ಬೆಂಗಳೂರು,ಏ.3-
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರ ಗುಂಪು ಜೂಜಾಡುತ್ತಿದ್ದ ಸ್ಥಳಕ್ಕೆ ಏಕಾಏಕಿ ನುಗ್ಗಿದ 6 ಮಂದಿಯಿದ್ದ ಮುಸುಕುಧಾರಿ ಗ್ಯಾಂಗ್ ಆಟವಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಅವರನ್ನು ವಿವಸ್ತ್ರಗೊಳಿಸಿ 10 ಲಕ್ಷ ನಗದು, 700 ಗ್ರಾಂ ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಈ ಘಟನೆ ಬೆಂಗಳೂರಿನ ಬನಶಂಕರಿಯ 2ನೇ ಹಂತದ 9ನೇ ಮುಖ್ಯ ರಸ್ತೆಯ ಬಿವಿಕೆ ಕ್ಲಬ್‌ನಲ್ಲಿ ಯುಗಾದಿಯ ದಿನವಾದ ಮಾ.31ರ ರಾತ್ರಿ ನಡೆದಿದೆ
ದರೋಡೆಕೋರರಿಂದ ಹಲ್ಲೆಗೊಳಗಾದ ರಮೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಬನಶಂಕರಿ ಪೊಲೀಸರು, ದರೋಡೆಕೋರರ ಗ್ಯಾಂಗ್ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್ ತಿಳಿಸಿದ್ದಾರೆ.
ಯುಗಾದಿ ಪ್ರಯುಕ್ತ ರಮೇಶ್ ಮಾ.31ರಂದು ಸ್ನೇಹಿತರಾದ ಮುರುಳಿ, ಉಮಾಶಂಕರ್, ತಿಮ್ಮಣ್ಣ, ಕಿರಣ್, ಪುಟ್ಟಸ್ವಾಮಿ, ಬಾಬು ರೆಡ್ಡಿ, ನಾಗರಾಜ್, ಆನಂದ್, ಬೆಟ್ಟೇಗೌಡ, ರವಿಕುಮಾರ್, ಶೇಖರ್ ಹಾಗೂ ಗುಂಡ ಅವರೊಂದಿಗೆ ಸೇರಿಕೊಂಡು ಬಿವಿಕೆ ಕ್ಲಬ್‌ಗೆ ತೆರಳಿ ಮದ್ಯ ಸೇವಿಸಿ, ಕ್ಲಬ್‌ನ 2ನೇ ಮಹಡಿಯ ರೂಮ್‌ನಲ್ಲಿ ಇಸ್ಟಿಟ್ ಆಡುತ್ತಿದ್ದರು.
ಸಂಜೆ ಸುಮಾರು 6 ಗಂಟೆಗೆ 6 ಮಂದಿ ಮುಸುಕುಧಾರಿಗಳು ಮಾರಕಾಸ್ತ್ರ ಗಳೊಂದಿಗೆ ರೂಮ್‌ಗೆ ನುಗ್ಗಿದ್ದು, ಯಾರಾದರೂ ಉಸಿರು ಬಿಟ್ಟರೆ ಇಲ್ಲ ಎನಿಸುತ್ತೇವೆ ಧಮಕಿ ಹಾಕಿದ್ದಾರೆ.
ಬಳಿಕ ರಮೇಶ್ ಹಾಗೂ ಅವರ ಸ್ನೇಹಿತರಿಂದ 10 ಲಕ್ಷ ನಗದು ಹಾಗೂ 700 ಗ್ರಾಂ ಚಿನ್ನಾಭರಣ, ಮೊಬೈಲ್ ಪೋನ್‌ಗಳನ್ನು ದರೋಡೆ ಮಾಡಿದ್ದಾರೆ. ನಂತರ ಎಲ್ಲರ ಬಟ್ಟೆ ಬಚ್ಚಿಸಿಕೊಂಡು ವಿವಸ್ತ್ರಗೊಳಿಸಿ ರೂಮ್‌ನಲ್ಲಿ ಕೂಡಿ ಹಾಕಿ ನಗದು, ಚಿನ್ನಾಭರಣ, ಮೊಬೈಲ್ ಹಾಗೂ ಬಟ್ಟೆಗಳೊಂದಿಗೆ ಪರಾರಿಯಾಗಿದ್ದಾರೆ.
ಈ ಸಂಬಂಧ ರಮೇಶ್ ನೀಡಿದ ದೂರಿನ ಮೇರೆಗೆ ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಜೂಜಾಡಲು ಅನುವು ಮಾಡಿಕೊಟ್ಟ ಕ್ಲಬ್ ಮೇಲೆ ಕೂಡ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ, ಕ್ಲಬ್ ಹಾಗೂ ಸುತ್ತಮುತ್ತಲಿನ ಸಿಸಿ ಟಿವಿ ಕ್ಯಾಮರಾದ ದೃಶಾವಳಿಯನ್ನು ಪರಿಶೀಲನೆ ದರೋಡೆಕೋರರ ಗ್ಯಾಂಗ್ ಬಂಧನಕ್ಕೆ ಶೋಧ ಕೈಗೊಳ್ಳಲಾಗಿದೆ ಎಂದು ಲೋಕೇಶ್ ತಿಳಿಸಿದರು.
Previous Articleಸಿಎಂ ಸಿದ್ದರಾಮಯ್ಯರನ್ನು ಬಿಡದ ಕರ್ಮಕಾಂಡ
Next Article ನಿರ್ಮಾಪಕ ಎಂ ಎನ್ ಕುಮಾರ್ ಅರೆಸ್ಟ್

7 ಪ್ರತಿಕ್ರಿಯೆಗಳು
Experience the raw power of the American wilderness in slot form. buffalo diamond packs wild symbols, scatter sunsets, and retriggering free games for unbeatable action. Join the rush and win big!

No deposit? No problem! Chumba Casino welcomes you with FREE chumba casino redeem cash to start winning right away. Thousands of players already love the action — join the fun now!
Experience DraftKings casino app Casino royalty. Wager $5 for 500 bonus spins and up to $1,000 credits back. Win the day, every day!