ಬೆಂಗಳೂರು,ಅ.22- ಅಪರಾಧ ಕೃತ್ಯವೆಸಗುವರು ಇದಕ್ಕಾಗಿ ನಾನಾ ಮಾರ್ಗ ಗಳನ್ನು ಹುಡುಕಿಕೊಳ್ಳುತ್ತಾರೆ
ಕೃತ್ಯವೆಸಗುವ ಮೂಲಕ ಯಶಸ್ವಿಯೂ ಆಗುತ್ತಾರೆ.
ಆದರೆ, ಪೊಲೀಸರು ಮಾತ್ರ ಇವರನ್ನು ಹೆಡೆಮುರಿ ಕಟ್ಟುತ್ತಿದ್ದಾರೆ.
ಇಂತಹ ಪೊಲೀಸ್ ಇಲಾಖೆಯ ಹೆಸರನ್ನೇ ಬಳಸಿಕೊಂಡ ಪಾತಕಿಗಳು ಉದ್ಯಮಿಯೊಬ್ಬರನ್ನು ಅಪಹರಿಸಿದ್ದಾರೆ.ಅವರ ಬಿಡುಗಡೆಗಾಗಿ ಹಣಕ್ಕೆ ಬೇಡಿಕೆಯಿಟ್ಟು,ಕೊನೆಗೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಕೃತ್ಯವೆಸಗಿದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ವಾಸಿಂ, ಶಬ್ಬೀರ್, ಶೊಹಿಬ್ ಹಾಗೂ ಮುಜಾಫರ್ ಎಂದು ಗುರುತಿಸಲಾಗಿದೆ.
ನಗರದ ಎಸ್‌ಪಿ ರೋಡ್‌ನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ಕಾಲು ಸಿಂಗ್ ಅವರು ಮೂರು ದಿನಗಳ ಹಿಂದೆ ಅಂಗಡಿಯಲ್ಲಿದ್ದಾಗ ಏಕಾಏಕಿ ಅಂಗಡಿಗೆ ನುಗ್ಗಿದ ಆರೋಪಿಗಳು, ನಾವು ಪೊಲೀಸರು,
ನೀನು ಡ್ರಗ್ಸ್ ಮಾರಾಟ ಮಾಡುತ್ತಿದ್ದೀಯಾ ಎಂಬ ಮಾಹಿತಿ ಇದೆ ಎಂದು ಗದರಿಸಿದ್ದಾರೆ.
ಇದರಿಂದ ಕಾಲು ಸಿಂಗ್ ವಿಚಲಿತರಾದಾಗ ಅವರನ್ನು ವಿಚಾರಣೆಗೆ ಬರುವಂತಹ ಹೇಳಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ.ಬಳಿಕ ಅವರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ.
ಹಣ ನೀಡಲು ಕಾಲು ಸಿಂಗ್ ನಿರಾಕರಿಸಿದಾಗ ನಿನ್ನ ಡ್ರಗ್ಸ್ ಮಾರಾಟದ ಕುರಿತು ನಮಗೆ ಮಾಹಿತಿ ಇದೆ.ನಿನ್ನನ್ನು ಈ ಪ್ರಕರಣದಿಂದ ಬಿಡುಗಡೆ ಮಾಡಲು ಹಣ ಕೊಡಲೇಬೇಕು ಎಂದಿದ್ದಾರೆ. ಆಗ ಆತ ನನ್ನನ್ನು ಈಗ ಬಿಟ್ಟರೆ ಹಣ ಹೊಂದಿಸಿ ಕೊಡುವುದಾಗಿ ನಂಬಿಸಿದ್ದಾನೆ ಇದನ್ನು ನಂಬಿದ ಪೊಲೀಸರ ಸೋಗಿನಲ್ಲಿದ್ದ ಅಪಹರಣಕಾರರು ಕಾಲು ಸಿಂಗ್ ಅವರನ್ನು ಖಾಸಿಂ ನನ್ನು ಬಿಟ್ಟುಕಳುಹಿಸಿದೆ.
ಅಪಹರಣಕಾರರಿಂದ ಬಚಾವಾಗಿ ಬಂದ ಕಾಲು ಸಿಂಗ್ ಅವರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಸಿಬಿ ಪೊಲೀಸರು ವಾಸಿಂ, ಶಬ್ಬೀರ್, ಶೊಹಿಬ್ ಹಾಗೂ ಮುಜಾಫರ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದಕ್ಕೂ ಮೊದಲು ಕೂಡ ಪೊಲೀಸ್ ಇಲಾಖೆ ಹೆಸರಲ್ಲಿ ಅಪಹರಣ ಮಾಡಿದ್ದಾರೆಯೇ ಎಂಬ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.