ಬೆಂಗಳೂರು, ಜ.14:
ಮಹಾನಗರ ಬೆಂಗಳೂರಿನ ಪುಟ್ ಪಾತ್ ಗಳು ಪಾದಚಾರಿಗಳ ಓಡಾಟಕ್ಕಿಂತಲೂ ಬಗೆಬಗೆಯ ವಸ್ತುಗಳ ಮಾರಾಟ ಮಾರಾಟ ಮಾಡಲಾಗುತ್ತದೆ ಬಟ್ಟೆಯಿಂದ ಹಿಡಿದು ಎಲೆಕ್ಟ್ರಾನಿಕ್ ಉಪಕರಣಗಳ ವರೆಗೆ ಬೆಂಗಳೂರಿನ ಪುಟ್ ಪಾತ್ ಗಳಲ್ಲಿ ಎಲ್ಲವೂ ಸಿಗುತ್ತದೆ ಈಗ ಇದರ ಸಾಲಿಗೆ ಗಾಂಜಾ ಕೂಡ ಸೇರ್ಪಡೆಯಾಗಿದೆ.
ಪುಟ್ ಪಾತ್ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಶಾದ ಇಬ್ಬರನ್ನು ಬಂಧಿಸಿರುವ ವಿವೇಕನಗರ ಪೊಲೀಸರು 21 ಲಕ್ಷ ಮೌಲ್ಯದ 21 ಕೆ.ಜಿ 210 ಗ್ರಾಂ ಗಾಂಜಾ ಮತ್ತು 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಒಡಿಶಾದ ಅಂಬೋನಾದ ಸಂಜಿತ್ ಬಾಗ್ (35)ಬಂದ್ ಜಿಲ್ಲೆಯ ಮಿಂಥುನ್ ಕಂಬಾರ್(25) ಎಂದು ಗುರುತಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿವೇಕನಗರ ವನ್ನಾರ್ ಪೇಟೆ ಕಡೆ ಹೋಗುವ ರಸ್ತೆಯಲ್ಲಿರುವ ಇಂಡಿಯಾ ಗ್ಯಾರೇಜ್ ಎದುರುಗಡೆಯ ಪುಟ್‍ಬಾತ್ ಮೇಲೆ ಆರೋಪಿಗಳು ಗಾಂಜಾ ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿರುವಾಗ
ಕಾರ್ಯಾಚರಣೆ ಕೈಗೊಂಡ ವಿವೇಕನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಗಳು ಓಡಿಶಾದ ಅಪರಿಚಿತ ವ್ಯಕ್ತಿಯೋರ್ವನಿಂದ ಕಡಿಮೆ ಬೆಲೆಗೆ ಗಾಂಜಾವನ್ನು ಖರೀದಿಸಿ ಬಂದು ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದನ್ನು ತಪ್ಪೊಪ್ಪಿಕೊಂಡಿದ್ದಾರೆ.
ಬಂಧಿತರ ವಶದಲ್ಲಿದ್ದ 21 ಕೆ.ಜಿ 210 ಗ್ರಾಂ ನಿಷೇದಿತ ಮಾದಕ ವಸ್ತು ಗಾಂಜಾ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ವ್ಯಕ್ತಿಗಳು ತಲೆ ಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.

