ಬೆಂಗಳೂರು,
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ದೊಡ್ಡ ಡ್ರಗ್ಸ್ ಕಾರ್ಖಾನೆ ಪತ್ತೆಯಾಗಿ ಅದರ ತನಿಖೆ ನಡೆಯುತ್ತಿರುವ ನಡುವೆಯೇ ರಾಜಧಾನಿ ಮಹಾನಗರ ಬೆಂಗಳೂರಿನ ಕೆಲವು ಕಡೆ ಅಕ್ರಮವಾಗಿ ಡ್ರಗ್ಸ್ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಮಾದಕ ನಿಗ್ರಹ ಪಡೆ(ಎಎನ್ ಟಿಎಫ್) ಕೊಂಕಣ ವಿಭಾಗದ ಪೊಲೀಸರು ಜಂಟಿಯಾಗಿ ಬೆಂಗಳೂರು ನಗರದ ಮೂರು ಕಡೆಗಳಲ್ಲಿ ದಾಳಿ ನಡೆಸಿ ಡ್ರಗ್ಸ್ ಫ್ಯಾಕ್ಟರಿ ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ ಈ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿ 55.88 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಆರ್ ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದನ್ನು ಮಹಾರಾಷ್ಟ್ರ ಪೊಲೀಸರು ಪತ್ತೆ ಮಾಡಿರುವುದು ಬೆಂಗಳೂರು ನಗರದ ನಾಗರೀಕರನ್ನು ಬೆಚ್ಚಿ ಬೀಳಿಸಿದೆ.
ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿತ್ತು. ಈ ವೇಳೆ ಬಂಧಿತನಾಗಿದ್ದ ಡ್ರಗ್ ಫೆಡ್ಲರ್ ಅಬ್ದುಲ್ಲಾ ಖಾದರ್ ಶೇಕ್ ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿ ಆಧರಿಸಿ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಲಾಗಿತ್ತು.
ಪಾಟೀಲ್ ವಿಚಾರಣೆಯ ಸಮಯದಲ್ಲಿ ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ.
ದಾಳಿ ನಡೆಸಿದ ಪೊಲೀಸರು ಈ ಕಾರ್ಖಾನೆಗಳಲ್ಲಿ ಇರಿಸಲಾಗಿದ್ದ4.1 ಕೆಜಿ ಘನ ಎಂಡಿಎಂಎ ಮತ್ತು 17 ಕೆಜಿ ದ್ರವ ಎಂಡಿಎಂಎ ಸೇರಿ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಈ ಫ್ಯಾಕ್ಟರಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಡ್ರಗ್ ತಯಾರಾಗುತ್ತಿತ್ತು ಆನಂತರ ಇದನ್ನು ದೇಶದ ಅನೇಕ ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಮಹಾರಾಷ್ಟ್ರ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಬಂಧಿತರು ಬೆಂಗಳೂರು ಮಾತ್ರವಲ್ಲದೆ ದೇಶದ ಹಲವೆಡೆ ಇವರು ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ವಿಚಾರಣೆಯ ಸಮಯದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಅಷ್ಟೇ ಅಲ್ಲ ಇವರ ಜೊತೆ ದೊಡ್ಡ ಸಿಂಡಿಕೇಟ್ ಕೆಲಸ ಮಾಡುತ್ತಿದೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದು ಅದರ ಆಧಾರದಲ್ಲಿ ಉಳಿದ ಆರೋಪಿಗಳಿಗೂ ಮಹಾರಾಷ್ಟ್ರ ಪೊಲೀಸರು ಶೋಧ ಮುಂದುವರಿಸಿದ್ದಾರೆ.


17 ಪ್ರತಿಕ್ರಿಯೆಗಳು
precription drugs from canada: india medication delivery to usa – legit canadian pharmacy
canada online pharmacy no prescription TrustedIndiaCare RX cheapest pharmacy canada
http://bordervaluerx.com/# BorderValue RX
canadian medication delivery to usa: certified canadian pharmacy usa – best canadian online pharmacy
BorderValue RX: mexico border medications usa access – BorderValue RX
http://trustedindiacarerx.com/# indian pharmacies safe
https://bordervaluerx.com/# BorderValue RX
certified canadian pharmacy usa: CertifiedMaple RX – certified canadian pharmacy usa
CertifiedMaple RX CertifiedMaple RX CertifiedMaple RX
https://certifiedmaplerx.com/# licensed canadian drug suppliers
reliable canadian online pharmacy: licensed canadian drug suppliers – pharmacy in canada
http://certifiedmaplerx.com/# licensed canadian drug suppliers
licensed canadian drug suppliers: CertifiedMaple RX – licensed canadian drug suppliers
http://certifiedmaplerx.com/# licensed canadian drug suppliers
BorderValueRX: BorderValue RX – best mexican pharmacy online
https://certifiedmaplerx.com/# certified canadian pharmacy usa
https://trustedindiacarerx.com/# cheap online pharmacy