ಬೆಂಗಳೂರು,
ಮದ್ಯದ ಅಂಗಡಿಯ ಲೈಸೆನ್ಸ್ ನವೀಕರಣ ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಕರಣಕ್ಕೆ ಇದೀಗ ಹಠಾತ್ ತಿರುವು ಸಿಕ್ಕಿದೆ.
ಈ ಪ್ರಕರಣ ಇದೀಗ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರನ್ನು ಸುತ್ತಿಕೊಳ್ಳುವ ಲಕ್ಷಣಗಳು ಗೋಚರಿಸಿದ್ದು ರಾಜ್ಯ ಸರ್ಕಾರಕ್ಕೆ ಗಂಡಾಂತರವಾಗಿ ಪರಿಣಮಿಸಿದೆ.
ಮಧ್ಯದ ಉದ್ಯಮಿ ಲಕ್ಷ್ಮೀನಾರಾಯಣ ಎಂಬವರು ತಮಗೆ ಸೇರಿದ ಮದ್ಯದ ಅಂಗಡಿಯ ಪರವಾನಗಿ ನವೀಕರಣ ಮತ್ತು ಬ್ರೂವರಿ ಆರಂಭಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಬಕಾರಿ ಅಧಿಕಾರಿಗಳು ಇದನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಿರಲಿಲ್ಲ.
ಆನಂತರ ಲಕ್ಷ್ಮೀನಾರಾಯಣ ಅವರು ಅಬಕಾರಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು ಈ ವೇಳೆ 80 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರ ಮೊದಲ ಕಂತು 25 ಲಕ್ಷ ರೂಪಾಯಿ ಹಣ ನೀಡುವ ಕುರಿತಂತೆ ಮಾತುಕತೆ ನಡೆದಿತ್ತು ಅದರಂತೆ ಕಾರ್ಯೋನ್ಮುಖರಾದ ಲಕ್ಷ್ಮೀನಾರಾಯಣ ಅವರು ಲೋಕಾಯುಕ್ತರಿಗೂ ವಿಷಯವನ್ನು ಗಮನಕ್ಕೆ ತಂದಿದ್ದರು. ಎಲ್ಲವೂ ಯೋಚಿಸಿದಂತೆ ಕಾರ್ಯಾಚರಣೆ ನಡೆಸಿ ಲಂಚದ ಹಣ ಪಡೆಯುತ್ತಿರುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಬಕಾರಿ ಡಿಸಿ ಜಗದೀಶ್ ಎಸ್ ಪಿ ಕೆ ಎಂ ತಮ್ಮಣ್ಣ ಮತ್ತು ಕಾನ್ಸ್ಟೇಬಲ್ ಗಣಿ ಎನ್ನುವರನ್ನು ಬಂಧಿಸಿದ್ದರು.
ಇದಾದ ನಂತರ ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಲೋಕಾಯುಕ್ತ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ ವಿಚಾರಣೆ ವೇಳೆ ಅಬಕಾರಿ ಅಧಿಕಾರಿಗಳು ಈ ಲಂಚ ಪ್ರಕರಣದಲ್ಲಿ ಅಪಕಾರಿ ಮಂತ್ರಿ ಆರ್ ಬಿ ತಿಮ್ಮಾಪುರ ಅವರಿಗೂ ಪಾಲು ನೀಡಬೇಕಾಗಿತ್ತು ಎಂದು ತಿಳಿಸಿರುವುದಾಗಿ ಗೊತ್ತಾಗಿದ್ದು ಇಡೀ ಪ್ರಕರಣಕ್ಕೆ ಹೊಸ ತಿರುವುಬಂದಿದೆ.
ಇದಲ್ಲದೆ ಲಂಚದ ಕುರಿತಂತೆ ದೂರು ನೀಡಿರುವ ಅಬಕಾರಿ ಉದ್ಯಮಿ ಲಕ್ಷ್ಮಿ ನಾರಾಯಣ ಕೂಡ ಅಬಕಾರಿ ಮಂತ್ರಿಗೆ ಲಂಚ ನೀಡುವ ಬಗ್ಗೆ ಮಾಹಿತಿ ನೀಡಿದ್ದು ಲೋಕಾಂತ ಪೊಲೀಸರು ಇದರ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Previous Articleಬಿಗ್ ಬಾಸ್ ಫಿನಾಲೆ ಎಂದರೆ ದೇಶದ ಅಧ್ಯಕ್ಷರ ಚುನಾವಣೆನಾ..?!
Next Article ಮೈಸೂರು ಜೆಡಿಎಸ್ ನಲ್ಲಿ ತಲ್ಲಣ

