ಬೆಂಗಳೂರು:
ವಿದೇಶದಿಂದ ಅಕ್ರಮವಾಗಿ ಸಾಗಾಣಿಕೆ ಆರೋಪದಲ್ಲಿ ಬಂಧಿತರಾಗಿರುವ ನಟಿ
ರನ್ಯಾ ರಾವ್ ಜೈಲು ಕಂಬಿಗಳ ಹಿಂದೆ ನರಳುತ್ತಿದ್ದಾರೆ, ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಉದ್ಯಮಪತಿಗಳು ಇದು ನಮಗೆಲ್ಲಿ ಅಂಟಿಕೊಳ್ಳುತ್ತದೆಯೋ ಎಂದು ಆತಂಕಗೊಂಡಿದ್ದಾರೆ.
ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳಾಗಿರುವ ರನ್ಯಾ ರಾವ್ ಹಲವಾರು ಮಂದಿ ಉದ್ಯಮಿಗಳು ರಾಜಕಾರಣಿಗಳು ಮತ್ತು ಪ್ರತಿಷ್ಠಿತ ಜ್ಯೋತಿಷಿಗಳಿಗೆ ಆಪ್ತರಾಗಿದ್ದಾರೆ. ಒಂದಲ್ಲ ಒಂದು ಕಾರಣಕ್ಕೆ ಈ ಎಲ್ಲರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ.
ರನ್ಯಾ ಅವರನ್ನು ಬಂಧಿಸಿರುವ ಗುಪ್ತಚರ ಜಾರಿ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆ ನಡೆಸಿರುವ ಬೆನ್ನಲ್ಲೇ ಅವರ ಮೊಬೈಲ್ ಪಡೆದುಕೊಂಡಿದ್ದು ಅದರಲ್ಲಿನ ಕಾಂಟ್ಯಾಕ್ಟ್ ನಂಬರ್ ಗಳ ಬಗ್ಗೆ ಮಾಹಿತಿ ಸಂಗ್ರಹಿಸತೊಗಿದ್ದಾರೆ ಇದು ಆಕೆಯ ಜತೆಗೆ ಸಂಪರ್ಕದಲ್ಲಿದ್ದ ರಾಜಕಾರಣಿಗಳಿಗೆ ನಡುಕ ಉಂಟಾಗುವಂತೆ ಮಾಡಿದೆ.
ರಾನ್ಯಾ ಜೊತೆ ಸಂಪರ್ಕದಲ್ಲಿದ್ದ ಅನೇಕ ರಾಜಕಾರಣಿಗಳು, ಚಿನ್ನ ಕಳ್ಳ ಸಾಗಾಣಿಕೆ ಅಕ್ರಮದಲ್ಲಿ ಯಾರು ಶಾಮೀಲು ಎಂಬ ಬಗ್ಗೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವಂತೆ ಈ ಪ್ರಕರಣ ಮಾಡಿದೆ.
ರನ್ಯಾ ಜೊತೆ ಸಂಪರ್ಕದಲ್ಲಿದ್ದ ಚಿನ್ನಾಭರಣ ವ್ಯಾಪಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ಮಾಹಿತಿಯನ್ನು ಡಿಆರ್‌ಐ ಅಧಿಕಾರಿಗಳು ಕಲೆ ಹಾಕಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲು ಪೂರ್ವಭಾವಿ ಸಿದ್ಧತೆ ಆರಂಭಿಸಿದ್ದಾರೆ.
Previous Articleರಶ್ಮಿಕಾ ತಂಟೆಗೆ ಬಂದರೆ ಹುಷಾರ್..!
Next Article ಕೊಡಗು ವಿಶ್ವವಿದ್ಯಾಲಯ ಪರ ನಿಂತ ಮಂತರ್ ಗೌಡ