ಬೆಂಗಳೂರು,ಮೇ.12:
ರಾಜ್ಯದಲ್ಲಿ ತೀವ್ರ ಸ್ವರೂಪವಾದ ಬರ ಪರಿಸ್ಥಿತಿ ಇದೆ ಮಳೆ-ಬೆಳೆ ಇಲ್ಲದೆ ಜನ ಭವಣೆ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 15 ರಂದು ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅಲ್ಲದೇ ತಮ್ಮ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ಸೇರಿದಂತೆ ಯಾರೂ ಸಹ ನನ್ನ ಜನ್ಮ ದಿನವನ್ನು ಆಚರಿಸಬಾರದು ಎಂದು ಮನವಿ ಮಾಡಿದ್ದಾರೆ.
ಹುಟ್ಟುಹಬ್ಬದಂದು ಯಾರೂ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳಬಾರದು, ಕಟೌಟ್, ಪೋಸ್ಟರ್‍ಸ್ ಹಾಕುವುದಾಗಲಿ, ಮಾಧ್ಯಮಗಳಲ್ಲಿ ಜಾಹೀರಾತು ನೀಡುವುದಾಗಲಿ ಮಾಡಬಾರದು
ಎಂದು ಕರೆ ನೀಡಿದ್ದಾರೆ
ನಿಮ್ಮ ಪ್ರೀತಿಯಷ್ಟೇ ನನಗೆ ಸಾಕು, ಅದುವೇ ನನಗೆ ಶ್ರೀರಕ್ಷೆ ಎಂದು ತಿಳಿಸಿದ್ದು, ಮೇ 15 ರಂದು ಚುನಾವಣಾ ಪ್ರಚಾರ ನಿಮಿತ್ತ ಉತ್ತರ ಭಾರತ ಪ್ರವಾಸ ಕೈಗೊಳ್ಳುತ್ತಿದ್ದೇನೆ ಅಂದು ಯಾರಿಗೂ ನಾನು ಸಿಗುವುದಿಲ್ಲ. ತಪ್ಪು ತಿಳಿಯದೆ ತಾವು ಇದ್ದಲ್ಲಿಂದಲೇ ನನ್ನನ್ನು ಆರ್ಶೀವದಿಸಿ, ಹಾರೈಸಿ ಎಂದು ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡಿದ್ದಾರೆ.


1 ಟಿಪ್ಪಣಿ
betmgm Virginia betmgm-play online mgm casino