ಬೆಂಗಳೂರು,ಜು.3-
ರಾಜ್ಯ ಪೊಲೀಸ್ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. ಲಾಬೂರಾಮ್, ರವಿಕಾಂತೇಗೌಡ,ಶಶಿಕುಮಾರ್ ಸೇರಿದಂತೆ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪೊಲೀಸ್ ಆಡಳಿತ ಯಂತ್ರ ಮಾರ್ಪಾಟು ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಸೋಮವಾರ ರಾತ್ರಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ,ಹಲವರ ಸಲಹೆಯ ಮೇರೆಗೆ ವರ್ಗಾವಣೆ ಪಟ್ಟಿ ತಯಾರಿಸಿದರು.
ಅದರಂತೆ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಸೇರಿದಂತೆ ರಾಜ್ಯದ 25 ಮಂದಿ ಐಪಿಎಸ್ ಅಧಿಕಾರಿಗಳನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರೇಣುಕಾ ಸುಕುಮಾರ್ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಎಐಜಿಪಿಯಾಗಿ ಡಿಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಖಡಕ್ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರನ್ನು ನೇಮಿಸಲಾಗಿದೆ.
ನೇಹಾ-ಅಂಜಲಿ ಕೊಲೆ ಪ್ರಕರಣಗಳು ನಡೆದಾಗ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಾರ್ವಜನಿಕರು ಪ್ರತಿಭಟನೆ ಸಹ ಮಾಡಿದ್ದರು.
ಕೊನೆಗೂ ಸರ್ಕಾರ ಸಾರ್ವಜನಿಕರ ಹೋರಾಟಕ್ಕೆ ಮತ್ತು ಕಾಂಗ್ರೆಸ್ ಮುಖಂಡರ ಮನವಿಗೆ ಸ್ಪಂದಿಸಿ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದಲ್ಲದೆ ಕೇಂದ್ರ ವಲಯ ಐಜಿಪಿಯಾಗಿದ್ದ ರವಿಕಾಂತೇಗೌಡ ಅವರನ್ನು ವರ್ಗಾಯಿಸಿ ಗುಪ್ತಚರದಳದ ಹೆಚ್ಚುವರಿ ಪೊಲೀಸ್ ನಿರ್ದೇಶಕ ಲಾಭೂರಾಮ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮೈಸೂರು ಪೊಲೀಸ್ ಆಯುಕ್ತರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳ ಎಸ್ ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆ ಯಾರು ಎಲ್ಲಿಗೆ:
ಲಾಬೂರಾಮ್: ಐಜಿಪಿ ಕೇಂದ್ರ ವಲಯ
ರವಿಕಾಂತೇಗೌಡ: ಐಜಿಪಿ ಕೇಂದ್ರ ಕಚೇರಿ-1
ಡಾ.ಕೆ.ತ್ಯಾಗರಾಜನ್: ಐಜಿಪಿ, ಐಎಸ್ಡಿ
ಎನ್.ಶಶಿಕುಮಾರ್: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್
ಬಿ.ರಮೇಶ್: ಡಿಐಜಿಪಿ ಪೂರ್ವ ವಲಯ ದಾವಣಗೆರೆ
ಸೀಮಾ ಲಾಟ್ಕರ್: ಪೊಲೀಸ್ ಆಯುಕ್ತ, ಮೈಸೂರು ನಗರ
ರೇಣುಕಾ ಸುಕುಮಾರ್: ಎಐಜಿಪಿ (ಡಿಜಿ ಕಚೇರಿ)
ಸಿ.ಕೆ.ಬಾಬಾ: ಎಸ್ಪಿ, ಬೆಂಗಳೂರು ಗ್ರಾಮಾಂತರ
ಎನ್.ವಿಷ್ಣುವರ್ಧನ್: ಎಸ್ಪಿ, ಮೈಸೂರು ಜಿಲ್ಲೆ
ಸುಮನ್.ಡಿ.ಪೆನ್ನೇಕರ್: ಎಸ್ಪಿ, ಬಿಎಂಟಿಎಫ್
ಸಿ.ಬಿ.ರಿಷ್ಯಂತ್: ಎಸ್ಪಿ, ವೈರ್ಲೆಸ್
ಚನ್ನಬಸವಣ್ಣ: ಎಐಜಿಪಿ, ಆಡಳಿತ ಪ್ರಧಾನ ಕಚೇರಿ
ಎಂ.ನಾರಾಯಣ್: ಎಸ್ಪಿ, ಉತ್ತರ ಕನ್ನಡ
ಎಸ್.ಫಾತಿಮಾ: ಡಿಸಿಪಿ, ಬೆಂಗಳೂರು ಆಗ್ನೇಯ ವಿಭಾಗ
ಅರುಣಾಂಗ್ಷು ಗಿರಿ: ಎಸ್ಪಿ, ಸಿಐಡಿ
ಡಿ.ಎಲ್.ನಾಗೇಶ್: ಡಿಸಿಪಿ, ಸಿಎಆರ್ಹೆಚ್ ಪ್ರಧಾನ ಕಚೇರಿ, ಬೆಂಗಳೂರು,ಪದ್ಮಿನಿ ಸಾಹೋ: ಡಿಸಿಪಿ ಆಡಳಿತ, ಬೆಂಗಳೂರು ನಗರ
ಪ್ರದೀಪ್ ಗುಂಟಿ: ಎಸ್ಪಿ, ಬೀದರ್ ಜಿಲ್ಲೆ
ಯತೀಶ್.ಎನ್: ಎಸ್ಪಿ, ದಕ್ಷಿಣ ಕನ್ನಡ ಜಿಲ್ಲೆ
ಮಲ್ಲಿಕಾರ್ಜುನ ಬಾಲದಂಡಿ: ಎಸ್ಪಿ, ಮಂಡ್ಯ ಜಿಲ್ಲೆ
ವಿ.ಜೆ.ಡಾ.ಶೋಭಾ ರಾಣಿ: ಎಸ್ಪಿ, ಬಳ್ಳಾರಿ ಜಿಲ್ಲೆ
ಡಾ.ಟಿ.ಕವಿತಾ: ಎಸ್ಪಿ, ಚಾಮರಾಜನಗರ ಜಿಲ್ಲೆ
ಬಿ.ನಿಖಿಲ್: ಎಸ್ಪಿ, ಕೋಲಾರ ಜಿಲ್ಲೆ
ಕುಶಾಲ್ ಚೌಕ್ಸಿ: ಎಸ್ಪಿ, ಚಿಕ್ಕಬಳ್ಳಾಪುರ ಜಿಲ್ಲೆ
ಮಹಾನಿಂಗ್ ನಂದಗಾವಿ: ಡಿಸಿಪಿ ಕಾನೂನು ಸುವ್ಯವಸ್ಥೆ ಹುಬಳ್ಳಿ-ಧಾರವಾಡ
Previous Articleಸಿಎಂ ಕುರ್ಚಿ ಉಳಿಸಿಕೊಳ್ಳಲು ವಾಲ್ಮೀಕಿ ಹಗರಣ.
Next Article ಬಿಜೆಪಿ ನಾಯಕರ ಬಂಧನ ಮತ್ತು ಬಿಡುಗಡೆ..
1 ಟಿಪ್ಪಣಿ
вызов нарколога на дом частная скорая помощь вызов нарколога на дом частная скорая помощь .