ಲಕ್ನೋ(ಉತ್ತರ ಪ್ರದೇಶ): ವಾರಣಾಸಿಯ ಗ್ಯಾನ್‌ವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಹಾಗೂ ನಂದಿ ವಿಗ್ರಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಸರ್ವೇ ಕಾರ್ಯದ ವೇಳೆ ಈ ಸಂಗತಿ ಬಹಿರಂಗವಾಗಿದೆ. ಮಸೀದಿಯ ಬಾವಿಯೊಳಗೆ ಪತ್ತೆಯಾದ ಶಿವಲಿಂಗ 12 ಅಡಿ, 8 ಇಂಚು ವ್ಯಾಸ ಹೊಂದಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಜೈನ್ ಮಾಹಿತಿ ನೀಡಿದ್ದಾರೆ.
ವಾರಣಾಸಿ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗ್ಯಾನ್‌ವಾಪಿ ಮಸೀದಿಯಲ್ಲಿ ವಿಡಿಯೋ ಸರ್ವೇ ಕಾರ್ಯ ಆರಂಭವಾಗಿತ್ತು. ಮಸೀದಿಯಲ್ಲಿ ಈವರೆಗೆ ಶೇ.65 ರಷ್ಟು ಸರ್ವೇ ಕಾರ್ಯ ಮುಗಿದಿದ್ದು, ಮಂಗಳವಾರ(ಮೇ 17) ನ್ಯಾಯಾಲಯಕ್ಕೆ ಸರ್ವೇ ರಿಪೋರ್ಟ್ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಜನರು ಮಸೀದಿ ಬಳಿ ಹೋಗದಂತೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಗ್ಯಾನ್‌ವಾಪಿ ಮಸೀದಿ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನೆರವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮೀ ದೇವಿ, ಸೀತಾ ಸಾಹು ಮತ್ತಿತರರು 2021ರ ಏಪ್ರಿಲ್ 21ರಂದು ವಾರಣಾಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯ, ಗ್ಯಾನ್‌ವಾಪಿ ಮಸೀದಿ ಸಂಕೀರ್ಣದಲ್ಲಿ ವಿಡಿಯೋ ಚಿತ್ರೀಕರಣ ನಡೆಸುವಂತೆ ಏಪ್ರಿಲ್ 26ರಂದು ಆದೇಶಿಸಿತ್ತು.
ಗ್ಯಾನ್‌ವಾಪಿ ಮಸೀದಿಯಲ್ಲಿ ನಂದಿ ವಿಗ್ರಹ, ಶಿವಲಿಂಗ ಪತ್ತೆ
Previous Articleಭಾರತ ಮೂಲದ ದೇವಸಹಾಯಮ್‌ಗೆ ವ್ಯಾಟಿಕನ್ ಸಂತ ಪದವಿ
Next Article ಹೊಟ್ಟೆಪಾಡಿಗಾಗಿ 30 ವರ್ಷ ಗಂಡಸಿನಂತಿದ್ದ ಮಹಿಳೆ!