ಬೆಂಗಳೂರು.
ಮಹಾನಗರ ಬೆಂಗಳೂರಿನ ಅತ್ಯಂತ ಸಂಚಾರ ದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿದ್ದ ಹೆಬ್ಬಾಳ ಫ್ಲೈ ಓವರ್ ನಲ್ಲಿ ಇದೀಗ ವಾಹನ ಸಂಚಾರ ದಟ್ಟಣೆ ಕೊಂಚಮಟ್ಟಿಗೆ ಸುಧಾರಿಸಿದೆ.
ಬೆಂಗಳೂರು ನಗರ ಉಸ್ತುವಾರಿಯೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ವಹಿಸಿದ ವಿಶೇಷ ಕಾಳಜಿಯ ಪರಿಣಾಮವಾಗಿ ಹೆಬ್ಬಾಳ ಫ್ಲೈ ಓವರ್ ನಲ್ಲಿ ನಿರ್ಮಿಸಲಾಗುತ್ತಿದ್ದ ಲೂಪ್ ಕಾಮಗಾರಿ ನಿಗಧಿತ ಅವಧಿಗಿಂತ ಮೊದಲೇ ಪೂರ್ಣಗೊಂಡಿದೆ.
ಇದರ ಪರಿಣಾಮವಾಗಿ ಹೊಸ ವರ್ಷಕ್ಕೂ ಮುನ್ನವೇ ಈ ಲೂಪ್ ನಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇದರಿಂದ ಯಲಹಂಕ ಮಾರ್ಗವಾಗಿ ಬರುವ ವಾಹನಗಳು ಸರಾಗವಾಗಿ ಮೇಖ್ರಿ ವೃತ್ತ ತಲುಪಬಹುದಾಗಿದೆ.
ಹೊಸ ಲೂಪ್ ಸಂಚಾರಕ್ಕೆ ಮುಕ್ತವಾಗಿರುವ ಪರಿಣಾಮ ದೊಡ್ಡಬಳ್ಳಾಪುರ ಯಲಹಂಕ ಜಕ್ಕೂರು ಸಹಕಾರ ನಗರ ಮಾರ್ಗವಾಗಿ ಹೆಬ್ಬಾಳ ಫ್ಲೈ ಓವರ್ ಮೇಲೆ ಬರುತ್ತಿದ್ದ ವಾಹನಗಳು ಸರಾಗವಾಗಿ ಮೇಖ್ರಿ ವೃತ್ತ ತಲುಪುವಂತಾಗಿದೆ.
ಇದರಿಂದ ಹೆಬ್ಬಾಳ ಫ್ಲೈ ಓವರ್ ನಲ್ಲಿ ವಾಹನ ಸವಾರರು ದಟ್ಟಣೆಯಲ್ಲಿ ಸಿಲುಕಿ ಪರದಾಡುವ ಸ್ಥಿತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆಯಾಗಿದೆ ಇನ್ನೂ ಉಳಿದ ಕಾಮಗಾರಿಗಳು ಅತ್ಯಂತ ವೇಗವಾಗಿ ನಡೆಯುತ್ತಿದ್ದು ಹೊಸ ವರ್ಷದಲ್ಲಿ ಹೆಬ್ಬಾಳ ಫ್ಲೈ ಓವರ್ ಮೇಲೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಸಂಪೂರ್ಣ ನಿವಾರಣೆಯಾಗಲಿದೆ ಎಂದು ಆಶಿಸಲಾಗಿದೆ.
Previous Articleಜನ ಕನ್ನಡ ನ್ಯೂಸ್ ಚಾನಲ್ ನೋಡ್ತಾ ಇಲ್ಲ
Next Article ಇನ್ಫೋಸಿಸ್ ಸಂಸ್ಥೆ ಎಂತಾ ಕೆಲಸ ಮಾಡಿದೆ ನೋಡಿ

