ಬೆಂಗಳೂರು,ಆ.6-
ಐಟಿ ಸಿಟಿ ಬೆಂಗಳೂರಿನ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಗಳು ಸೈಬರ್ ಖದೀಮರಿಂದ ಲಕ್ಷಾಂತರ ರೂಗಳ ವಂಚನೆಗೊಳಗಾಗಿದ್ದಾರೆ,ಓರ್ವ ಕಾಲ್ ಗರ್ಲ್ ಸೇವೆಯ ಆಮಿಷಕ್ಕೆ 1.49 ಲಕ್ಷ ಕಳೆದುಕೊಂಡರೆ, ಇನ್ನೊಬ್ಬರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವಧುವಿನಂತೆ ಬಿಂಬಿಸಿದ ವಂಚಕರಿಗೆ 55.64 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ
ಇವೆರಡೂ ಪ್ರಕರಣಗಳನ್ನು ಹೈಗೌಂಡ್ಸ್ ಪೊಲೀಸರು ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
24 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್, ಕಾಲ್ ಗರ್ಲ್ ಸೇವೆ ಬೇಕೆಂದು ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್‌ನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದಾಗ ಇಶಾನಿ ರೆಡ್ಡಿ ಎಂಬುವವರ ಪರಿಚಯವಾಗಿತ್ತು. ಆಕೆ ಕಾಲ್ ಗರ್ಲ್ ಮತ್ತು ಸ್ಪಾ ಸೇವೆಗಳನ್ನು ಒದಗಿಸುವುದಾಗಿ ಹೇಳಿದ್ದಳು. ಮೊದಲು 299 ರೂ. ಪಾವತಿಗೆ ಸೂಚಿಸಿದ್ದ ಆಕೆ, ನಂತರ ವಿವಿಧ ಸೇವಾ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣವನ್ನು ಪೀಕಿದ್ದಳು.
ಸಾಫ್ಟ್‌ವೇರ್ ಇಂಜಿನಿಯರ್ 1,49,052 ರೂ.ಗಳನ್ನು ಆಕೆಗೆ ವರ್ಗಾಯಿಸಿದ್ದಾರೆ. ಆ ಬಳಿಕ ಹೆಚ್ಚಿನ ಮೊತ್ತವಾಯಿತೆಂದು ಸೇವೆಯನ್ನು ಕ್ಯಾನ್ಸ್‌ಲ್ ಮಾಡಿ ಹಣ ವಾಪಾಸ್ ಮಾಡುವಂತೆ ಹೇಳಿದ್ದಾರೆ. ಪಾವತಿ ಮಾಡಿದ್ದ ಮೊತ್ತವನ್ನು ರಿಫಂಡ್ ಮಾಡುವಂತೆ ಕೇಳಿದ್ದಾರೆ. ಆದರೆ, ಆ ಕಡೆಯಿಂದ ಉತ್ತರವೇ ಬಂದಿಲ್ಲ.
ಕೂಡಲೇ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ಈ ವಿಷಯದ ಬಗ್ಗೆ ವರದಿ ಮಾಡಿ ಹೈಗೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
55.64 ಲಕ್ಷ ವಂಚನೆ:
ಉಲ್ಲಾಳ ಉಪನಗರದ 32 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರೊಬ್ಬರು ಒಕ್ಕಲಿಗ ವೈವಾಹಿಕ ವೇದಿಕೆಯಲ್ಲಿ ನಿಹಾರಿಕಾ ಗೌಡ ಎಂಬ ಪ್ರೊಪೈಲ್ ಮ್ಯಾಚ್ ಮಾಡಿದ್ದರು. ಇಬ್ಬರೂ ಚಾಟ್ ಮೂಲಕ ಸಂಬಂಧ ಬೆಳೆಸಿದ್ದು, ಆಕೆ ಮದುವೆಯ ಭರವಸೆ ನೀಡಿದ್ದಳು.
ನಂತರ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಒತ್ತಾಯಿಸಿ, ಲಾಭದಾಯಕತೆಯ ಬಗ್ಗೆ ವಿವರಿಸಿದ್ದಳು. ನಕಲಿ ವೆಬ್‌ಸೈಟ್‌ನ ಲಿಂಕ್ ಕಳುಹಿಸಿ, ವ್ಯಾಲೆಟ್ ರಚಿಸಲು ಮಾರ್ಗದರ್ಶನ ನೀಡಿದ್ದಳು. ಆಕೆಯ ಮಾತನ್ನು ನಂಬಿ ಟೆಕ್ಕಿ ಮೊದಲು 1 ಲಕ್ಷ ರೂ. ಹೂಡಿಕೆ ಮಾಡಿದ್ದರು. ನಂತರ ಹೆಚ್ಚಿನ ಆಸೆಗೆ 55.64 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ ಹಣ ವಾಪಾಸ್ ಬಂದಿಲ್ಲ. ನಂತರ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ
Previous Articleಜಾಂಡೀಸ್ ಗೆ ಬಲಿಯಾದ ಯುವ ನಟ !
Next Article ಇಂಧನ ಮಂತ್ರಿ ಕೆ ಜೆ ಜಾರ್ಜ್ ಅವರಿಗೆ ಬಿಗ್ ರಿಲೀಫ್ !


1 ಟಿಪ್ಪಣಿ
Квартира возле стадиона. Идеально для болельщиков. После матча не толкаться в метро, а дойти пешком. Холодильник под пиво, есть вайфай. Душ с хорошим напором. Парковка во дворе. Место для флага и атрибутики. Заряжайтесь атмосферой спорта. kvartirasnasutki.ru