ಬೆಳಗಾವಿ:
ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರದ್ದು ಕೊಳಕು ಮನಸ್ಸು ಅದನ್ನು ಎಷ್ಟು ಬಾರಿ ತೊಳೆದರೂ ಹೋಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂತ್ರಿ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಅವರೇ ನಿಮ್ಮ ನಾಲಿಗೆಯನ್ನು ಫಿನಾಯಿಲ್ ಹಾಕಿ ತೊಳೆಯಿರಿ. ಮೈಗೆ ಹಚ್ಚಿರೊ ಕೊಳಕನ್ನು ತೊಳೆಯಬಹುದು. ಮನಸ್ಸಿಗೆ ಹಚ್ಚಿರೋ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ ಎಂದು ನನಗೂ ಹಿರಿಯರೊಬ್ಬರು ಹೇಳಿದ್ದಾರೆ ಎಂದರು
ಸಿ.ಟಿ.ರವಿ ಅವರ ಮನಸ್ಸಿನಲ್ಲೇ ಕೊಳಕಿದೆ. ಅಂತಹ ಕೊಳಕನ್ನು ತೊಳೆಯಲು ಸಾಧ್ಯವಿಲ್ಲ. ಇಂತಹ ಕೊಳಕು ಮನಸಿನ ವ್ಯಕ್ತಿ ಆಡಿದ ಮಾತು ಕೇಳಿ ನಾನು ಎರಡು ದಿನಗಳ ಕಾಲ ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದು ಹೇಳಿದರು.
ಅಂದು ಪರಿಷತ್ ಕಲಾಪದಲ್ಲಿ ಘಟನೆ ಆದ ಬಳಿಕ ನಾನು ಅಲ್ಲೆ ಕುಳಿತಿದ್ದೆ. ಅವರು ಊಸರವಳ್ಳಿ ಥರ ಓಡಿ ಹೋದರು. ತಕ್ಷಣವೇ ನಾನು ಹರಿಪ್ರಸಾದ್, ಬೋಸರಾಜು ಅವರಿಗೆ ಸಿ.ಟಿ.ರವಿ ಅವರು ಬಳಸಿದ ಭಾಷೆ ಬಗ್ಗೆ ವಿವರಿಸಿದೆ. ಡಾ. ಯತೀಂದ್ರ, ಉಮಾಶ್ರೀ, ನಾಗರಾಜ್ ಯಾದವ್, ಬಿಲ್ಕಿಸ್ ಬಾನೋ, ಎಲ್ಲರೂ ನನ್ನ ಹತ್ತಿರ ಬಂದು, ಸಿ.ಟಿ.ರವಿ ಬಳಸಿದ ಅಶ್ಲೀಲ ಪದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಎಲ್ಲಾ ನಾಯಕರು ಜೊತೆಗೂಡಿ ಸಭಾಪತಿಗಳ ಬಳಿ ಹೋದೆವು ಎಂದು ವಿವರಿಸಿದರು.
ನಮ್ಮ ಮಾತನ್ನು ಆಲಿಸಿದ ಸಭಾಪತಿಗಳು ಕೂಡ ಕಣ್ಣೀರು ಹಾಕಿದರು. ಬಳಿಕ ಅಲ್ಲಿದ್ದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿ ಘಟನೆಯನ್ನು ವಿವರಿಸಿದರು. ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ ಎಂದು ಆ ಸಮಯದಲ್ಲಿ ಎಲ್ಲರೂ ನನಗೆ ಧೈರ್ಯ ತುಂಬಿದರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಸಂಗ್ರಹಗಳು
- ಮಾರ್ಚ್ 2026
- ಫೆಬ್ರವರಿ 2026
- ಜನವರಿ 2026
- ಡಿಸೆಂಬರ್ 2025
- ನವೆಂಬರ್ 2025
- ಅಕ್ಟೋಬರ್ 2025
- ಸೆಪ್ಟೆಂಬರ್ 2025
- ಆಗಷ್ಟ್ 2025
- ಜುಲೈ 2025
- ಜೂನ್ 2025
- ಮೇ 2025
- ಏಪ್ರಿಲ್ 2025
- ಮಾರ್ಚ್ 2025
- ಫೆಬ್ರವರಿ 2025
- ಜನವರಿ 2025
- ಡಿಸೆಂಬರ್ 2024
- ನವೆಂಬರ್ 2024
- ಅಕ್ಟೋಬರ್ 2024
- ಸೆಪ್ಟೆಂಬರ್ 2024
- ಆಗಷ್ಟ್ 2024
- ಜುಲೈ 2024
- ಜೂನ್ 2024
- ಮೇ 2024
- ಏಪ್ರಿಲ್ 2024
- ಮಾರ್ಚ್ 2024
- ಫೆಬ್ರವರಿ 2024
- ಜನವರಿ 2024
- ಡಿಸೆಂಬರ್ 2023
- ನವೆಂಬರ್ 2023
- ಅಕ್ಟೋಬರ್ 2023
- ಸೆಪ್ಟೆಂಬರ್ 2023
- ಆಗಷ್ಟ್ 2023
- ಜುಲೈ 2023
- ಜೂನ್ 2023
- ಮೇ 2023
- ಏಪ್ರಿಲ್ 2023
- ಮಾರ್ಚ್ 2023
- ಫೆಬ್ರವರಿ 2023
- ಜನವರಿ 2023
- ಡಿಸೆಂಬರ್ 2022
- ನವೆಂಬರ್ 2022
- ಅಕ್ಟೋಬರ್ 2022
- ಸೆಪ್ಟೆಂಬರ್ 2022
- ಆಗಷ್ಟ್ 2022
- ಜುಲೈ 2022
- ಜೂನ್ 2022
- ಮೇ 2022
- ಏಪ್ರಿಲ್ 2022


1 ಟಿಪ್ಪಣಿ
Muuta pienet panokset isoiksi voitoiksi Betanolla. Nappaa €500 tervetuliaisbonus https://betanogame.org/fi/ ja nauti suurimmasta pelivalikoimasta verkossa. Live-kasino ja urheiluvedonlyönti samassa sovelluksessa.