ಬೆಂಗಳೂರು,ಫೆ.20- ಮಾರಾಣಾಂತಿಕ ಹಲ್ಲೆ, ಸುಲಿಗೆ, ದರೋಡೆ ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ರೌಡಿ (Rowdy Sheeter) ನಸ್ರು ಮುಂಬೈನಲ್ಲಿ ಸೆರೆಸಿಕ್ಕಿದ್ದಾನೆ
ಹಲವಾರು ಅಪರಾಧ ಕೃತ್ಯಗಳಲ್ಲಿಭಾಗಿಯಾಗಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ನಸ್ರು ನನ್ನು ಮುಂಬಯಿಯಲ್ಲಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ.
ರೌಡಿ ನಸ್ರು ಬಂಧನಕ್ಕೆ ರಚಿಸಲಾಗಿದ್ದ ಪಶ್ಚಿಮ ವಿಭಾಗದ ವಿಶೇಷ ತಂಡವು ಕರ್ನಾಟಕ ರಾಜ್ಯ ಸೇರಿದಂತೆ ತಮಿಳುನಾಡು, ಆಂದ್ರಪ್ರದೇಶ ಮತ್ತು ಇತರೆ ಕಡೆಗಳಲ್ಲಿ ಪತ್ತೆ ಕಾರ್ಯ ಕೈಗೊಂಡು ಬಳಿಕ ದೊರೆತ ಖಚಿತ ಮಾಹಿತಿ ಆಧರಿಸಿ ಮುಂಬಯಿಯಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದೆ.
ಹಲವು ಪ್ರಕರಣ ಸಂಬಂಧ ಆತನನ್ನು ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದ ನಸ್ರು, ಮಾದನಾಯಕನಹಳ್ಳಿ, ಬಿಡದಿ, ಹೆಚ್.ಎಸ್.ಆರ್ ಲೇಔಟ್, ಹೆಬ್ಬಾಳ ,ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಸಂಪಿಗೆಹಳ್ಳಿ, ಹೆಣ್ಣೂರು, ಬೇಗೂರು , ಸದಾಶಿವ ನಗರ ಹಾಗೂ ಇತರೆ ಪೊಲೀಸ್ ಠಾಣೆಗಳಲ್ಲಿ 2014ನೇ ಸಾಲಿನಿಂದ ಇಲ್ಲಿಯವರೆಗೆ ಹಣಕ್ಕಾಗಿ ಮಾರಕಾಸ್ತ್ರಗಳಿಂದ ಸಾರ್ವಜನಿಕರ ಮೇಲೆ ಮಾರಾಣಾಂತಿಕ ಹಲ್ಲೆ, ಸುಲಿಗೆ, ದರೋಡೆ. ಇತ್ಯಾದಿ ಪ್ರಕರಣಗಳಲ್ಲಿ ಬಾಗಿಯಾಗಿ ಪೊಲೀಸ್ ಇಲಾಖೆಗೆ ಸವಲಾಗಿ ಪರಿಣಮಿಸಿದ್ದನು.
ಕಳೆದ ಒಂದು ವರ್ಷದಿಂದ ಈ ರೌಡಿಯು ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ಅನೇಕ ಪ್ರಕರಣಗಳು ನಗರದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದ್ದು, ನ್ಯಾಯಾಲಯಗಳಿಗೂ ಹಾಜರಾಗುತ್ತಿರಲಿಲ್ಲ.
ಈತನ ವಿರುದ್ಧ 10 ಎನ್.ಬಿ.ಡಬ್ಲ್ಯೂ ಮತ್ತು 01 ಪ್ರೋಕ್ಷಾಮೇಷನ್ ನ್ಯಾಯಲಯವು ಹೊರಡಿಸಿತ್ತು. ಈ ರೌಡಿಯ ವಿರುದ್ಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ತನಿಖಾ ಹಂತದಲ್ಲಿದ್ದ ಮಾರಾಣಾಂತಿಕ ಹಲ್ಲೆ ಪ್ರಕರಣವೊಂದರಲ್ಲಿ ಈತನು ಬಾಗಿಯಾಗಿದ್ದನು.
ಉಪ ಪೊಲೀಸ್ ಆಯುಕ್ತ ದೇವರಾಜ್.ಡಿ ಮಾರ್ಗದರ್ಶನದಲ್ಲಿ ಗೋವಿಂದ್ ಪುರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ರೌಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದರು.
7 ಪ್ರತಿಕ್ರಿಯೆಗಳು
промокод на продамус скидка подключение http://prodamus-promokod1.ru .
купить диплом о высшем образовании в кирове купить диплом о высшем образовании в кирове .
продамус промокоды http://www.my.forum2.net/viewtopic.php?id=191#p228 .
продамус промокод скидка [url=http://promokod-prod.ru]продамус промокод скидка[/url] .
Полезные советы по покупке диплома о высшем образовании без риска
prodamus промокод [url=ideya.forums.party/viewtopic.php?id=899#p1752]ideya.forums.party/viewtopic.php?id=899#p17520-17[/url] .
продамус промокод скидка [url=https://kryto.ukrbb.net/viewtopic.php?f=2&t=1431]https://kryto.ukrbb.net/viewtopic.php?f=2&t=143144&[/url] .