ಬೆಂಗಳೂರು.
ತಮ್ಮ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವರನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.
ಆದರೆ ದರ್ಶನ್ ಅಷ್ಟು ಶೀಘ್ರದಲ್ಲಿ ಜೈಲಿನಿಂದ ಹೊರಬರಲು ಸಾಧ್ಯವಿಲ್ಲ ಎನ್ನುತ್ತಾರೆ ಕಾನೂನು ತಜ್ಞರು. ಈ ಪ್ರಕರಣದಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ ಅಲ್ಲದೆ ಅವರು ಹತ್ಯೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಸಾಕ್ಷಿಗಳು ದೊರಕಿವೆ. ಹೀಗಾಗಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲಿದೆ ಶಿಕ್ಷೆ ಪೂರ್ಣಗೊಂಡ ನಂತರವಷ್ಟೆ ಅವರು ಹೊರಬರುವ ಸಾಧ್ಯತೆ ಇದೆ ಎನ್ನುತ್ತಾರೆ.
ಜೈಲಿನಲ್ಲಿರುವ ದರ್ಶನ್ ತಮಗೆ ಮನೆ ಊಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಇವರ ವಿರುದ್ಧ ಮಹತ್ವದ ಸಾಕ್ಷಿಗಳು ಇರುವುದನ್ನು ಕೋರ್ಟ್ ಗಮನಿಸಿದೆ. ಹೀಗಾಗಿ ಅಷ್ಟು ಸುಲಭದಲ್ಲಿ ಇವರಿಗೆ ಜಾಮೀನು ಕೂಡ ಸಿಗುವುದು ಕಷ್ಟ ಎನ್ನುತ್ತಾರೆ.
ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪವಿತ್ರ ಗೌಡ ಅವರಿಗೆ ಮಹಿಳೆ ಎಂಬ ಕಾರಣಕ್ಕಾಗಿ ಕೆಲವು ಕಾನೂನಿನ ರಿಯಾಯಿತಿಗಳು ಸಿಗುತ್ತವೆ ಅವರಿಗೆ ಮೊದಲು ಜಾಮೀನು ಸಿಗುತ್ತದೆ ಆನಂತರದಲ್ಲಿ ಉಳಿದ ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ.
Previous Articleರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರು.
Next Article ಸುಮ್ಮನಿರಬೇಕಾ ಅಂದ್ರು ದಿನೇಶ್ ಗುಂಡೂರಾವ್

