ನಿಮ್ಮ ಮನೆಯಲ್ಲೂ ನಿಮ್ಮ ತಾಯಿ ಅಕ್ಕ- ತಂಗಿ ಅಥವಾ ನಿಮ್ಮ ಮಡದಿ ಕೂಡ ಯಾವಾಗಲೂ ಯೂಟ್ಯೂಬ್ ನೋಡ್ತಿರಬಹುದು ಹಾಗೆ ಮನೆಯಲ್ಲಿ ಮಕ್ಕಳು ಮತ್ತು ಹರಿಹರಿಯದ ಯುವಕ ಯುವತಿಯರು ಕೂಡ ಯೌಟ್ಯೂಬ್ ಯೂಟ್ಯೂಬ್ ನೋಡುವ ಗೀಳಿಗೆ ಬಿದ್ದಿರಬಹುದು.
ಆದರೆ ಈ ವಿಷಯ ನಿಮಗೆ ಗೊತ್ತಾ? ಈಗ ಯೂಟ್ಯೂಬ್ ನಲ್ಲಿ ಬಹಳಷ್ಟು ವಿಡಿಯೋಗಳ ಕಾರುಬಾರು ಆರಂಭವಾಗಿದೆ. ಅದು ಟೆಕ್ಸ್ಟ್ ವಿಡಿಯೋ ಆಗಿರಬಹುದು ಇಲ್ಲ ಎಐ ಮೂಲಕ ನಿರ್ಮಾಣವಾಗಿರುವ ವಿಡಿಯೋ ಆಗಿರಬಹುದು ಆದರೆ ಈ ವಿಡಿಯೋಗಳಲ್ಲಿ ಯುವಕರನ್ನು ಸ್ತ್ರೀಯರನ್ನು ಪ್ರಚೋದಿಸುವ ಮತ್ತು ಅವರ ಮನಸ್ಸನ್ನು ಹಾಳು ಮಾಡುವ ಅನೇಕ ವಿಷಯಗಳಿರುತ್ತವೆ. ಅದಲ್ಲದೆ ವಿಲಕ್ಷಣ ಸಂಬಂಧಗಳು ಅನೈತಿಕ ಸಂಬಂಧಗಳು ಹೇಗಿರುತ್ತವೆ ಅಂಥ ಸಂಬಂಧಗಳನ್ನು ಹೇಗೆ ಕುದುರಿಸಬಹುದು ಎಂದೆಲ್ಲ ಕೂಡ ಇರುತ್ತದೆ.
ಅನೈತಿಕ ಮತ್ತು ಅಶ್ಲೀಲ ಸಂಬಂಧಗಳು ಮತ್ತು ಯಾರು ಯಾರೊಡನೆಯೂ ಕಾಮತೃಷೆ ತೀರಿಸಬಹುದು ಎಂದು ಅತ್ಯಂತ ನಿರ್ಭೀತಿಯಿಂದ ಒಂದಿಷ್ಟು ನಾಚಿಕೆ ನೈತಿಕತೆ ಇಲ್ಲದೆ ಮಾಡಿರುವ ಈ ವಿಡಿಯೋಗಳು ಸಭ್ಯರ ಮನಸ್ಸನ್ನು ಹಾಗೇ ವ್ಯಕ್ತಿಗಳನ್ನು ಮತ್ತು ಕುಟುಂಬಗಳನ್ನು ಕೂಡ ಹಾಳು ಮಾಡುವ ವಸ್ತು ಹೊಂದಿದೆ. ಅತ್ಯಂತ ಪ್ರೊಫೆಷನಲ್ ಆಗಿ ಮಾಡಿರುವ ಈ ವಿಡಿಯೋಗಳು ಕನ್ನಡದಲ್ಲಿ ಇರುವುದರಿಂದ ಯೂಟ್ಯೂಬ್ ಗೂ ಕೂಡ ಗೊತ್ತಾಗುವುದಿಲ್ಲ. ಹೆಲ್ತ್ ಫ್ಯಾಮಿಲಿ ಜೋಕ್ಸ್ ಎಂದೆಲ್ಲ ಹೆಸರಿರುವ ಚಾನಲ್ಗಳು ಯಾರನ್ನೂ ಯಾಮಾರಿಸಿ ಅವರ ಯೂಟ್ಯೂಬ್ ಫೀಡ್ ನಲ್ಲಿ ಕಾಣುವ ಸಾಧ್ಯತೆ ಇದೆ. ಈಗಂತೂ ಎಐ ಸೃಷ್ಟಿಸಿರುವ ವಿಡಿಯೋಗಳಲ್ಲಿ ನಿಜವಾದ ಹುಡುಗಿಯರಂತೆ ಕಾಣುವ ದೃಶ್ಯಗಳಲ್ಲಿ ಮಹಿಳೆಯರ ಬಾಯಲ್ಲಿ ಹೇಸಿಗೆ ತರಿಸುವ ರೀತಿಯಲ್ಲಿ ಪೋಲಿ ವಿಚಾರಗಳನ್ನು ಜೋಕ್ ಗಳನ್ನೂ ಹೇಳಿಸಿ ಆ ವಿಡಿಯೋಗಳಿಗೆ ಲೈಕ್ ಪಡೆಯುವುದು ಮತ್ತು ಆ ಚಾನೆಲ್ ಗಳಿಗೆ ಫಾಲೋ ವರ್ಸ್ ಪಡೆಯುವುದು ಮಾಡಲಾಗುತ್ತಿದೆ.
ಕೆಲವೊಂದು ವಿಡಿಯೋಗಳು ಕುಟುಂಬದೊಳಗೆ ಇರುವ ಸಂಬಂಧಗಳನ್ನೇ ಹಾಳು ಮಾಡೋದು ಮಾತ್ರವಲ್ಲದೆ ತಾಯಿ ತಂಗಿ ಅಕ್ಕ ಎನ್ನುವ ಬೇಧ ಭಾವವನ್ನು ಇಲ್ಲದಂತೆ ಮಾಡುವ ಪ್ರಯತ್ನದಲ್ಲಿವೆ. ಇವು ಅಕ್ರಮ ಮಾತ್ರ ಅಲ್ಲ ಅಪರಾಧ ಕೂಡ. ಇಂಥ ವಿಡಿಯೋಗಳು ಸಭ್ಯ ಕುಟುಂಬಗಳಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಮಕ್ಕಳಿಗೆ ಯುವ ಜನರಿಗೆ ಆಕಸ್ಮಿಕವಾಗಿ ಕೂಡ ಕಂಡುಬರದ ಹಾಗೆ ನಿಗಾ ವಹಿಸಬೇಕಾಗುತ್ತದೆ. ಇಂಥ ವಿಡಿಯೋಗಳನ್ನು ಕಂಡಾಗ ನೀವು ಅದನ್ನು ಫ್ಲಾಗ್ ಮಾಡಿ. ಧೈರ್ಯವಿದ್ದರೆ ಅದರ ಬಗ್ಗೆ ಸೈಬರ್ ಕ್ರೈಮ್ ಗೆ ಬೇಕಾದರು ದೂರು ಕೊಡಿ, ಆದರೆ ಸುಮ್ಮನಿರಬೇಡಿ.
Previous Articleನರೇಗಾ ಯೋಜನೆ ಹೆಸರು ಬದಲಾವಣೆ : ಸೋನಿಯಾ ಗಾಂಧಿ ಅವರ ಸಂದೇಶ
Next Article ಬೈರತಿ ಬಸವರಾಜ್ ಪತ್ತೆಗೆ ಲುಕ್ ಔಟ್ ನೋಟಿಸ್

