ಬೆಂಗಳೂರು, ಆ. 8:
ಕನಕಪುರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಉಪಮುಖ್ಯಮಂತ್ರಿ ಆದ ನಂತರ ಕ್ಷೇತ್ರದ ಭೇಟಿ ಕಡಿಮೆಯಾಗಿದೆ ಮತದಾರರೊಂದಿಗೆ ಈ ಹಿಂದಿನಂತೆ ಒಡನಾಟ ಕಡಿಮೆ ಎಂಬ ಆರೋಪಗಳು ಹೆಚ್ಚಾಗಿದೆ.
ಈ ಹಿಂದೆ ಕ್ಷೇತ್ರದ ಜನಸಾಮಾನ್ಯರೊಂದಿಗೆ ನಿರಂತರ ಒಡನಾಟ ಇಟ್ಟುಕೊಳ್ಳುವ ಮೂಲಕ ಜನಪ್ರಿಯ ಶಾಸಕರು ಎಂಬ ಕೀರ್ತಿಗೆ ಭಾಜನರಾಗಿದ್ದರು ಆದರೆ ಈಗ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯ ಜೊತೆಗೆ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸುತ್ತಿರುವದರಿಂದ ಈ ಹಿಂದಿನಂತೆ ಕ್ಷೇತ್ರದ ಜನರ ಅಹವಾಲು ಕೇಳಲು ಸಮಯ ಸಾಕಾಗುತ್ತಿಲ್ಲ.
ಕ್ಷೇತ್ರದಲ್ಲಿ ಶಾಸಕರ ಕಚೇರಿ ಇದ್ದು ಕೂಡ ಅಲ್ಲಿ ತ್ವರಿತವಾಗಿ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರೂ ಕೂಡ ಮತದಾರರಿಗೆ ತಮ್ಮ ಪ್ರತಿನಿಧಿಯನ್ನು ಮುಖತಃ ಭೇಟಿಯಾಗುವ ಅವಕಾಶ ಲಭಿಸುತ್ತಿಲ್ಲ ಇದಕ್ಕಾಗಿ ಅವರು ಬೆಂಗಳೂರಿನವರೆಗೆ ಬರಬೇಕಾಗಿದೆ.
ಈ ಬಗ್ಗೆ ಕ್ಷೇತ್ರದ ಹಲವು ಮತದಾರರು ತಮ್ಮ ನೋವು ಹೇಳಿಕೊಂಡ ಪರಿಣಾಮವಾಗಿ ಇದೀಗ ಶಿವಕುಮಾರ್ ಕನಕಪುರಕ್ಕೆ ಭೇಟಿ ನೀಡಿ ಜನಸಾಮಾನ್ಯರ ಅಹಬಾಲು ಆಲಿಸಲು ತೀರ್ಮಾನಿಸಿದ್ದಾರೆ
ಅವರು ಪ್ರತಿ ತಿಂಗಳು 2 ನೇ ಮತ್ತು 4 ನೇ ಶನಿವಾರ ಕನಕಪುರ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ.
ಆ ದಿನಗಳಂದು ಕ್ಷೇತ್ರದ ಜನರ ಸಮಸ್ಯೆ, ಅಹವಾಲು ಆಲಿಸಲಿದ್ದಾರೆ.
ಕನಕಪುರ ಕ್ಷೇತ್ರದ ಜನರು ತಮ್ಮನ್ನು ಭೇಟಿ ಮಾಡಲು ಬೆಂಗಳೂರಿಗೆ ಬರುವುದು ಬೇಡ. ತೊಂದರೆ ತೆಗೆದುಕೊಳ್ಳುವುದು ಬೇಡ. ನಾನೇ ಕನಕಪುರಕ್ಕೆ ಬಂದು ನಿಮ್ಮ ಕಷ್ಟ-ಸುಖ ವಿಚಾರಿಸಿ, ಅಹವಾಲು ಸ್ವೀಕರಿಸಲಿದ್ದೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.