Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಮದರಸಾದ ಮೌಲ್ವಿಗಳಿಗೆ ಕನ್ನಡ ಕಲಿಕೆ
    ಸುದ್ದಿ

    ಮದರಸಾದ ಮೌಲ್ವಿಗಳಿಗೆ ಕನ್ನಡ ಕಲಿಕೆ

    vartha chakraBy vartha chakraಆಗಷ್ಟ್ 7, 2025ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಂಗಳೂರು,ಆ.6:
    ಮದರಸಾಗಳಲ್ಲಿ ಕಾರ್ಯನಿರ್ವಹಿಸುವ ಮೌಲ್ವಿಗಳು ಕನ್ನಡ ಮಾತನಾಡುವುದಿಲ್ಲ ಅವರಿಗೆ ಕನ್ನಡ ಬರುವುದಿಲ್ಲ ಎಂಬ ದೂರುಗಳಿಗೆ ಅಲ್ಪಸಂಖ್ಯಾತರ ಇಲಾಖೆ ಸ್ಪಂದಿಸಿದೆ. ಈ ಮೂಲಕ ಕನ್ನಡಬಾರದ ಮದರಸಾಗಳ ಮೌಲ್ವಿಗಳಿಗೆ ಕನ್ನಡ ಕಲಿಸಲು ತೀರ್ಮಾನಿಸಲಾಗಿದೆ.
    ಈ ಕುರಿತಂತೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಮದರಸಗಳ ಮೌಲ್ಯಗಳಿಗೆ ಕನ್ನಡ ಕಲಿಸುತ್ತೇವೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
    ಅಲ್ಪಸಂಖ್ಯಾತರ ಆಯೋಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾತನಾಡಿದ ಅವರು ರಾಜ್ಯದ ಮದರಸಾ ಮೌಲ್ವಿಗಳಿಗೆ ಕನ್ನಡ ಪಾಠ ಕಲಿಸುವ ನಿಟ್ಟಿನಲ್ಲಿ ಮದರಸಾಗಳಿಂದ 200 ಜನರನ್ನು ಆಯ್ಕೆ ಮಾಡಿದ್ದೇವೆ. 3 ತಿಂಗಳ ಒಳಗೆ ಅವರಿಗೆ ಕನ್ನಡ ಕಲಿಸುತ್ತೇವೆ. ಕನ್ನಡ ರಾಜ್ಯ ನಮ್ಮದು, ನಮಗೆಲ್ಲಾ ಕನ್ನಡ ಬರಬೇಕು. ಎಲ್ಲಾ ಮಸೀದಿ ಗುರುಗಳಿಗೂ ಕನ್ನಡ ಕಲಿಸುತ್ತೇವೆ ಎಂದು ಹೇಳಿದರು.
    ಅಲ್ಪಸಂಖ್ಯಾತರ ಸಾಮೂಹಿಕ ವಿವಾಹಕ್ಕೆ 50 ಸಾವಿರ ಕೊಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ನಿಟ್ಟಿನಲ್ಲಿ ಈಗ ಆದೇಶ ಆಗಿದೆ. ಮೌಲಾನಾ ಅಬ್ದುಲ್ ಕಲಾಂ ಸ್ಕೂಲ್ ಸೇರಿದಂತೆ ಪ್ರತಿಭಾನ್ವಿತರಿಗೆ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.
    ಇಲಾಖೆ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣ ಸಹಾಯ ಮಾಡುತ್ತಿದ್ದೇವೆ. 214 ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಲ್ಯಾಪ್ ಟಾಪ್ ಕೊಡುತ್ತಿದ್ದೇನೆ. ಸಾಮೂಹಿಕವಾಗಿ ವಿವಾಹ ಆಗಿವವರು ಬಡವರು. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರಲ್ಲಿ ಸಾಮೂಹಿಕ ವಿವಾಹ ಮಾಡುವವರಿಗೆ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.
    ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿರುವ ವಿಚಾರವಾಗಿ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಉದಾಹರಣೆ ಇದೆ. ಮಹದೇವಪುರ ಕ್ಷೇತ್ರದಲ್ಲಿ 1.15 ಲಕ್ಷ ಬಿಜೆಪಿಗೆ ಲೀಡ್ ಬಂದಿದೆ. ಏನೇನೂ ಅಭಿವೃದ್ಧಿ ಮಾಡಿಲ್ಲ, ಆದರೂ ಅಷ್ಟು ಲೀಡ್ ಹೇಗೆ ಬಂತು? ಹೀಗಾಗಿ ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಿದ್ದಾರೆ ಎಂದು ವಿವರಿಸಿದರು.
    ಮದರಸಾ ಶಿಕ್ಷಕರು ಮತ್ತು ಮಕ್ಕಳಿಗೆ ಕನ್ನಡ ಕಲಿಸುವ ವಿಚಾರವಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಮುಂದಾಗಿತ್ತು. ಈ ಸಂಬಂಧಿಸಿದಂತೆ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮುಂದಾಗಿದ್ದರು. ಆದರೆ ಅದು ಅಂದು ವಿವಾದಕ್ಕೆ ಕಾರಣವಾಗಿತ್ತು.
    ಇದೀಗ ಮದರಸಾಗಳಲ್ಲಿ ಬೋಧಿಸುತ್ತಿರುವ ಸುಮಾರು 180 ಶಿಕ್ಷಕರುಗಳಿಗೆ ಕನ್ನಡ ಕಲಿಕಾ ಅಭಿಯಾನವನ್ನು ಉದ್ಘಾಟಿಸಲಾಗಿದೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ್ದ ಬಿಳಿಮಲೆ “ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ನಡುವಿನ ಸಾಮರಸ್ಯವನ್ನು ಕದಡುವ ವಿಭಜಕ ರಾಜಕಾರಣ ವಿಜೃಂಭಿಸುತ್ತಿದೆ. ಇಂತಹ ದಿನದಲ್ಲಿ ಭಾಷೆಯ ಮೂಲಕವೇ ಸಂವಹನ ಗಟ್ಟಿಯಾಗಬೇಕಿದೆ. ಈ ಕಾರಣಕ್ಕಾಗಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕನ್ನಡವನ್ನು ಕಲಿಸುವ ಪ್ರಯತ್ನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಎಂದಿದ್ದರು.

    Verbattle
    Verbattle
    Verbattle
    ಚುನಾವಣೆ ಬಿಜೆಪಿ ಬೆಂಗಳೂರು ರಾಹುಲ್ ಗಾಂಧಿ ವಿದ್ಯಾ ವಿದ್ಯಾರ್ಥಿ ಸಿದ್ದರಾಮಯ್ಯ
    Share. Facebook Twitter Pinterest LinkedIn Tumblr Email WhatsApp
    Previous Articleಕೇಂದ್ರ ಆರೋಗ್ಯ ಮಂತ್ರಿಗೆ ದಿನೇಶ್ ಗುಂಡೂರಾವ್ ಪತ್ರ
    Next Article ನಾಗಾ ಸಾಧುಗಳು ಉಂಗುರ ದೋಚಿದ ಕತೆ.
    vartha chakra
    • Website

    Related Posts

    ಗ್ಯಾರಂಟಿ ಯೋಜನೆಗಳ ಭರ್ಜರಿ ಯಶಸ್ಸು: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಕರಣ!

    ಫೆಬ್ರವರಿ 24, 2026

    ಹಿಂದುಳಿದ ವರ್ಗಗಳ ಬೇಡಿಕೆ ಗೊತ್ತಾ..?

    ಫೆಬ್ರವರಿ 24, 2026

    ಅತ್ತೆಯ ಸಾವಿಗೆ ದೇವರ ಮೊರೆ ಹೋದ ಸೊಸೆ! ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್!!

    ಫೆಬ್ರವರಿ 24, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಗ್ಯಾರಂಟಿ ಯೋಜನೆಗಳ ಭರ್ಜರಿ ಯಶಸ್ಸು: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಕರಣ!

    ಅಮೆರಿಕದಲ್ಲಿ ಹಿಂದೂಗಳೇ ಅತ್ಯಂತ ಹೆಚ್ಚು ಸುಶಿಕ್ಷಿತರು: ಪ್ಯೂ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಬಹಿರಂಗ

    ಹಿಂದುಳಿದ ವರ್ಗಗಳ ಬೇಡಿಕೆ ಗೊತ್ತಾ..?

    ಅತ್ತೆಯ ಸಾವಿಗೆ ದೇವರ ಮೊರೆ ಹೋದ ಸೊಸೆ! ಹುಂಡಿಯಲ್ಲಿ ಸಿಕ್ಕ ಪತ್ರ ವೈರಲ್!!

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Tayloradvag ರಲ್ಲಿ ಕೃಷಿ ಅಧಿಕಾರಿಗಳಿಗೆ ಚಲುವರಾಯಸ್ವಾಮಿ ಎಚ್ಚರಿಕೆ.
    • Mlxgfn ರಲ್ಲಿ IPL 2025: ಐಪಿಎಲ್​ ಅಖಾಡದಲ್ಲಿ 13 ಕನ್ನಡಿಗರು
    • Diegotup ರಲ್ಲಿ ಆಂಧ್ರ ಮುಖ್ಯಮಂತ್ರಿ ಹೆಸರಲ್ಲಿ ವಂಚನೆ
    Latest Kannada News

    ಗ್ಯಾರಂಟಿ ಯೋಜನೆಗಳ ಭರ್ಜರಿ ಯಶಸ್ಸು: ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾದ ರೈತರ ಆತ್ಮಹತ್ಯೆ ಪ್ರಕರಣ!

    ಫೆಬ್ರವರಿ 24, 2026

    ಅಮೆರಿಕದಲ್ಲಿ ಹಿಂದೂಗಳೇ ಅತ್ಯಂತ ಹೆಚ್ಚು ಸುಶಿಕ್ಷಿತರು: ಪ್ಯೂ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಬಹಿರಂಗ

    ಫೆಬ್ರವರಿ 24, 2026

    ಹಿಂದುಳಿದ ವರ್ಗಗಳ ಬೇಡಿಕೆ ಗೊತ್ತಾ..?

    ಫೆಬ್ರವರಿ 24, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.