16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವ ವಿಶ್ವದ ಪ್ರಥಮ ಕಾನೂನನ್ನು ಆಸ್ಟ್ರೇಲಿಯಾದ ಸಂಸತ್ತು ಅಂಗೀಕರಿಸಿದೆ. ಈ ಕಾನೂನು ಯಾವಾಗ ನಿರ್ದಿಷ್ಟವಾಗಿ ಜಾರಿಯಾಗುತ್ತದೆ ಎಂದು ಇನ್ನೂ ನಿಗದಿಯಾಗಿಲ್ಲ. ಆದರೆ ಕಟ್-ಆಫ್ ದಿನಾಂಕದ ಮೊದಲು 16 ವರ್ಷದ ಒಳಗಿನ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸದಂತೆ ತಡೆಯಲು ಕ್ರಮಗಳನ್ನು ಬಿಗಿಗೊಳಿಸಬೇಕೆಂದು ಸಂಸತ್ತು ಟೆಕ್ ಕಂಪನಿಗಳಿಗೆ ಸೂಚನೆ ನೀಡಿದೆ.
ಒಂದು ವಾರದೊಳಗೆ ಅಂಗೀಕೃತವಾದ ಈ ಮಸೂದೆ ಸಂಸತ್ತಿಗೆ ಬರುವ ಮೊದಲು ಸಾರ್ವಜನಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಮತ್ತು ಅನೇಕ ಸಂಸದೀಯ ಪ್ರಕ್ರಿಯೆಗಳಿಗೆ ಒಳಪಟ್ಟಿತ್ತು. ಈಗ ಅದೆಲ್ಲದರ ನಂತರ, ವರ್ಷದ ಕೊನೆಯ ಸಂಸತ್ ಸಭೆಯ ದಿನವಾದ ಗುರುವಾರದಂದು ತಡವಾಗಿ ಆಸ್ಟ್ರೇಲಿಯಾದ ಸೆನೇಟ್ ಸೆನೆಟ್ ಸಾಮಾಜಿಕ ಮಾಧ್ಯಮ ನಿಷೇಧವನ್ನು ಅನುಮೋದಿಸಿತು.
ಈ ಹೊಸ ಕಾನೂನಿನ ಅಡಿಯಲ್ಲಿ, ಟೆಕ್ ಕಂಪನಿಗಳು ಕಡಿಮೆ ವಯಸ್ಸಿನ ಬಳಕೆದಾರರು ಸಾಮಾಜಿಕ ಮಾಧ್ಯಮ ಸೇವೆಗಳನ್ನು ಬಳಸುವುದು ವೆಬ್ಸೈಟ್ ಗಳನ್ನು ಪ್ರವೇಶಿಸುವುದನ್ನು ತಡೆಯಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಇಲ್ಲವೆ ಸುಮಾರು 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ 250 ಕೋಟಿ ರೂಪಾಯಿಯಷ್ಟು ದಂಡವನ್ನು ತೆರಳು ಸಿದ್ಧವಾಗಿರಬೇಕು. ಈ ರೀತಿಯ ಕಾನೂನುಗಳು ವಿಶ್ವದ ಬೇರೆ ದೇಶಗಳಲ್ಲೂ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.