ನಿಟ್ಟೂರು ಮತ್ತು ಸಂಪಿಗೆ ರಸ್ತೆ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಸಂಚರಿಸುವ ಒಟ್ಟು ಎಂಟು ರೈಲುಗಳ ಸಂಚಾರವನ್ನು ರದ್ದು ಮಾಡಿ ನೈಋತ್ಯ ರೈಲ್ವೆ (South Western Railway Zone) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ರೈಲ್ವೆ ಮೇಲ್ಸೇತುವೆಗೆ ಗರ್ಡರ್ ಗಳನ್ನು ಅಳವಡಿಸುವ ಕಾಮಗಾರಿ ಆರಂಭವಾಗಲಿರುವ ಕಾರಣ ಅ.17 ರಿಂದ 24ರವರೆಗೆ ಅಂದರೆ ಒಂದು ವಾರಗಳ ಕಾಲ ಈ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಿದ್ದು, ಇನ್ನೂ ಕೆಲವು ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ರದ್ದಾಗಿರುವ ರೈಲಿನ ಸಂಖ್ಯೆ ಮತ್ತು ಮಾರ್ಗ
- ರೈಲು ಸಂಖ್ಯೆ: 07346 ತುಮಕೂರು-ಚಾಮರಾಜನಗರ ಪ್ಯಾಸೆಂಜರ್
- ರೈಲು ಸಂಖ್ಯೆ: 07328 ಚಾಮರಾಜನಗರ-ಮೈಸೂರು ಪ್ಯಾಸೆಂಜರ್
- ರೈಲು ಸಂಖ್ಯೆ: 16239 ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್
- ರೈಲು ಸಂಖ್ಯೆ: 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್
- ರೈಲು ಸಂಖ್ಯೆ: 06576 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು
- ರೈಲು ಸಂಖ್ಯೆ: 06575 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು
- ರೈಲು ಸಂಖ್ಯೆ: 16579 ಯಶವಂತಪುರ-ಶಿವಮೊಗ್ಗ ಟೌನ್
- ರೈಲು ಸಂಖ್ಯೆ: 16580 ಶಿವಮೊಗ್ಗ ಟೌನ್-ಯಶವಂತಪುರ ರೈಲು ಸಂಚಾರ ಒಂದು ವಾರ ರದ್ದಾಗಲಿದೆ.
ಭಾಗಶಃ ರದ್ದಾಗಿರುವ ರೈಲು ಮತ್ತು ಮಾರ್ಗ
- ರೈಲು ಸಂಖ್ಯೆ: 06571 ಕೆಎಸ್ಆರ್ ಬೆಂಗಳೂರು-ತುಮಕೂರು ಮೆಮು ರೈಲು ಹಿರೇಹಳ್ಳಿ-ತುಮಕೂರು ರೈಲು ನಿಲ್ದಾಣದ ನಡುವೆ ಸಂಚರಿಸುವುದಿಲ್ಲ.
- ರೈಲು ಸಂಖ್ಯೆ: 06572 ತುಮಕೂರು-ಕೆಎಸ್ಆರ್ ಬೆಂಗಳೂರು ಮೆಮು ರೈಲು ತುಮಕೂರು-ಹಿರೇಹಳ್ಳಿ ಮಧ್ಯೆ ಸಂಚರಿಸುವುದಿಲ್ಲ.
- ರೈಲು ಸಂಖ್ಯೆ: 20652 ತಾಳಗುಪ್ಪ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸಿಕೆರೆ-ಕೆಎಸ್ಆರ್ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.
- ರೈಲು ಸಂಖ್ಯೆ: 12725 ಕೆಎಸ್ಆರ್ ಬೆಂಗಳೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು ಅರಸಿಕೆರೆ-ಕೆಎಸ್ಆರ್ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.
- ರೈಲು ಸಂಖ್ಯೆ: 12726 ಧಾರವಾಡ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸಿಕೆರೆ-ಕೆಎಸ್ಆರ್ ಬೆಂಗಳೂರು ಮಧ್ಯೆ ಸಂಚರಿಸುವುದಿಲ್ಲ.
ರೈಲುಗಳ ಮಾರ್ಗ ಬದಲಾವಣೆ
- ರೈಲು ಸಂಖ್ಯೆ: 17310 ವಾಸ್ಕೋ ಡ ಗಾಮಾ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ, ಯಶವಂತಪುರ ಮಾರ್ಗವಾಗಿ ಸಂಚರಿಸುತ್ತದೆ.
- ರೈಲು ಸಂಖ್ಯೆ: 22687 ಮೈಸೂರು-ವಾರಣಾಸಿ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತದೆ.
- ರೈಲು ಸಂಖ್ಯೆ: 82653 ಯಶವಂತಪುರ-ಜೈಪುರ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮಾರ್ಗವಾಗಿ ಸಂಚರಿಸುತ್ತದೆ.
- ರೈಲು ಸಂಖ್ಯೆ: 19668 ಮೈಸೂರು-ಉದಯಪುರ ಸಿಟಿ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ, ದಾವಣಗೆರೆ ಮಾರ್ಗವಾಗಿ ಸಂಚರಿಸುತ್ತದೆ.
- ರೈಲು ಸಂಖ್ಯೆ: 17326 ಮೈಸೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ ಮಾರ್ಗವಾಗಿ ಸಂಚರಿಸುತ್ತದೆ. ರೈಲು ಪ್ರಯಾಣ ಮಾಡುವವರು ಇದನ್ನು ಗಮನದಲ್ಲಿರಿಸಿ ಪ್ರಯಾಣ ಮುಂದುವರೆಸುವುದು ಸೂಕ್ತ.


2 ಪ್ರತಿಕ್ರಿಯೆಗಳು
О‘ОЅООІО±ПѓОµ П„Ої ОµПЂОЇПЂОµОґОї П„ОїП… ПЂО±О№П‡ОЅО№ОґО№ОїПЌ ПѓОїП… ОјОµ П„Ої Betano Casino https://betanogame.org/el/bonuses/. О О¬ПЃОµ ООЅО± П†О±ОЅП„О±ПѓП„О№ОєПЊ ОјПЂПЊОЅОїП…П‚ ОєО±О»П‰ПѓОїПЃОЇПѓОјО±П„ОїП‚ €500 ОєО±О№ ОІОїПЌП„О± ПѓОµ ОµОєО±П„ОїОЅП„О¬ОґОµП‚ premium ПЂО±О№П‡ОЅОЇОґО№О±. О•ОЇП„Оµ О±ОіО±ПЂО¬П‚ П„О± slots, П„Ої ПЂПЊОєОµПЃ О® П„О± ПѓП„ОїО№П‡О®ОјО±П„О± О±ОёО»О·ОјО¬П„П‰ОЅ – П„О± ОП‡ОїП…ОјОµ ПЊО»О±. О“ОЇОЅОµ ОјОО»ОїП‚ П„ОїП… ОєПЌОєО»ОїП… П„П‰ОЅ ОЅО№ОєО·П„ПЋОЅ ПѓО®ОјОµПЃО±.
More jackpots chasing players than players chasing jackpots — Betano. https://tikitakagm.org/da/how-to-play/ Betano keeps raising the bar while others lower expectations.