Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಬಹಿರಂಗದ ಅಸಲಿ ಕಹಾನಿ.!
    Trending

    ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಬಹಿರಂಗದ ಅಸಲಿ ಕಹಾನಿ.!

    vartha chakraBy vartha chakraಮೇ 8, 20241 ಟಿಪ್ಪಣಿ7 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣ ಹಾಗೂ ಬಹಿರಂಗಗೊಂಡಿರುವ ಪೆನ್ ಡ್ರೈವ್ ಗಳು ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೇ ದೊಡ್ಡ ರೀತಿಯಲ್ಲಿ ಸುದ್ದಿ ಮಾಡುತ್ತಿವೆ.
    ಲೋಕಸಭೆ ಚುನಾವಣೆ ಕಾರಣಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಕೂಡ ಇದೀಗ ಸಾಕಷ್ಟು ಮೋಜುಗಾರ ಅನುಭವಿಸುವಂಥಾಗಿದೆ ಇದರ ನಡುವೆ ಆಘಾತದಿಂದ ತತ್ತರಿಸಿರುವ ಜೆಡಿಎಸ್ ಹೇಗೆ ಸಾವರಿಸಿಕೊಳ್ಳುತ್ತದೆ ಎನ್ನುವುದು ರಾಜಕೀಯ ಪಂಡಿತರ ಊಹೆಗೂ ನಿಲುಕದ ವಿಷಯವಾಗಿದೆ.
    ಪೆನ್ ಡ್ರೈವ್ ಬಹಿರಂಗ ಪ್ರಕರಣ ತನಿಖೆ ನಡೆಯುತ್ತದೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಸಂತ್ರಸ್ತರಿಗೆ ಒಂದು ಮಟ್ಟದಲ್ಲಿ ನ್ಯಾಯವು ಸಿಗುತ್ತದೆ ಆದರೆ ಇದೆಲ್ಲದಕ್ಕಿಂತ ಹೊರತಾಗಿ ಈ ಪ್ರಕರಣ ಹೇಗೆ ಬೆಳಕಿಗೆ ಬಂದಿತು ಪರಕರಣದೊಳಗಿನ ಒಳಸುಳಿಗಳು ಯಾವುವು ಹಿಂದಿನ ರಾಜಕೀಯ ಲೆಕ್ಕಾಚಾರಗಳು ಏನು ಯಾವ ರೀತಿಯಲ್ಲಿ ದ್ವೇಷ ಮತ್ತು ಆಸಹನೆ ಕೆಲಸ ಮಾಡಿದೆ ಎನ್ನುವುದನ್ನು ಅವಲೋಕಿಸುತ್ತ ಹೋದರೆ ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತದೆ ಇಂತಹ ಘಟನಾವಳಿಗಳ ಸುತ್ತ ಒಂದು ಇಣುಕು ಹಾಕುವ ಪ್ರಯತ್ನ ಇಲ್ಲಿ ನಡೆದಿದೆ.
    ದೇವೇಗೌಡರ ಕುಟುಂಬದೊಳಗಿರುವ ರಾಜಕೀಯ ಒಡಕು ಬಿಕ್ಕಟ್ಟು ಹೊಸದೇನೂ ಅಲ್ಲ. ಕುಮಾರಸ್ವಾಮಿ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕೆ ಮೊದಲಿನಿಂದಲೂ ದೊಡ್ಡಗೌಡರ ಕುಟುಂಬದ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದ್ದವು.
    ಇದಕ್ಕೆ ಮುಖ್ಯ ಕಾರಣ, ರೇವಣ್ಣನ ಮಡದಿ ಶ್ರೀಮತಿ ಭವಾನಿ ರೇವಣ್ಣ.ರಾಜಕೀಯ ಮಹಾತ್ವಾಕಾಂಕ್ಷೆ , ಸಂಘಟನಾ ಚಾತುರ್ಯ, ಬಿಕ್ಕಟ್ಟನ್ನು ಗುರುತಿಸಿ ಅದಕ್ಕೆ ತಕ್ಷಣವೇ ಪರಿಹಾರ ರೂಪಿಸುವ ಗುಣ ಹೊಂದಿರುವ ಇವರನ್ನು ಹಾಸನದ ರಾಜಕೀಯ ಆಸಕ್ತರು ಹಾಸನದ ಜಯಲಲಿತಾ ಎನ್ನುತ್ತಾರೆ.
    ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಂತೆ ಭವಾನಿಯವರು ರಾಜಕೀಯ ಮಹದಾಸಕ್ತಿ ಹೊಂದಿದ್ದಾರೆ.
    ಹಾಗೆ ನೋಡಿದರೆ, ಮಾಜಿ ಸಚಿವ ರೇವಣ್ಣ ತಣ್ಣನೆಯ ರಾಜಕಾರಣಿ.ಇಂತಹವರನ್ನು ಕ್ರಿಯಾಶೀಲ ಹಾಗೂ ಚಾಣಾಕ್ಷ ರಾಜಕಾರಣಿಯಾಗಿ ಪರಿವರ್ತನೆ
    ಮಾಡಿದ್ದೇ ಭವಾನಿಯವರ ಮಹಾತ್ವಾಕಾಂಕ್ಷೆಗಳು  ಹಾಸನ ಜಿಲ್ಲೆ ಯಾವ ಕಾರಣಕ್ಕೂ ತಮ್ಮ ಕೈತಪ್ಪಿ ಹೋಗಬಾರದೆನ್ನುವುದು ಭವಾನಿ ರೇವಣ್ಣನವರ ಲೆಕ್ಕಾಚಾರ.
    ಹಲವಾರು ಬಾರಿ ಹಾಸನದ ಸಕ್ರಿಯ ರಾಜಕಾರಣ ಪ್ರವೇಶಿಸಲು ಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ‌. ಇದಕ್ಕೆ ಕಾರಣ ಕುಮಾರಸ್ವಾಮಿ ಎನ್ನುವುದು ಎಲ್ಲರೂ ಬಲ್ಲ ಸಂಗತಿ.ಯಾವಾಗ ಕುಮಾರಸ್ವಾಮಿ ತಾವು ಹಾಸನದ ಜಿಲ್ಲೆಯ ಸಕ್ರಿಯ ರಾಜಕಾರಣ ಪ್ರವೇಶಿಸಲು ಬಿಡದ ಕಾರಣ, ಭವಾನಿ ಅವರು ಕುಮಾರಸ್ವಾಮಿ ಅವರಿಗೆ ಹಾಸನದ ರಾಜಕೀಯದಲ್ಲಿ ತಲೆ ಹಾಕಲು ಬಿಡಲಿಲ್ಲ. ಹೀಗಾಗಿ ಕುಮಾರಸ್ವಾಮಿ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ವಲಸೆ ಬರುವಂತಾಯಿತು.
    ಇದಾದ‌ ನಂತರ ಅವರು ತಮ್ಮ ತವರು ಕೆ.ಆರ್. ನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆಗೆ ಭವಾನಿ ಅಣಿಯಾದರು.ಆಗ ಎಚ್ಚರಗೊಂಡ ಕುಮಾರಸ್ವಾಮಿ ರಾಜಕೀಯ ತಂತ್ರಗಾರಿಕೆಯನ್ನು ರೂಪಿಸಿದರು. ಅಲ್ಲಿ ಪ್ರಭಾವಿಯಾಗಿದ್ದ ಬಿಜೆಪಿಯ ಸಾ.ರಾ.ಮಹೇಶ್ ಅವರನ್ನು ಜೆಡಿಎಸ್ ಗೆ‌ ಕರೆತಂದು ಭವಾನಿ ಅವರ ವಿಧಾನಸಭೆ ಪ್ರವೇಶದ ಬಾಗಿಲನ್ನು ಮುಚ್ಚಿದರು.
    ಇದಾದ ನಂತರ ಅಸಮಾಧಾನದಿಂದ ಕೊತ ಕೊತನೆ ಕುದಿದ ಭವಾನಿ ರೇವಣ್ಣ ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡದಂತೆ ಪ್ರತಿ ತಂತ್ರ ಹೆಣೆದರು. ಇದರಿಂದ ದೊಡ್ಡ ಗೌಡರ ಕುಟುಂಬದಲ್ಲಿ ಬಿರುಗಾಳಿ ಏಳುವಂತಾಯಿತು.
    ರಾಜಕೀಯ ಕಾರಣಕ್ಕಾಗಿ ತಮ್ಮ ಕುಟುಂಬದಲ್ಲಿ ಬಿರುಗಾಳಿ ಏಳಬಾರದು ಎಂಬುದನ್ನು ಮನಗಂಡ ದೇವೇಗೌಡರು ರಾಮನಗರ ಅನ್ನೋ ಹೊಸ ಜಿಲ್ಲೆಯನ್ನೇ ಸೃಷ್ಟಿಸಿ, ಅಲ್ಲಿ ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಪ್ರಾಬಲ್ಯ ಹೊಂದಲು ಅವಕಾಶವಾಯಿತು.
    ಯಾವಾಗ ರಾಮನಗರ ಜಿಲ್ಲೆ, ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಪ್ರಾಬಲ್ಯದ ಕೋಟೆಯಾಯಿತೋ,ಅಂದಿನಿಂದ ತಮ್ಮ ಮಕ್ಕಳ ರಾಜಕೀಯ ಅಸ್ತಿತ್ವಕ್ಕೆ ವೇದಿಕೆ ಬೇಕು ಎಂದು ಕಾರ್ಯತಂತ್ರ ರೂಪಿಸಿದರು ಭವಾನಿ ರೇವಣ್ಣ.
    ಜೆಡಿಎಸ್ ಯುವ ಘಟಕದಲ್ಲಿ ತಮ್ಮ ಪುತ್ರ ಪ್ರಜ್ವಲ್ ರೇವಣ್ಣ ಸಕ್ರಿಯ ವಾಗುವಂತೆ ನೋಡಿಕೊಂಡ ಅವರು ಆತನನ್ನು ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ದಯವಿಟ್ಟು ಆತನಿಗೆ ಅಲ್ಲಿ ಕೆಲಸ ಮಾಡುವಂತೆ ಸೂಚಿಸಿದರು.
    ತಾಯಿಯ ಸೂಚನೆ ತಾತನ ಆಶೀರ್ವಾದ ಪಡೆದ ಪ್ರಜ್ವಲ್ ರೇವಣ್ಣ ಮೈಸೂರು ಜಿಲ್ಲೆಯ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಕಟ್ಟುವ ಕೆಲಸ ಆರಂಭಿಸಿದರು ಪ್ರಜ್ವಲ್ ಸತತವಾಗಿ ಕ್ಷೇತ್ರದಲ್ಲಿಡೆ ಸುತ್ತಿ ಸಂಘಟಿಸಿದ ಪರಿಣಾಮ ಅಲ್ಲಿ ಜೆಡಿಎಸ್ ಪ್ರಬಲವಾಯಿತು. ಇನ್ನೇನು ಪ್ರಜ್ವಲ್ ಈ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ ಎನ್ನುವಾಗಲೇ ಪ್ರತಿ ತಂತ್ರ ಹೆಣದಿದ್ದರು ಕುಮಾರಸ್ವಾಮಿ.
    ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರೊಂದಿಗೆ ವೈಮನಸ್ಯ ಒಂದೇ ಅಸಮಾಧಾನದಿಂದ ಕುದಿಯುತ್ತಿದ್ದ ಹಿರಿಯ ನಾಯಕ ಎಚ್ ವಿಶ್ವನಾಥ್ ಅವರನ್ನು ಜೆಡಿಎಸ್ ಸೇರುವಂತೆ ಮಾಡಿದರು ಅಷ್ಟೇ ಅಲ್ಲ ಅವರಿಗೆ ಪಕ್ಷದ ರಾಜ್ಯ ಅಧ್ಯಕ್ಷ ಸ್ಥಾನವನ್ನು ಧಾರೆ ಎರೆದರು. ಇಲ್ಲಿ ಒಂದು ಗಮನಿಸಬೇಕಾದ ಅಂಶ ಎಂದರೆ ವಿಶ್ವನಾಥ್ ಅವರ ಬಗ್ಗೆ ಸ್ವಾಮಿ ಅವರಿಗೆ ವಿಶೇಷ ಪ್ರೀತಿ ಮಮತೆ ಏನು ಇರಲಿಲ್ಲ ಅವರನ್ನು ರಾಜ್ಯಾಧ್ಯಕ್ಷ ರನ್ನಾಗಿ ನೇಮಕ ಮಾಡುವ ಕಾರ್ಯತಂತ್ರದ ಹಿಂದೆ ಇದ್ದದ್ದು ರಾಜಕೀಯ ಜಾಣತನ ಹಾಗೂ ಹಗೆತನ.
    ರಾಜ್ಯ ರಾಜಕಾರಣದಲ್ಲಿ ವಿಶೇಷ ಛಾಪು ಮೂಡಿಸಿರುವ ಹಿರಿಯ ನಾಯಕ ವಿಶ್ವನಾಥ್ ತಮ್ಮ ಪಕ್ಷಕ್ಕೆ ಬಂದದ್ದರಿಂದ ಖುಷಿಯಾದ ದೇವೇಗೌಡರು ಅವರಿಗೆ ಎಲ್ಲ ರೀತಿಯ ಸಹಕಾರ ನೀಡಿದರು.
    ಇದಾದ ಬಳಿಕ ವಿಧಾನಸಭೆಗೆ ಚುನಾವಣೆ ಘೋಷಣೆ ಆಯಿತು.
    ಸಹಜವಾಗಿ ಪ್ರಜ್ವಲ್ ರೇವಣ್ಣ ತಮಗೆ ವಿಧಾನಸಭೆ ಕ್ಷೇತ್ರದ ಟಿಕೆಟ್ ಬೇಕು ಎಂದು ದೇವೇಗೌಡರ ಮುಂದೆ ಬೇಡಿಕೆ ಮಂಡಿಸಿದರು ಇನ್ನೇನು ದೇವೇಗೌಡರು ಎನ್ನುವಾಗಲೇ ಕುಮಾರಸ್ವಾಮಿ ಆ ಕ್ಷೇತ್ರ ವಿಶ್ವನಾಥ್ ಅವರ ತವರು ಕ್ಷೇತ್ರವಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವವರಿಗೆ ಅವರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಕೊಡದೆ ಇರುವುದು ತಪ್ಪು ಸಂದೇಶವನ್ನು ರವಾನಿಸದಂತಾಗುತ್ತದೆ ಎಂದು ಹೇಳುವ ಮೂಲಕ ವಿಶ್ವನಾಥ್ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿ ಪ್ರಜ್ವಲ್ ಆಸೆಗೆ ತಣ್ಣೀರೆರಚಿದರು.
    ಇದಾದ ನಂತರ ಪ್ರಜ್ವಲ್ ಆತ್ತೂ ಕರೆದು ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಪಡೆಯಬೇಕಾಯಿತು ಆಗಲೂ ಕೂಡ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಗುಟ್ಟಾಗಿ ಏನೂ ಉಳಿದಿಲ್ಲ. ಅಂದಿನ ಚುನಾವಣೆ ಸಮಯದಲ್ಲಿ ಭವಾನಿ ರೇವಣ್ಣ ಹಾಕಿದ ಪಟ್ಟಿಗೆ ಮಾಜಿ ಪ್ರಧಾನಿ ದೇವೇಗೌಡ ಮಣಿಯ ಬೇಕಾಯಿತು. ತಮ್ಮ ತವರು ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟು ನೆರೆಯ ತುಮಕೂರಿಗೆ ವಲಸೆ ಹೋಗುವಂತಾಯಿತು.
    ಇದಾದ ನಂತರ ನಡೆದ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಮತ್ತೆ ಭವಾನಿ ರೇವಣ್ಣ ಸ್ಪರ್ಧೆಯ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಕುಮಾರಸ್ವಾಮಿ ಹಸ್ಪಕ್ಷೇಪ ಮಾಡಲು ಬಿಡದ ರೇವಣ್ಣ ದಂಪತಿಗಳು ಪ್ರತಿ ಹೆಜ್ಜೆಯಲ್ಲೂ ತಮ್ಮ ಕೈ ಮೇಲಾಗುವಂತೆ ನೋಡಿಕೊಂಡರು.
    ಅಂತಿಮವಾಗಿ ಜಿಲ್ಲಾ ಪಂಚಾಯಿತಿಗೆ ಸ್ಪರ್ಧಿಸಿದ ಭವಾನಿ ರೇವಣ್ಣ ಗೆಲುವು ಸಾಧಿಸಿ ಜಿಲ್ಲಾ ಪಂಚಾಯತಿಯ ಸಾರಥ್ಯವನ್ನು ಹಿಡಿದರು ಮತ್ತೆ ಇಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ನಡೆಯುವ ಸಮಯದಲ್ಲಿ ಕುಮಾರಸ್ವಾಮಿ ಯಾವುದೇ ರೀತಿಯಲ್ಲಿ ತಮ್ಮ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ ರೇವಣ್ಣ ದಂಪತಿಗಳು ಈ ಚುನಾವಣೆಯಲ್ಲಿ ತಮ್ಮ ಪುತ್ರ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸಿ ಅವರು ಗೆಲ್ಲುವಂತೆ ನೋಡಿಕೊಂಡರು.
    ಹೀಗೆ ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಹೆಜ್ಜೆ ಹೆಜ್ಜೆಗೂ ರೇವಣ್ಣ ಕುಟುಂಬ ಮತ್ತು ಕುಮಾರಸ್ವಾಮಿ ನಡುವೆ ಆಂತರಿಕ ಸಂಘರ್ಷ ನಡದೇ ಇತ್ತು. ಅದು ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು ಭವಾನಿ ರೇವಣ್ಣ ಅವರು ಹಾಸನ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಲೇಬೇಕು ಎಂದು ಪಟ್ಟು ಹಿಡಿದರು.
    ಭವಾನಿ ರೇವಣ್ಣ ಹಾಕಿದ ಬಿಗಿ ಪಟ್ಟಿನಿಂದ ಕುಮಾರಸ್ವಾಮಿ ತತ್ತರಿಸುವಂತಾಯಿತು.
    ಈ ಬಾರಿ ಚುನಾವಣೆಯಲ್ಲಿ ತಾವು ಮತ್ತು ಎಚ್ ಡಿ ರೇವಣ್ಣ ಮಾತ್ರ ಸ್ಪರ್ಧೆ ಮಾಡುತ್ತೇವೆ ನಮ್ಮ ಕುಟುಂಬದ ಬೇರೆ ಯಾವುದೇ ಸದಸ್ಯರು ಈ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಜೊತೆಗೆ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಮಾಡಿದರು.
    ಇದ್ಯಾವುದೂ ಭವಾನಿ ರೇವಣ್ಣ ಹಿಡಿದ ಪಟ್ಟನ್ನು ಸಡಿಲಗೊಳಿಸಲು ಅವಕಾಶ ನೀಡಲಿಲ್ಲ ಅಂದು ಹಾಸನದಲ್ಲಿ ಶಾಸಕರಾಗಿದ್ದ ಪ್ರೀತಂ ಗೌಡ ಅವರನ್ನು ಮಣಿಸಬೇಕಾದರೆ ತಾವೇ ಇಲ್ಲಿಂದ ಸ್ಪರ್ಧೆ ಮಾಡುತ್ತೇನೆ ಎಂದು ರೇವಣ್ಣ ಘೋಷಿಸಿದರು ಅಷ್ಟೇ ಅಲ್ಲ ತಾವು ಪ್ರತಿನಿಧಿಸುವ ಕ್ಷೇತ್ರದಿಂದ ತಮ್ಮ ಪತ್ನಿ ಸ್ಪರ್ಧಿಸಲಿದ್ದಾರೆ ಎಂಬ ಹೇಳಿಕೆ ನೀಡಿದರು ಈ ಮಟ್ಟಕ್ಕೆ ರೇವಣ್ಣ ಮತ್ತು ಕುಮಾರಸ್ವಾಮಿ ಕುಟುಂಬದ ನಡುವೆ ಸಂಘರ್ಷ ತೀವ್ರ ಪಡೆದುಕೊಂಡಿತು. ಹೀಗಾಗಿ ನಾಮಪತ್ರ ಸಲ್ಲಿಸಲು ಇನ್ನೂ ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ಮಧ್ಯ ಪ್ರವೇಶ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಎರಡು ಕುಟುಂಬಗಳ ನಡುವಿನ ಸಂಘರ್ಷಕ್ಕೆ ತೆರೆ ಎಳೆದರು. ಆದರೆ ಇಲ್ಲಿ ಕುಮಾರಸ್ವಾಮಿ ಕೈ ಮೇಲಾಯಿತು. ಆದರೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸೋಲುವ ಮೂಲಕ ಕುಮಾರಸ್ವಾಮಿಗೆ ದೊಡ್ಡ ಆಘಾತ ನೀಡಿದರು.
    ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಕನಸುಗಾರನಾಗಿ ಮಾಡುವ ಕುಮಾರಸ್ವಾಮಿಯವರ ಆಸೆ ಈಡೇರಲಿಲ್ಲ. ಶಾಸಕರಾದರು ಆಗಲಿ ಎಂದು ಮಾಡಿದ ಪ್ರಯತ್ನ ಕೂಡ ಫಲ ನೀಡಲಿಲ್ಲ ಮತ್ತೊಂದು ಕಡೆಯಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ಸಂಸದರಾಗಿ ಪಕ್ಷದ ಯುವ ಮುಖಂಡನಾಗಿ ಬೆಳೆಯುತ್ತಾ ಸಾಗಿದರೆ ಮತ್ತೊಬ್ಬ ಪತ್ರ ಸೂರಜ್ ರೇವಣ್ಣ ಹಾಸನ ರಾಜಕಾರಣದ ಉತ್ತರಾಧಿಕಾರಿ ಯಾಗುವತ್ತ ದಾಪುಗಾಲಿಟ್ಟರು. ಈ ಬೆಳವಣಿಗೆ ಕುಮಾರಸ್ವಾಮಿ ಅವರ ತಳಮಳಕ್ಕೆ ಕಾರಣವಾಯಿತು.
    ತಮ್ಮ ಪುತ್ರನನ್ನು ಚುನಾಯಿತ ಪ್ರತಿನಿಧಿಯಾಗಿಸಲು ಮಾಡಿದ ಪ್ರಯತ್ನ ವಿಫಲವಾಯಿತು ಪಕ್ಷದ ನಾಯಕತ್ವ ವಹಿಸಿಕೊಳ್ಳುವಲ್ಲಿ ನಿಖಿಲ್ ಅವರಿಗಿಂತ ಪ್ರಜ್ವಲ್ ಅವರೇ ಹೆಚ್ಚು ಪ್ರಭಾವಶಾಲಿಯಾಗುತ್ತಾ ಸಾಗಿದರು. ಹೀಗಿರುವಲ್ಲಿ ಪ್ರಜ್ವಲ್ ರೇವಣ್ಣ ಅವರ ಕಾಮಪುರಾಣ ಬೆಳಕಿಗೆ ಬಂದಿದೆ.
    ಕಳೆದ ಲೋಕಸಭೆ ಚುನಾವಣೆಯಲ್ಲಿ ಇವರ ವಿರುದ್ಧ ಸಮರ ಸಾರಿದ್ಧ ವಕೀಲ ದೇವರಾಜ ಗೌಡ ತಮಗೂ ಹಾಗೂ ರೇವಣ್ಣ ಅವರಿಗೂ ಇರುವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ರೇವಣ್ಣ ಅವರಿಂದ ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಬೇಕು ಎಂದು ಕಾಯುತ್ತಿದ್ದರು ಇವರಿಗೆ ಬ್ರಹ್ಮಾಸ್ತ್ರವಾಗಿ ದೊರೆಕಿದ್ದು ಪ್ರಜ್ವಲ್ ರೇವಣ್ಣ ಅವರ ಕಾಮಕಾಂಡ.
    ಪ್ರಜ್ವಲ್ ಅವರ ಅಕ್ರಮದ ಸಿಡಿ ಮತ್ತು ಪೆನ್ ಡ್ರೈವ್ ತೆಗೆದಿಟ್ಟುಕೊಂಡ ದೇವರಾಜ ಗೌಡ ಅವರು ನೇರವಾಗಿ ಕುಮಾರಸ್ವಾಮಿ ಅವರ ಬಾಗಿಲು ಪಡೆದರು ಭವಾನಿ ರೇವಣ್ಣ ಮತ್ತು ಅವರ ಮಕ್ಕಳ ವಿರುದ್ಧ ಅಸಮಾಧಾನದಿಂದ ಕುದಿಯುತ್ತಿದ್ದ ಕುಮಾರಸ್ವಾಮಿ ತಮಗೆ ಸಹಾಯ ಮಾಡಬಹುದು ಎಂದು ದೇವರಾಜ ಗೌಡ ಅವರಲ್ಲಿಗೆ ಧಾವಿಸಿದರು
    ತಮ್ಮ ಬಳಿ ಬಂದ ದೇವರಾಜ ಗೌಡ ಅವರೊಂದಿಗೆ ಸುಧೀರ್ನ ಮಾತುಕತೆ ನಡೆದ ಕುಮಾರಸ್ವಾಮಿ ಅವರು ಪ್ರಜ್ವಲ್ ಅವರ ಅಕ್ರಮದ ಬಗ್ಗೆ ಮಾತನಾಡುವ ಸಮಯ ಬರುತ್ತದೆ ಅಲ್ಲಿವರೆಗೆ ಸುಮ್ಮನಿರಿ ಎಂದು ವಕೀಲ ದೇವರಾಜ ಗೌಡ ಅವರನ್ನು ಸಮಾಧಾನ ಪಡಿಸಿದರು. ಅಷ್ಟೇ ಅಲ್ಲ ರೇವಣ್ಣ ಕುಟುಂಬದ ವಿರುದ್ಧ ತಾವು ಸಾರಿರುವ ಸಮರಕ್ಕೆ ತಮ್ಮ ಬೆಂಬಲವಿದೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ನೀವು ಈ ನಿಟ್ಟಿನಲ್ಲಿ ಮುಂದುವರೆಯಿರಿ ಅವಕಾಶ ಸಿಕ್ಕಾಗ ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳಿ ಸಾಗ ಹಾಕಿದರು.
    ಅಂದು ಕುಮಾರಸ್ವಾಮಿ ತಮ್ಮ ವೈಯಕ್ತಿಕ ಸಂಘರ್ಷಕ್ಕಿಂತ ಕುಟುಂಬದ ಹಿತ ಮುಖ್ಯ ಅಲ್ಲದೆ ಈ ಪ್ರಕರಣದಿಂದ ತಮ್ಮ ಪಕ್ಷ ಮತ್ತು ಕುಟುಂಬಕ್ಕೂ ದೊಡ್ಡ ಆಘಾತ ಉಂಟು ಮಾಡಲಿದೆ ಎಂದು ಭಾವಿಸಿದ್ದರೇ ಈ ಪ್ರಕರಣ ಇಂದು ಪಡೆದಿರುವಷ್ಟು ಪ್ರಾಬಲ್ಯವನ್ನು ಪಡೆಯುತ್ತಿರಲಿಲ್ಲ. ಕುಮಾರಸ್ವಾಮಿ, ಮನಸ್ಸು ಮಾಡಿದ್ದರೆ ಅಂದು ದೇವರಾಜು ಗೌಡ ಮತ್ತು ರೇವಣ್ಣ ನಡುವೆ ಸಂಧಾನ ಏರ್ಪಡಿಸಿ ಎಲ್ಲವನ್ನು ಸರಿಪಡಿಸಬಹುದಾಗಿತ್ತು.
    ಆದರೆ ಬಹುಶಃ ಕುಮಾರಸ್ವಾಮಿ ದೇವರಾಜ ಗೌಡ ಹೇಳಿದ ಮಾತನ್ನು ಒಂದು ಗಂಭೀರವಾಗಿ ಪರಿಗಣಿಸಲಿಲ್ಲ ಅಲ್ಲದೆ ಪ್ರಜ್ವಲ್ ಅವರು ಈ ಮಟ್ಟದ ದೌರ್ಜನ್ಯ ಎಸಗಿದ್ದಾರೆ ಎಂದು ಭಾವಿಸಿರಲಿಲ್ಲವೇನೋ. ಸರಿ ಲೋಕಸಭೆ ಚುನಾವಣೆ ನಿಗದಿಯಾಯಿತು ಪ್ರಜ್ವಲ್ ರೇವಣ್ಣ ಮತ್ತೊಮ್ಮೆ ಕಣಕ್ಕಿಳಿಯುವ ಪ್ರಸ್ತಾಪ ಮಾಡಿದರು ಎಂದಿನಂತೆ ಕುಮಾರಸ್ವಾಮಿ ಇದಕ್ಕೆ ವಿರೋಧ ವ್ಯಕ್ತಪಡಿಸಿದರು ಇದರ ಸುಳಿವರಿತ ದೇವೇಗೌಡ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಟಿಕೆಟ್ ಹಂಚಿಕೆಗೂ ಮೊದಲೇ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂದು ಘೋಷಿಸಿದರು.
    ಇದರಿಂದ ಅಸಮಾಧಾನ ಗೊಂಡರು ಕುಮಾರಸ್ವಾಮಿ ತೋರಿಸಿಕೊಳ್ಳದೆ ಬಿಜೆಪಿ ಜೆಡಿಎಸ್ ಮೈತ್ರಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು ರಾಷ್ಟ್ರೀಯ ಮಟ್ಟದಲ್ಲಿ ಜೆಡಿಎಸ್ ಹೊಸ ಮೈತ್ರಿಯ ಅಧ್ಯಾಯ ಬರೆದು ಎನ್ ಡಿಎ ಮೈತ್ರಿಕೂಟದ ಅಂಗ ಪಕ್ಷವಾಯಿತು. ಈ ಅವಕಾಶ ಬಳಸಿಕೊಂಡ ಕುಮಾರಸ್ವಾಮಿ ಹಾಸನ ಲೋಕಸಭೆಯಿಂದ ಪ್ರಜ್ವಲ್ ಸ್ಪರ್ಧೆಗೆ ಬಿಜೆಪಿ ಸಹಮತ ಇಲ್ಲ ಎಂದು ಹೇಳಿ ಪರ್ಯಾಯ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದರು ಆದರೆ ಭವಾನಿ ರೇವಣ್ಣ ಬೇರೆಯೇ ಆದ ತಂತ್ರಗಾರಿಕೆಯನ್ನು ರೂಪಿಸಿ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪುತ್ರನ ಸ್ಪರ್ಧೆಗೆ ಹಸಿರು ನಿಶಾನೆ ದೊರಕಿಸಿಕೊಂಡರು.
    ಇದೀಗ ಮತದಾನಕ್ಕೆ ಎರಡು ದಿನ ಇರುವಂತೆ ಪ್ರಜ್ವಲ್ ರೇವಣ್ಣ ಅವರ ಕಾಮಕಾಂಡದ ಪೆನ್ ಡ್ರೈವ್ ಬಿಡುಗಡೆಯಾಯಿತು ಈ ಬಗ್ಗೆ  ಸುದ್ದಿ ಬರುತ್ತಿದ್ದಂತೆ ಕುಮಾರಸ್ವಾಮಿ ನೀಡಿದ ಮೊದಲ ಪ್ರತಿಕ್ರಿಯೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು..
    ಇದಾದ ಬಳಿಕ ತಮಗೂ ಇದಕ್ಕೂ ಸಂಬಂಧವಿಲ್ಲ ರೇವಣ್ಣ ಕುಟುಂಬ ಹಾಸನದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ವಿಧಿಸಲಿ ಎಂದು ಹೇಳುವ ಮೂಲಕ ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದರು ಈ ಮೂಲಕ ಕುಮಾರಸ್ವಾಮಿ ಅವರ ಮನದಾಳ ಎಲ್ಲರಿಗೂ ತಿಳಿದೇ ಹೋಯ್ತು.
    ಆದರೆ ಪ್ರಜ್ವಲ್ ರೇವಣ್ಣ ಅವರ ಕಾಮ ಕಂಡ ಕುಮಾರಸ್ವಾಮಿ ಅವರು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪಕ್ಷ ಮತ್ತು ತಮ್ಮ ಕುಟುಂಬಕ್ಕೆ ಹೊಡೆದ ನೀಡಲು ಆರಂಭಿಸಿದಾಗ ಬೆಚ್ಚಿಬಿದ್ದರು.
    ತಕ್ಷಣವೇ ಸಾವರಿಸಿಕೊಂಡಂತೆ ಎದ್ದು ನಿಂತ ಕುಮಾರಸ್ವಾಮಿ ತಮ್ಮ ಕುಟುಂಬ ಮತ್ತು ಪಕ್ಷದ ರಕ್ಷಣೆಗೆ ದಾವಿಸಿದರು. ತಮಗೆ ಈಗ ಮೈತ್ರಿ ಮುಖ್ಯವಲ್ಲ ತಮ್ಮ ಪಕ್ಷಕ್ಕೆ ಎದುರಾಗಿರುವ ಸವಾಲನ್ನು ಮೆಟ್ಟಿ ನಿಲ್ಲಬೇಕು ತಮ್ಮ ಕುಟುಂಬಕ್ಕೆ ನೀಡುವುದು ಮೊದಲ ಆದ್ಯತೆಯಾಗಿದೆ ಹೀಗಾಗಿ ಪೆನ್ ಡ್ರೈವ್ ಪ್ರಕರಣದ ಪಿತೂರಿಯ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಘೋಷಿಸಿದ್ದಾರೆ.
    ಆದರೆ ಈ ಪ್ರಕರಣ ಈಗಾಗಲೇ ಜೆಡಿಎಸ್ ಮತ್ತು  ದೊಡ್ಡ ಗೌಡರ ಕುಟುಂಬಕ್ಕೆ ದೊಡ್ಡ ಆಘಾತ ಮತ್ತು ಹೊಡೆತ ನೀಡಿದೆ. ಈ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಅವರಿಗೆ ತಕ್ಕ ಶಿಕ್ಷೆಯಾಗುವುದಂತೂ ಸತ್ಯ. ಹಾಗೆಯೇ ರೇವಣ್ಣ ಕುಟುಂಬ ಹಾಸನ ರಾಜಕಾರಣದ ಮೇಲೆ ಹೊಂದಿದ್ದ ಬಿಗಿ ಹಿಡಿತವನ್ನು ಕಳೆದುಕೊಂಡಿದ್ದು ಕೂಡ ನಿಜ ಇನ್ನೇನಿದ್ದರೂ ಹಾಸನವಿರಲಿ, ಮಂಡ್ಯವಾಗಲಿ ರಾಮನಗರ ವೆ ಇರಲಿ, ಈ ಎಲ್ಲವೂ ಕುಮಾರಸ್ವಾಮಿ ಅವರ ಆಣತಿಯಂತೇ ನಡೆಯಬೇಕು.

    #hdrevanna #kumaraswamy #prajwalrevanna Bhavani revanna News Politics Trending Varthachakra ಚುನಾವಣೆ ನ್ಯಾಯ ರಾಜಕೀಯ ಲೈಂಗಿಕ ಕಿರುಕುಳ ಸಿದ್ದರಾಮಯ್ಯ ಹಾಸನ
    Share. Facebook Twitter Pinterest LinkedIn Tumblr Email WhatsApp
    Previous Articleಅಪರೂಪದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಒಪ್ಪಿಕೊಂಡು ಕೋವಿಡ್ 19 ಲಸಿಕೆಯನ್ನು ಹಿಂಪಡೆಯುತ್ತಿರುವ ಆಸ್ಟ್ರಾಜೆನೆಕಾ
    Next Article ಶಂಕರ್ ಬಿದರಿ ಫೇಸ್ ಬುಕ್ ನಲ್ಲಿ ಏನಿದೆ ಗೊತ್ತಾ.
    vartha chakra
    • Website

    Related Posts

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025

    ಜನಾರ್ದನ ರೆಡ್ಡಿ ಮತ್ತೆ ಜೈಲು ಪಾಲು

    ಮೇ 6, 2025

    1 ಟಿಪ್ಪಣಿ

    1. marketplace-akkauntov-top.ru_nctlqb on ಏಪ್ರಿಲ್ 20, 2025 12:08 ಅಪರಾಹ್ನ

      биржа аккаунтов https://marketplace-akkauntov-top.ru

      Reply

    Leave A Reply Cancel Reply

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಗೆಲುವಿಗಾಗಿ ವಿಶೇಷ ಪೂಜೆ.

    ಆಪರೇಷನ್ ಸಿಂಧೂರ

    ಮಹಿಳೆಯರೇ‌ ಹುಷಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • казино вулкан бесплатные играть ರಲ್ಲಿ ಬೇಸಿಗೆಯಲ್ಲಿ ರಾಜ್ಯಕ್ಕೆ ಎಷ್ಟು ವಿದ್ಯುತ್ ಬೇಕು ಗೊತ್ತಾ.
    • Floydfox ರಲ್ಲಿ ದರೋಡೆ ಗ್ಯಾಂಗ್ ದಾವಣಗೆರೆಯಲ್ಲಿ
    • сервисные центры москвы ರಲ್ಲಿ Crypto ವಂಚಕ Arrest.
    Latest Kannada News

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    Pakistan How ಈಸ್ ದ ಜೋಶ್ ! #india #pakistan #facts #war #warzone #news #modi #soldier #worldnews
    Subscribe