ಅಹಮದಾಬಾದ್ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಷಾ ಅವರ ತವರು ಗುಜರಾತ್ ನಲ್ಲಿ ಬಿಜೆಪಿ ನಾಯಕನೊಬ್ಬ
ಅಧಿಕ ಬಡ್ಡಿ ಆಮಿಷವೊಡ್ಡಿ ಅಮಾಯಕರಿಂದ 6000 ಕೋಟಿ ರೂಪಾಯಿ ಸಂಗ್ರಹಿಸಿ ಪರಾರಿಯಾಗಿದ್ದಾನೆ.
ಭಾರಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಹಗರಣವನ್ನು ಗುಜರಾತ್‌ನ ಸಬರ್‌ಕಾಂತಾ ಜಿಲ್ಲೆಯಲ್ಲಿ ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ವಹಿವಾಟಿನ ಮೊತ್ತ 6000 ಕೋಟಿಗೂ ಅಧಿಕ ಎಂಬ ಅಂದಾಜಿದೆ.
ಬಿಝಡ್ ಇಂಟರ್ ನ್ಯಾಷನಲ್ ಬ್ರೋಕಿಂಗ್ ಪ‍್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ತೆರೆದಿದ್ದ ಬಿಜೆಪಿಯ ನಾಯಕ ಭೂಪಿಂದರ್ ಸಿಂಗ್ ಜಾಲಾ ತಮ್ಮ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದರೆ ಮಾಸಿಕ ಶೇಕಡರಷ್ಟು ಬಡ್ಡಿ ನೀಡುವುದಾಗಿ ಭರವಸೆ ನೀಡಿದ್ದರು.
ಗುಜರಾತ್ ಮಾತ್ರವಲ್ಲದೆ ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆಗಳನ್ನು ಆರಂಭಿಸಿ ಏಜೆಂಟರ ಮೂಲಕ ದುಬಾರಿ ಬಡ್ಡಿಯ ಆಮಿಷವಾಗಿ ಸುಮಾರು ಆರು ಸಾವಿರ ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿದ್ದರು ಎಂದು ಹೇಳಲಾಗಿದೆ
ಗುಜರಾತ್ ನ ಗಾಂಧಿನಗರ ವಡೋದರ ಅರಾವಳಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಈ ಹಗರಣ ವ್ಯಾಪಿಸಿದೆ. ಅಧಿಕ ಬಡ್ಡಿಯನ್ನು ನೀಡುವ ಆಮಿಷವೊಡ್ಡಿ ಹೂಡಿಕೆ ಆಕರ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಸ್ಥೆಯ ಅಕ್ರಮ ಹಣಕಾಸು ವ್ಯವಹಾರದ ಬಗ್ಗೆ ಬಂದ ಅನಾಮಧೇಯ ದೂರು ಆದರಿಸಿ ತನಿಖೆ ನಡೆಸಿದ್ದ ಪೊಲೀಸರಿಗೆ ಈ ಬ್ರಹ್ಮಾಂಡ ಕರ್ಮಕಾಂಡ ಪತ್ತೆಯಾಗಿದೆ.
Previous Articleಇಮ್ರಾನ್ ಪರ ಪ್ರತಿಭಟನೆ.ಸಾವಿರಾರು ಬೆಂಬಲಿಗರು ಬಂಧನ
Next Article ಬಾರ್ ಲೈಸೆನ್ಸ್ ಗೆ ಲಂಚ-ಲೋಕಾಯುಕ್ತಕ್ಕೆ ದೂರು.