ಬೆಂಗಳೂರು, ಸೆ.4:
ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲಿ ಇಂತಹ ಆರೋಪಗಳ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚಿಸಬೇಕು ಎಂಬ ಅಗ್ರಹ ಕೇಳಿ ಬಂದಿದೆ.
ನಿರ್ದೇಶಕಿ ಕವಿತಾ ಲಂಕೇಶ್ ನೇತೃತ್ವದ ಫೈರ್ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ತನಿಖೆಗೆ ಆಯೋಗ ರಚಿಸಬೇಕು ಎಂದು ಮನವಿ ಮಾಡಿದೆ
ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇತರ ಅನೇಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇವೆ ಎಂದು ಕವಿತಾ ಲಂಕೇಶ್ ತಿಳಿಸಿದ್ದಾರೆ
ಲಿಂಗ ಸಮಾನತೆ ಬೆಂಬಲಿಸುವ ಕನ್ನಡ ಚಲನಚಿತ್ರೋದ್ಯಮ ಮತ್ತು ವಿವಿಧ ಕ್ಷೇತ್ರಗಳ 153 ಗಣ್ಯರು ಈ ಮನವಿ ಪತ್ರಕ್ಕೆ ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ’ ಎಂದು ಹೇಳಿದರು
ಎಲ್ಲ ಮಹಿಳಾ ಕಲಾವಿದರಿಗೆ ತಾರತಮ್ಯವಿಲ್ಲದಂತೆ, ಆರೋಗ್ಯಯುತವಾದ ಕೆಲಸದ ವಾತಾವರಣ ಸೃಷ್ಟಿಸಲು ಅಗತ್ಯ ನೀತಿಗಳನ್ನು ರೂಪಿಸಬೇಕು. ಚಿತ್ರೀಕರಣ ಸ್ಥಳದಲ್ಲಿ ಕಲಾವಿದೆಯರಿಗೆ ಸುರಕ್ಷತೆ ಮತ್ತು ಕನಿಷ್ಠ ಸವಲತ್ತುಗಳನ್ನು ಒದಗಿಸಬೇಕೆಂದು ಸಂಸ್ಥೆ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗಿದೆ.
ಕವಿತಾ ಲಂಕೇಶ್ ಅಧ್ಯಕ್ಷತೆಯ ಸಂಸ್ಥೆಯ ಈ ನಡೆಗೆ ನಟರಾದ ಸುದೀಪ್, ಕಿಶೋರ್, ದಿಗಂತ್, ಸಿಹಿ ಕಹಿ ಚಂದ್ರು, ವಿನಯ್ ರಾಜ್‌ಕುಮಾರ್ ನಟಿಯರಾದ ಪೂಜಾ ಗಾಂಧಿ, ಶ್ರುತಿ ಹರಿಹರನ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಚೈತ್ರಾ ಜೆ.ಆಚಾರ್, ನಿರ್ದೇಶಕರಾದ ಬಿ.ಸುರೇಶ್, ಪವನ್‌ಕುಮಾರ್, ಚೈತನ್ಯ ಕೆ.ಎಂ, ಗಿರಿರಾಜ್ ಬಿ.ಎಂ, ಜಯತೀರ್ಥ, ಸಾಹಿತಿಗಳಾದ ವಿಜಯ್ ಶಂಕರ್, ರಹಮತ್ ತರಿಕೇರೆ, ಬಂಜಗೆರೆ ಜಯಪ್ರಕಾಶ್, ಕಲಾವಿದರಾದ ವಿಜಯಮ್ಮ, ಚಂಪಾ ಶೆಟ್ಟಿ, ಜಯಲಕ್ಷ್ಮಿ ಪಾಟೀಲ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ನಿರ್ದೇಶಕರು, ಬರಹಗಾರರು, ಸಾಹಿತಿಗಳು ಬೆಂಬಲ ಸೂಚಿಸಿದ್ದಾರೆ
Previous Articleಗಣೇಶೋತ್ಸವ ಪ್ರಸಾದ ಹೇಗಿರಬೇಕು ಗೊತ್ತಾ.
Next Article ಸತೀಶ್ ಜಾರಕಿಹೊಳಿ ನಡೆ ಏನು.

2 ಪ್ರತಿಕ್ರಿಯೆಗಳು
Mostbet: onde cada clique pode levar vocГЄ a momentos Г©picos – https://mostbetpt.pro/ , Jogue no Mostbet e sinta o gosto da verdadeira vitГіria .
Where every click feels like cheating physics – https://gntopama.com/mostbet-kasino-recenzie-a-skusenosti-2026/ , Play like the universe already said yes .