ಬೆಂಗಳೂರು, ಮಾ.1- ಸಂಚಾರ ನಿಯಮ ಉಲ್ಲಂಘಿಸಿದ ವಾಹನದ ಮಾಲೀಕರಿಗೆ ಇದೇ ಮೊದಲ ಬಾರಿಗೆ ನೋಟಿಸ್ನಲ್ಲಿ ಕ್ಯೂ ಆರ್ ಕೋಡ್ ಅಳವಡಿಸಿ ದಂಡ ಪಾವತಿಯ ನೋಟಿಸ್ ಕಳುಹಿಸಲು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇಂದಿನಿಂದ ಕ್ಯೂ ಆರ್ ಕೋಡ್ ಒಳಗೊಂಡಿರುವ ನೋಟಿಸ್ ಕಳುಹಿಸಲಾಗುತ್ತಿದೆ. ಆಟೊಮೇಷನ್ ಸೆಂಟರ್ನಿಂದ ನೋಟಿಸ್ ಜಾರಿ ಮಾಡಲಾಗುತ್ತಿದ್ದು, ಅಂಚೆ ಮೂಲಕ ಸವಾರರ ಮನೆ ಬಾಗಿಲಿಗೆ ತಲುಪಲಿದೆ.
ನಿಯಮ ಉಲ್ಲಂಘನೆಯ ದಿನಾಂಕ, ಸಮಯ, ಯಾವ ರೀತಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ದಂಡದ ಮೊತ್ತದ ಜೊತೆಗೆ ನೋಟಿಸ್ ಬಲಭಾಗದಲ್ಲಿ ಕ್ಯೂ ಆರ್ ಕೋಡ್ ನಮೂದಿಸಲಾಗಿದೆ. ಸವಾರರು ಸ್ಕ್ಯಾನ್ ಮಾಡಿ, ತಾನು ಉಲ್ಲಂಘನೆ ಮಾಡಿರುವ ಬಗ್ಗೆ ವಿಡಿಯೋ ಹಾಗೂ ಫೋಟೊ ವೀಕ್ಷಿಸಬಹುದಾಗಿದೆ.
ದಂಡ ಪಾವತಿಸಲು ಆನ್ಲೈನ್ ಮೂಲಕ ಲಿಂಕ್ ಕಲ್ಪಿಸಲಾಗಿದೆ. 2021 ರ ನಂತರ ಉಲ್ಲಂಘಿಸಿದ ವಿಡಿಯೋ ಅಥವಾ ಫೋಟೊ ಲಭ್ಯವಿರಲಿವೆ. ಈಗಾಗಲೇ 133 ಮಾಲೀಕರಿಗೆ ಈ ರೀತಿಯ ನೋಟೀಸ್ ಕಳುಹಿಸಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.


3 ಪ್ರತಿಕ್ರಿಯೆಗಳು
mcluck Georgia mcluckcasinogm mcluck VT
Harness cosmic energies in space-themed adventures. In what is crown coins, stellar jackpots shine bright. Reach for the stars and grab them!
Sweet Bonanza delivers non-stop excitement with tumbling reels and heart-pounding bonuses. Land sweet bonanza review scatters for free spins packed with up to 100x multipliers. Spin and win big!