ಬೆಂಗಳೂರು,
ತಂದೆ ತಾಯಿ ಹಾಗೂ ಸೋದರಿಯನ್ನು ಕೊಲೆ ಮಾಡಿ ಮೃತ ದೇಹಗಳನ್ನು ತನ್ನ ಮನೆಯಲ್ಲಿಯೇ ಹೂತು ಹಾಕಿ ಏನು ಗೊತ್ತಿಲ್ಲದಂತೆ ಪೊಲೀಸ್ ಠಾಣೆಗೆ ಬಂದು ತನ್ನ ಕುಟುಂಬ ಸದಸ್ಯರು ಕಾಣೆಯಾಗಿದ್ದಾರೆ ಎಂದು ದೂರು ನೀಡಿ ಪರಾರಿ ಯಾಗಲು ಯತ್ನಿಸುತ್ತಿರುವಾಗಲೇ ಪಾತಕಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ತಂದೆ ತಾಯಿ ಮತ್ತು ಸೋದರಿಯನ್ನು ಕೊಲೆ ಮಾಡಿ ಏನು ಗೊತ್ತಿಲ್ಲದಂತೆ ಬಚಾವಾಗಲು ಪ್ರಯತ್ನ ಮಾಡಿದ ಪಾತಕಿಯನ್ನು ಅಕ್ಷಯ್ ಕುಮಾರ್ ಎಂದು ಗುರುತಿಸಲಾಗಿದೆ ಈತ ಮೂಲತಃ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಗ್ರಾಮದವನು ಎನ್ನಲಾಗಿದೆ.
ಕೆಲಸ ಅರಸಿ ಅಕ್ಷಯ್ ಕುಮಾರ್ ಅವರ ತಂದೆ ಭೀಮರಾಜ್, ತನ್ನ ಪತ್ನುಜಯಲಕ್ಷ್ಮಿ ಹಾಗೂ ಮಗಳು ಅಮೃತಾ ಸಮೇತ ವಿಜಯನಗರ ಜಿಲ್ಲೆಯ ಕೊಟ್ಟೂರಿಗೆ ಬಂದಿದ್ದರು.
ಹಲವು ವರ್ಷಗಳಿಂದ ಕೊಟ್ಟೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.ಇಲ್ಲಿ ಅವರೊಂದಿಗೆ ಕೆಲ ದಿನಗಳ ಕಾಲ ವಾಸ ಮಾಡಿಕೊಂಡಿದ್ದ ಅಕ್ಷಯ್ ಕುಮಾರ್ ಬೆಂಗಳೂರಿಗೆ ಬಂದು ಇಲ್ಲಿ ಕೆಲಸ ಮಾಡುತ್ತಿದ್ದ. ಹೀಗಿರುವಲ್ಲಿ ಆತ ಇತ್ತೀಚೆಗೆ ಇತ್ತೀಚೆಗೆ ಕೊಟ್ಟೂರಿಗೆ ತೆರಳಿದ್ದ.ಅಲ್ಲಿ ತನ್ನ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮಿ ಹಾಗೂ ಸಹೋದರಿ ಅಮೃತಾಳನ್ನ
ಕೊಲೆ ಮಾಡಿ ಅದೇ ಬಾಡಿಗೆ ಮನೆಯಲ್ಲಿ ಮೃತ ದೇಹಗಳನ್ನು ಹೂತು ಹಾಕಿದ್ದಾನೆ ಎನ್ನಲಾಗಿದೆ.
ಆನಂತರ ಬೆಂಗಳೂರಿಗೆ ಹಿಂತಿರುಗಿದ ಈತ ತಿಲಕ್ ನಗರ ಪೊಲೀಸ್ ಠಾಣೆಗೆ ತೆರಳಿ ತನ್ನ ತಂದೆ ತಾಯಿ ಹಾಗೂ ಸಹೋದರಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾನೆ.
ದೂರು ನೀಡುವ ಸಮಯದಲ್ಲಿ ಆತನ ನಡವಳಿಕೆ ಕಂಡು ಪೊಲೀಸರಿಗೆ ಅನುಮಾನ ಬಂದಿದೆ ತಕ್ಷಣವೇ ಅನುಮಾನಗೊಂಡ ಪೊಲೀಸರು ಈತನನ್ನು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರೋದಾಗಿ ಬಾಯ್ಬಿಟ್ಟಿದ್ದಾನೆ. ಯಾವ ಕಾರಣಕ್ಕೆ ಕೊಲೆ ಮಾಡಿದ್ದಾನೆ ಅನ್ನೋದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಆರೋಪಿಯನ್ನ ಬೆಂಗಳೂರಿನಿಂದ ಕೊಟ್ಟೂರಿಗೆ ಕರೆದುಕೊಂಡು ಹೋಗಲಾಗಿದೆ.
Previous Articleಡಿ.ಕೆ.ಶಿವಕುಮಾರ್ ಭಾಷಣದಲ್ಲಿ ಏನು ಹೇಳಿದ್ದಾರೆ ನೋಡಿ
Next Article ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಡಾ. ಸಿ.ಜೆ ರಾಯ್ ದಾರುಣ ಅಂತ್ಯ

