Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಬಹುಮತ ಖಚಿತ! | Telangana Elections
    ಸುದ್ದಿ

    ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಬಹುಮತ ಖಚಿತ! | Telangana Elections

    vartha chakraBy vartha chakraನವೆಂಬರ್ 25, 20231 ಟಿಪ್ಪಣಿ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಹೈದರಾಬಾದ್ – ಕರ್ನಾಟಕದ ನೆರೆಯ ತೆಲಂಗಾಣ ವಿಧಾನಸಭೆ ಚುನಾವಣೆ (Telangana Elections) ದೇಶದ ಗಮನ ಸೆಳೆದಿದೆ.ಮುಂಬರುವ ಲೋಕಸಭಾ ಚುನಾವಣೆಯ ರಿಹರ್ಸಲ್ ಮಾದರಿಯ ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ,ಕಾಂಗ್ರೆಸ್ ನೇತೃತ್ವದ ಇಂಡಿಯಾ ಮತ್ತು ಬಿಆರ್ ಎಸ್ ನೇತೃತ್ವದ ತೃತೀಯ ರಂಗದ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವ ಎನಿಸಿದೆ.

    ರಾಜ್ಯದ ಒಟ್ಟು119 ಸ್ಥಾನಗಳ ತ ವಿಧಾನಸಭೆಗೆ ನವೆಂಬರ್ 30ರಂದು ಚುನಾವಣೆ ನಡೆಯಲಿದ್ದು,
    ಅಬ್ಬರದ ಪ್ರಚಾರ ಕೊನೆಯ ಘಟ್ಟಕ್ಕೆ ಬಂದು ನಿಂತಿದೆ. ಮತಯಾಚನೆಯ ನಡುವೆಯೇ ಮೂರೂ ಪಕ್ಷದ ನಾಯಕರು ಆರೋಪ, ಪ್ರತ್ಯಾರೋಪಗಳು, ವಾಕ್ಸಮರ ತಾರಕಕ್ಕೇರಿದೆ.
    ಕಳೆದ 10 ವರ್ಷಗಳ ಅವಧಿಯಲ್ಲಿ ತೆಲಂಗಾಣದಲ್ಲಿ ಆಡಳಿತ ನಡೆಸುತ್ತಿರುವ ಕೆ.ಸಿ.ಆರ್ .ತನ್ನ ಪ್ರಜೆಗಳಿಗಾಗಿ ಏನೂ ಮಾಡಿಲ್ಲ. ಬದಲಿಗೆ ತನ್ನ ಪುತ್ರ ಕೆಟಿ ರಾಮರಾವ್‌ ಅವರಿಗಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದನೆ ಮಾಡಲು ಸಹಾಯ ಮಾಡಿದ್ದಾರೆ ಎಂಬ ಆರೋಪವೂ ಸೇರಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಆರೋಪ- ಪ್ರತ್ಯಾರೋಪ ಕೇಳಿ ಬರುತ್ತಿರುವುದು ಚುನಾವಣಾ ಅಖಾಡಕ್ಕೆ ರಂಗು ಬರುವಂತೆ ಮಾಡಿದೆ.

    ಮೇಲ್ನೋಟಕ್ಕೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌), ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಏರ್ಪಟ್ಟಿದೆ ಎಂಬಂತೆ ಕಾಣುತ್ತಿದೆ‌. ಆದರೆ,ಬಿಜೆಪಿಗೆ ತೆಲಂಗಾಣದಲ್ಲಿ ಹೇಳಿಕೊಳ್ಳುವಂತಹ ಬೆಂಬಲ ಸಿಗುತ್ತಿಲ್ಲ. ಆದರೂ ಧೃತಿಗೆಡದೆ ತನ್ನ ಪ್ರಯತ್ನವನ್ನು ಮುಂದುವರಿಸಿದ್ದು ಸದ್ದಿಲ್ಲದೆ ಮತದಾರರ ಮನವೊಲಿಸುವ ಕಸರತ್ತನ್ನು ಮುಂದುವರಿಸಿದೆ.
    ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಘಟಾನುಘಟಿ ನಾಯಕರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ.
    ಅಧಿಕಾರ ಚುಕ್ಕಾಣಿ ಹಿಡಿಯಬಹುದು ಎಂಬ ಭಾರಿ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಭರ್ಜರಿ ಪ್ರಚಾರದ ಮೂಲಕ ಆಡಳಿತ ರೂಡ ಬಿಎಸ್ ಆರ್ ಗೆ ಸೆಡ್ಡು ಹೊಡೆದಿದೆ.
    ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ,ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಖಾನ್, ಬೋಸರಾಜು ಮೊದಲಾದ ಕರ್ನಾಟಕದ ನಾಯಕರು ಇಲ್ಲಿ ತಮ್ಮ ಪ್ರಭಾವ ಹೊಂದಿದ್ದು,ಅವರೆಲ್ಲರೂ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಬೆವರು ಹರಿಸುತ್ತಿದ್ದಾರೆ.

    ಕ್ಷೇತ್ರದ ಬಹುತೇಕ ಕಡೆ ಕಾಣುತ್ತಿರುವ ಆಡಳಿತ ವಿರೋಧಿ ಅಲೆ,ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದ ತೆಲುಗುದೇಶಂ ನಡೆ ಮತ್ತು ವೈ.ಎಸ್.ಆರ್.ನ ಶರ್ಮಿಳಾ ಬೆಂಬಲ ಕಾಂಗ್ರೆಸ್ ಅನ್ನು ಗೆಲುವಿನ ಸನಿಹ ಕೊಂಡೊಯ್ಯಬಹುದು ಎನ್ನಲಾಗುತ್ತಿದೆ.
    ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಯದಲ್ಲಿ ಉಂಟಾದ ಗೊಂದಲ, ನಾಯಕರ ನಡುವಿನ ಜಟಾಪಟಿ,ನಾಯಕತ್ವದ ಕೊರತೆ ಜನರಲ್ಲಿ ವಿಶ್ವಾಸ ಮೂಡಿಸಿಲ್ಲ ಎಂಬ ಅಂಶದೊಂದಿಗೆ ಸ್ಥಿರ ಸರ್ಕಾರ ಹಾಗೂ ನೀರಾವರಿ ಯೋಜನೆಗಳ ಅನುಷ್ಠಾನ ಆಡಳಿತ ಬಿಎಸ್ ಆರ್ ಗೆ ಅನುಕೂಲ ಎಂಬ ವ್ಯಾಖ್ಯಾನಗಳು ಕೇಳಿ ಬರುತ್ತಿವೆ.

    ಆದರೆ ಒಟ್ಟಾರೆ ಚಿತ್ರಣ ಅವಲೋಕಿಸಿದಾಗ ಕಾಂಗ್ರೆಸ್ ಎಲ್ಲರಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆ ಇದೆ.ಅದರಲ್ಲೂ ಹೈದರಾಬಾದ್ ಪ್ರದೇಶದ ಮತದಾರರು ಬಿಆರ್‌ಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಚುನಾವಣಾ ಭವಿಷ್ಯವನ್ನು ನಿರ್ಧಿಸುತ್ತಾರೆ. ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಾರೋ ಅವರು ವಿಧಾನಸಭೆಯಲ್ಲಿ ಆಡಳಿತ ನಡೆಸುತ್ತಾರೆ.ಹೀಗಾಗಿ ಈ ಪ್ರದೇಶದ ಮೇಲೆ ಎರಡೂ ಪಕ್ಷಗಳ ನಾಯಕರು ಕಣ್ಣಿಟ್ಟಿದ್ದಾರೆ.ಕೆಲವು ಖಾಸಗಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ 55 ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆ ಇದ್ದು ಬಿಆರ್ ಎಸ್ 51ರಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಇದಕ್ಕೆ ಉತ್ತರ ‌ಸಿಗಬೇಕಾದರೆ ಡಿಸೆಂಬರ್ 3ರಂದು ನಡೆಯಲಿರು ಮತ ಎಣಿಕೆಯವರೆಗೆ ಕಾಯಬೇಕು.

    Election Elections Government Karnataka News Politics telangana Telangana Elections ಕಾಂಗ್ರೆಸ್ ಚುನಾವಣೆ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಎಲೆ ಅಡಿಕೆ ತಿನ್ನಿಸಿ‌ ಮಗುವನ್ನು ಕೊಂದಳಾ ಅಜ್ಜಿ? | Murder
    Next Article ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ – ಮೌನ ಮುರಿದ ಯಡಿಯೂರಪ್ಪ
    vartha chakra
    • Website

    Related Posts

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025

    1 ಟಿಪ್ಪಣಿ

    1. australia cheap tobacco on ನವೆಂಬರ್ 19, 2025 10:58 ಅಪರಾಹ್ನ

      australia cigerettes deliery
      Australia Cig Delivery became a trusted online tobacco retailer in Australia. Established in 2024, the platform quickly gained customer trust through competitive pricing and fast shipping. The company focuses on customer ease with: No-cost delivery across the country, no base amount; Same-day dispatch for orders before 5:00 AM (AET); Confidential packaging with no signs of contents; Flexible payments: bank transfer.

      Why Choose Australia Cig Delivery? A licensed store committed to genuine products at fair prices. All items comply with local regulations. Sales for adults 18+ only. The featured labels include a wide range: the brand — globally respected for refined taste (includes Gold); the brand — delicate to menthol blends; the brand — premium with elegant taste; Dunhill — UK-origin with cultured experience; Double Happiness — traditional oriental brand with full aroma.

      Common Questions: Delivery times? Orders before 5:00 AM (AET) dispatched same day. Shipping takes 2–5 business days. Deliver abroad? Delivery available only within the nation. Track orders? Tracking number provided via email after dispatch. Payment methods? Accept PayPal. All payments handled securely. Return policy? Refunds for defects only. Unopened items not returned for different decision. Cancel orders? Annulled only before processing. Contact support? Available seven days. Inquiries via email, responses within hours.

      Summary: Australia Cig Delivery distinguishes through authenticity and value. With same-day dispatch, free shipping and private packaging, it offers a reliable solution for adult smokers. Sales strictly for 18+ persons.

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಹೈಕಮಾಂಡ್ ಮುಂದೆ ಶಿವಕುಮಾರ್ ಗರಂ.

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • australia cheap tobacco ರಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಬಹುಮತ ಖಚಿತ! | Telangana Elections
    • TristanJidly ರಲ್ಲಿ ಹಿಂದೂ ಧರ್ಮ ಸಂಸ್ಥಾಪಕರು ಯಾರು? | Hinduism
    • double happiness cigarette australia ರಲ್ಲಿ ಚಿನ್ನದಂಗಡಿಗಳಿಗೆ IT shock!
    Latest Kannada News

    ಜಾತಿ ಸಮೀಕ್ಷೆ ಅವಧಿ ವಿಸ್ತರಣೆ.

    ಅಕ್ಟೋಬರ್ 7, 2025

    ಕಾಫ್ ಸಿರಪ್ ಬಗ್ಗೆ ಎಚ್ಚರಿಕೆ ಇರಲಿ.

    ಅಕ್ಟೋಬರ್ 7, 2025

    ಫೆಬ್ರುವರಿಯಲ್ಲಿ ರಶ್ಮಿಕಾ ಮದುವೆ.

    ಅಕ್ಟೋಬರ್ 4, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಒಂದೇ ವರ್ಷದಲ್ಲಿ 3ನೇ ಗಂಡನನ್ನೂ ಬಿಟ್ಟನಟಿ#varthachakra #malayalamactresses #meeravasudevan #divorce #fact
    Subscribe