ಬೆಂಗಳೂರು, ಜ.11- ಟರ್ಕಿ ಮೂಲದ ಮಹಿಳೆ,ವಿದೇಶಿ ಮಹಿಳೆಯರನ್ನು ಇಟ್ಟುಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ನಡೆಸುತ್ತಿದ್ದ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಅಚ್ಚರಿಯ ಅಂಶವೊಂದನ್ನು ಪತ್ತೆ ಹಚ್ಚಿದ್ದಾರೆ.
ತಾನು ಮಾಡುತ್ತಿದ್ದ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಸಂಬಳ ದೊರೆಯುತ್ತಿದ್ದರೂ,ಭಾರಿ ಮೊತ್ತದ ಹಣ ಗಳಿಸುವ ಹುಚ್ಚಿಗೆ ಬಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬ ಈ ಪ್ರಕರಣದಲ್ಲಿ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ ಅಂಶ ಬಯಲಿಗೆ ಬಂದಿದೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಗೋವಿಂದರಾಜು
ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈತ ವಿದೇಶಿ ಮಹಿಳೆಯರ ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗೆ ಕೈ ತುಂಬಾ ಸಂಬಳ ಬರುತ್ತಿತ್ತು. ಆದರೆ ಈತ ಷೇರು ಮಾರ್ಕೆಟ್ ಚಟಕ್ಕೆ ಬಿದ್ದಿದ್ದ. ತಾನು ದುಡಿದ ಅಷ್ಟೂ ಹಣವನ್ನು ಷೇರುಗಳಿಗೆ ಸುರಿಯುತ್ತಿದ್ದ. ಇವೆಲ್ಲವೂ ನೀರಿನಲ್ಲಿ ಮಾಡಿದ ಹೋಮದಂತಾಗಿತ್ತು.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ತಿಂಗಳ ಸಂಬಳ ಸಾಕಾಗದೆ ಸಾಲ ಮಾಡಬೇಕಾಗಿತ್ತು. ಇದರಿಂದ ಕೈಗೆ ಬಂದ ಸಂಬಳ ಮಾಡಿದ ಸಾಲ ತೀರಿಸಲು ಸರಿ ಹೋಗುತ್ತಿತ್ತು.
ಈ ಸಂದರ್ಭದಲ್ಲಿ ತನ್ನ ಕಮ್ಯೂನಿಕೇಷನ್‌ಗೆ ಎಂದು ಒಂದು ಆ್ಯಪ್ ಸೃಷ್ಟಿಸಿಕೊಂಡಿದ್ದ. ಮೊದ ಮೊದಲು ಗೆಳೆಯರ ಜೊತೆ ಸಂವಹನ ಮಾಡಲು ಬಳಕೆಯಾಗ್ತಿತ್ತು. ಈ ವೇಳೆ ಮತ್ತೊಬ್ಬ ಬಿಇ ಪದವೀಧರ ವೀಝಾಕ್ ಎಂಬಾತ ಗೋವಿಂದರಾಜುವಿಗೆ ವೇಶ್ಯಾವಾಟಿಕೆಯಲ್ಲಿ ಹಣವಿದೆ, ಅದರಲ್ಲೂ ವಿದೇಶಿ ಮಹಿಳೆಯರಿಗೆ ಒಳ್ಳೆಯ ಬೆಲೆ ಇದೆ ಎಂದು ತಲೆಗೆ ತುಂಬಿಸಿದ್ದ.
ಟೆಕ್ಕಿ ಸೃಷ್ಟಿ ಮಾಡಿರುವ ಆ್ಯಪ್ ತುಂಬಾ ಸೆಕ್ಯೂರ್ ಆಗಿರುವ ಪ್ರೈವೇಟ್ ಆಪ್ ಆಗಿದ್ದು, ಅದರಲ್ಲಿ ತಮಗೆ ಬೇಕಾದವರನ್ನು ಮಾತ್ರ ಸೇರಿಸಿಕೊಳ್ಳುತ್ತಿದ್ದ. ಟೆಕ್ಕಿಯಾಗಿದ್ದ ವೇಳೆ ಸಿಗದಿದ್ದ ಹಣ ಈ ಆ್ಯಪ್ ಮೂಲಕ ಸಿಗುತ್ತಿತ್ತು. ಹೀಗೆ ಸಂಪರ್ಕಕ್ಕೆ ಬಂದವಳೇ ಪುಲಕೇಶಿನಗರದಲ್ಲಿ ವಾಸವಾಗಿರುವ ಟರ್ಕಿ ದೇಶದ ಮಹಿಳೆ ಬಿಯೋನಾಜ್ (39).
ಈಕೆ ಟರ್ಕಿಯಿಂದ ಬಂದವಳಾಗಿದ್ದು 15 ವರ್ಷದ ಹಿಂದೆ ಪ್ರವಾಸಿ ವೀಸಾದಲ್ಲಿ ಬಂದಿದ್ದ ಆಕೆಯು ಸ್ಥಳೀಯ ನಿವಾಸಿ ಸೆಲ್ವ ಎಂಬುವರನ್ನು ಮದುವೆಯಾಗಿದ್ದರು.ದಂಪತಿಗೆ ಒಂದು ಮಗು ಕೂಡ ಇದೆ.
ಪತಿ ಸೆಲ್ವನಿಗೆ ಕ್ಷಯರೋಗ ಕಾಣಿಸಿಜೊಂಡು ಅದು ಹೆಚ್ಚಾಗುತ್ತಿದ್ದಂತೆ ಬಿಯಾನಾಜ್ ದೂರವಾಗುವ ಸೂಚನೆ ಸಿಕ್ಕಿತ್ತು. ಇದನ್ನರಿತ ಸೆಲ್ವ, ಬಿಯನಾಜ್ ಳ ಟರ್ಕಿ ಪಾಸ್‌ಪೋರ್ಟನ್ನು ಹರಿದು ಹಾಕಿದ್ದ. ಭಾರತದ ಪಾಸ್‌ಪೋರ್ಟ್ ಕೂಡ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಅದೂ ಅಲ್ಲದೆ ಮಗ ಇಲ್ಲೇ ಹುಟ್ಟಿದ ಕಾರಣ ಆತ ಈ ದೇಶದ ನಾಗರಿಕನಾಗಿದ್ದಾನೆ.
ಹೀಗಾಗಿ ಇಲ್ಲೇ ಉಳಿದ ಈಕೆ ಹೈಟೆಕ್ ವೇಶ್ಯಾವಾಟಿಕೆಗೆ ಇಳಿದಿದ್ದಳು. ಕಳೆದ 10 ವರ್ಷದಿಂದ ಈಕೆ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಬಿಯಾನಾಜ್ ಹಾಗೂ ಆಕೆಯ ಸಹಚರರಾದ ಒಡಿಶಾ ಮೂಲದ ಜಿತೇಂದ್ರ ಸಾಹೂ (43), ಪ್ರಮೋದ್ ಕುಮಾರ್ (31), ಮನೋಜ್ ದಾಸ್ (23) ಅಸ್ಸಾಂ ಮೂಲದ ಸೌಮಿತ್ರ ಚಂದ್ (26), ಮಹಾಲಕ್ಷ್ಮಿ ಲೇಔಟ್ ನಿವಾಸಿ ಪ್ರಕಾಶ್ (32), ಲಗ್ಗೆರೆಯ ವೇಶಾಕ್(22), ಪರಪ್ಪನ ಅಗ್ರಹಾರ ನಿವಾಸಿ ಗೋವಿಂದರಾಜ್ (34) ಮತ್ತು ನಂದಿನಿ ಲೇಔಟ್ ನಿವಾಸಿ ಅಕ್ಷಯ್ (32) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳ ವಶದಲ್ಲಿದ್ದ 7 ವಿದೇಶಿ ಮಹಿಳೆಯರು ಸೇರಿ ಒಟ್ಟು 9 ಮಂದಿಯನ್ನು ರಕ್ಷಿಸಲಾಗಿದೆ.

5 ಪ್ರತಿಕ್ರಿಯೆಗಳು
Journey across virtual tables and spinning worlds. crown coins login ensures cross-device compatibility. Play anywhere, win everywhere!
Sweet Bonanza is your ticket to a world of lollipops, fruits, and huge multipliers. Tumble sweet bonanza winning strategy your way to free spins and watch prizes explode. Don’t miss out!
Chumba Casino delivers big fun with zero risk. Claim your free chumba casino bonus and play top-tier slots anytime. Real rewards are waiting — start spinning!
Proc platit 3–5? vic? Generika na opravdovalekarna.cz
https://opravdovalekarna.cz
Connect the millions delightful big on fanduel casino Minnesota – the #1 legitimate coins casino app in America.
Get your $1000 TEASE IT AGAIN hand-out and modify every spin, хэнд and roll into bona fide cash rewards.
Fast payouts, whopping jackpots, and continuous activity – download FanDuel Casino any longer and start playing like a pro today!