ಬೆಂಗಳೂರು, ನ.25- ನಿರಂತರವಾಗಿ ಭ್ರೂಣ ಹತ್ಯೆ (Feoticide) ಮಾಡುತ್ತಿದ್ದ ಐವರು ವೈದ್ಯರು ಸೇರಿ 9 ಮಂದಿ ಆರೋಪಿಗಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೈದ್ಯರಾದ ಡಾ. ತುಳಸಿರಾಮ್, ಡಾ. ಚಂದನ್ ಬಲ್ಲಾಳ್ ಮತ್ತು ಮೀನಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್, ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಬಂಧಿತ ಆರೋಪಿಗಳಾಗಿದ್ದಾರೆ.
ಮೊದಲು ಭ್ರೂಣ ಹತ್ಯೆ ಮಾಡುತ್ತಿದ್ದ ಆರೋಪದ ಮೇಲೆ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಎಂಬವರನ್ನ ಬಂಧಿಸಲಾಗಿತ್ತು. ಅವರನ್ನ ವಿಚಾರಣೆಗೆ ಒಳಪಡಿಸಿದ ನಂತರ ಈ ಪ್ರಕರಣದ ಹಿಂದಿರುವ ವೈದ್ಯರ ಹೆಸರು ಕೇಳಿಬಂದಿತು.
ಬಳಿಕ ತನಿಖೆ ಮುಂದುವರಿಸಿದ ಪೊಲೀಸರು ಕೃತ್ಯದ ಹಿಂದಿದ್ದ ಚನ್ನೈ ಮೂಲದ ಡಾ ತುಳಸಿರಾಮ್, ಮೈಸೂ,ರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ, ಲ್ಯಾಬ್ ಟೆಕ್ನೀಶಿಯನ್ ನಿಸ್ಸಾರ್ ಎಂಬವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಒಟ್ಟು 9 ಮಂದಿ ಸೇರಿ ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತ್ತಿದ್ದರು. ಪ್ರತಿ ತಿಂಗಳು 20 ರಿಂದ 25 ಭ್ರೂಣ ಹತ್ಯೆ ಮಾಡುತ್ತಿದ್ದರು. ಮೈಸೂರಿನ ಉದಯಗಿರಿಯಲ್ಲಿರುವ ಆಸ್ಪತ್ರೆಯೊಂದರಲ್ಲಿ ಈ ಕೃತ್ಯ ನಡೆಯುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

1 ಟಿಪ್ಪಣಿ
Where “bad run” turns into ancient history – https://gntopama.com/betano-casino-in-depth-review-2026-bonuses-slots-real-player-insights/ , One spin and physics files for bankruptcy .