ ಗೆ ದುಷ್ಕರ್ಮಿಗಳು ಸುಮಾರು 20ಕ್ಕೂ ಹೆಚ್ಚು ಬಾರಿ ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಹಿಂದೆ ಇದೇ ಸುಹೈಲ್ ಲಾಂಗ್ ಹಿಡಿದು ಡಿಜೆ ಹಳ್ಳಿಯಲ್ಲಿ ಅಮಾಯಕರನ್ನು ಬೆದರಿಸಿದ್ದು ಆತನನ್ನು ಪೊಲಿಸರು ಬಂಧಿಸಿ ಇಡೀ ಏರಿಯಾ ದಲ್ಲಿ ಮೆರವಣಿಗೆ ಮಾಡಿದ್ದರು.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಡಿಜೆಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.