ನವದೆಹಲಿ
ಲಷ್ಕರ್-ಎ-ಜಿಹಾದಿ’ ಸಂಘಟನೆಯ 14 ಭಯೋತ್ಪಾದಕರು ನಗರ ಪ್ರವೇಶಿಸಿದ್ದು, ಸುಮಾರು 400 ಕೆ.ಜಿಯಷ್ಟು ಆರ್‌ಡಿಎಕ್ಸ್ ಅನ್ನು 34 ವಾಹನಗಳಲ್ಲಿ ಇರಿಸಿದ್ದಾರೆ 14 ಉಗ್ರರು ,400 ಕೇಜಿ ಆರ್‌ಡಿಎಕ್ಸ್ ಜತೆ ಮುಂಬೈ ದಾಳಿಗೆ ಸಿದ್ಧತೆ ಸಿದ್ಧತೆ ನಡೆಸಿದ್ದಾರೆ’ ಎಂದು ಮುಂಬೈ ಸಂಚಾರಿ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಸಂದೇಶ ಬಂದಿದೆ.
ಗುರುವಾರ ಪೊಲೀಸರ ವಾಟ್ಸಾಪ್ ಹೆಲ್ಪ್‌ಲೈನ್‌ಗೆ ಈ ಸಂದೇಶ ಬಂದಿದೆ. ಇದರದಲ್ಲಿ ಲಷ್ಕರ್-ಎ-ಜಿಹಾದಿ ಸಂಘಟನೆ ಹೆಸರಿನ ಉಲ್ಲೇಖವಿದೆ. ’14 ಉಗ್ರರು ನಗರ ಪ್ರವೇಶಿಸಿದ್ದಾರೆ. 400 ಕೇಜಿ ಆರ್‌ಡಿಎಕ್ಸ್‌ನ್ನು 34 ವಾಹನಗಳಲ್ಲಿ ಇರಿಸಲಾಗಿದ್ದು, ಸ್ಫೋಟಿಸುವ ಸಂಚು ರೂಪಿಸಿದ್ದಾರೆ. ಇಷ್ಟು ಆರ್‌ಡಿಎಕ್ಸ್ 1 ಕೋಟಿ ಜನರನ್ನು ಸಾಯಿಸಬಲ್ಲದು’ ಎಂದು ಹೇಳಲಾಗಿದೆ.
ಈ ಸಂದೇಶ ದೇಶದ ಜನರನ್ನು ಮಾತ್ರವಲ್ಲ ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳುವಂತೆ ಮಾಡಿತು. ಗಣೇಶೋತ್ಸವದ ಹತ್ತನೇ ದಿನ ಹಾಗೂ ಅನಂತ ಪದ್ಮನಾಭ ವ್ರತದ ದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಒಟ್ಟಾಗಿ ಸೇರುತ್ತಾರೆ ಇಂತಹ ಸಮಯದಲ್ಲಿ ಅವಘಡ ಸಂಭವಿಸಿದರೆ ಗತಿ ಏನು ಎಂದು ಆತಂಕಗೊಂಡರು.
ಬೆದರಿಕೆ ಸಂದೇಶ ಬಂದ ವಾಟ್ಸಪ್ ಮೂಲವನ್ನು ಹುಡುಕಿ ಒಂದು ತಂಡ ಕಾರ್ಯಾಚರಣೆಗೆ ಹೇಳಿದರೆ ಮತ್ತೊಂದು ತಂಡ ದೇಶಾದ್ಯಂತ ಭದ್ರತೆ ಹೆಚ್ಚಳ ಮಾಡುವ ಕಡೆ ಗಮನ ಹರಿಸಿತು. ಅದರಲ್ಲೂ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಯಿತು
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದರು. ಜತೆಗೆ ಯಾವುದೇ ವದಂತಿಗಳನ್ನು ನಂಬದಂತೆ ಮನವಿ ಮಾಡಿದರು.
ಇಂತಹ ಆತಂಕದ ನಡುವೆ ಪೊಲೀಸರು ಬೆದರಿಕೆ ಸಂದೇಶ ಬಂದ ಮೂಲವನ್ನು ಪತ್ತೆ ಹಚ್ಚಿದರು.
ರಾಷ್ಟ್ರೀಯ ತನಿಖಾ ಆಯೋಗ ಮತ್ತು ದೆಹಲಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ
ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ರವಾನಿಸಿದ್ದ ವ್ಯಕ್ತಿಯನ್ನು ದೆಹಲಿಯ ನೋಯ್ಡಾದಲ್ಲಿ ಬಂಧಿಸಲಾಗಿದೆ
ಆರೋಪಿಯನ್ನು ಅಶ್ವಿನ್ ಎಂದು ಗುರುತಿಸಲಾಗಿದ್ದು, ಈತ ಬಿಹಾರ ಮೂಲದವನಾಗಿದ್ದಾನೆ.ಕಳೆದ ಐದು ವರ್ಷಗಳಿಂದ ನೋಯ್ಡಾದಲ್ಲಿ ವಾಸಿಸುತ್ತಿದ್ದಾನೆ. ಆರೋಪಿಯನ್ನು ನೋಯ್ಡಾದ ಸೆಕ್ಟರ್ -113 ರಲ್ಲಿ ಬಂಧಿಸಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಮುಂಬೈ ಅನ್ನು ಬೆಚ್ಚಿ ಬೀಳಿಸಿದ್ದ ವ್ಯಕ್ತಿ ಅರೆಸ್ಟ್.
Previous Articleನಡು ರಸ್ತೆಯಲ್ಲಿ ಲಾಂಗ್ ಹಿಡಿದ ಮರಿ ರೌಡಿ
Next Article ಮಲ್ಲಿಗೆ ಮುಡಿದರೆ ಒಂದು ಲಕ್ಷ ದಂಡ.