ಬೆಂಗಳೂರು, ನ.1-
ಬೆಳಕಿನ ಹಬ್ಬ ದೀಪಾವಳಿಯ ಕೆಲವರ ಪಾಲಿಗೆ ಕತ್ತಲೆಯನ್ನು ತಂದೊಡ್ಡಿದೆ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವಾಗ ಸಾಕಷ್ಟು ಮುಂಜಾಗ್ರತೆ ಕ್ರಮಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದರೂ, ಕಣ್ಣಿಗೆ ಗಾಯ ಮಾಡಿಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ.
ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡದಿಂದ 25ಕ್ಕೂ ಹೆಚ್ಚು ಮಂದಿಯ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ 20ಕ್ಕೂ ಹೆಚ್ಚು ಮಂದಿ ಮೈಕೈ ಸುತ್ತಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
18 ವರ್ಷದ ಒಳಗಿನವ ಗಂಭೀರವಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ,” ಎಂದು ಶಂಕರ್ ಕಣ್ಣಿನ ಆಸ್ಪತ್ರೆಯ ವೈದ್ಯರು.
ಪಟಾಕಿ ಸಿಡಿಸುತ್ತಿರುವುದನ್ನು ನೋಡುತ್ತಿದ್ದ 3 ವರ್ಷದ ಹೆಣ್ಣು ಮಗುವಿಗೆ ಬೆಂಕಿಯ ಕಿಡಿ ತಗುಲಿ, ಕಣ್ಣಿನ ಕಾರ್ನಿಯಾಗೆ ಹಾನಿಯಾಗಿದೆ. ಇನ್ನೊಂದೆಡೆ 10 ವರ್ಷದ ಬಾಲಕನೊಬ್ಬ ಸಿಡಿದ ಪಟಾಕಿಯನ್ನು ಪರಿಶೀಲಿಸಲು ಮುಂದಾದ ವೇಳೆ ಸ್ಫೋಟಗೊಂಡು ಕಣ್ಣಿಗೆ ಗಾಯವಾಗಿದೆ.
ಮಿಂಟೊ ಆಸ್ಪತ್ರೆಯಲ್ಲಿ ಇಂದು ಕಣ್ಣಿಗೆ ಹಾನಿ ಮಾಡಿಕೊಂಡ ಮೂರು ಪ್ರಕರಣಗಳು ವರದಿಯಾಗಿವೆ. ಇಬ್ಬರು ಬಾಲಕರು ಮತ್ತು 5 ವರ್ಷದ ಮಗುವಿಗೆ ಚಿಕಿತ್ಸೆ.
ಇಲ್ಲಿಯವರೆಗೆ ಮಿಂಟೋ ಆಸ್ಪತ್ರೆಯಲ್ಲಿ 14 ಮಂದಿ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಬ್ಬ ಬಾಲಕ ಪಟಾಕಿ ಹಚ್ಚುವಾಗ ಇನ್ನಿಬ್ಬರು ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದಾಗ ಕಣ್ಣಿಗೆ ಬೆಂಕಿಯ ಕಿಡಿ ತಾಗಿದೆ. ನಾರಾಯಣ ನೇತ್ರಾಲಯದಲ್ಲಿ 3 ಮಕ್ಕಳಿಗೆ ಹೊರ ರೋಗಿ ಚಿಕಿತ್ಸೆ ನೀಡಲಾಗಿದೆ.
ಇನ್ನೂ ಮೈಕೈ ಸುಟ್ಟ ಆಸ್ಪತ್ರೆಯವರು ವಿಕ್ಟೋರಿಯಾ ಇನ್ನಿತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ್ದಾರೆ.