ಬೆಂಗಳೂರು.
ಮಹಾನಗರ ಬೆಂಗಳೂರಿನ ಜನಪ್ರಿಯ ಸಮೂಹ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋ ಪ್ರಯಾಣ ದರ ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿದೆ. ಒಂದು ವರ್ಷದ ಹಿಂದಷ್ಟೇ ಪ್ರಯಾಣ ದರವನ್ನು 71.5% ರಷ್ಟು ಹೆಚ್ಚಳ ಮಾಡಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಈಗ ಪ್ರಯಾಣ ದರವನ್ನು ಶೇಕಡಾ 5 ರಷ್ಟು ಹೆಚ್ಚಳ ಮಾಡಿದೆ.
ಬದಲಾಗುತ್ತಿರುವ ಆರ್ಥಿಕ ಸ್ಥಿತಿಗತಿ ಅನುಸರಿಸಿ
ಬಿಎಂಆರ್‌ಸಿಎಲ್ ಪ್ರತಿ ವರ್ಷ ಶೇಕಡಾ 5 ರಷ್ಟು ಪ್ರಯಾಣ ದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿಗಾಗಿ ನೇಮಕ ಮಾಡಿದ್ದ ಉನ್ನತಾಧಿಕಾರ ಸಮಿತಿ 2025ರಲ್ಲಿ ಶಿಫಾರಸು ಮಾಡಿತ್ತು.
ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಬಿಎಂಆರ್‌ಸಿಎಲ್ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು ಶೇಕಡಾ 5 ರಷ್ಟು ದರ ಏರಿಸಲು ನಿರ್ಧಾರ ಕೈಗೊಂಡಿತ್ತು.
ಆನಂತರ ದರ ಹೆಚ್ಚಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ನೀಡುವಂತೆ ಮನವಿ ಮಾಡಿತ್ತು.ಇದೀಗ ರಾಜ್ಯ ಸರ್ಕಾರ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು ಬರುವ
ಸೋಮವಾರ ದಿಂದ ಜಾರಿಗೆ ಬರಲಿದೆ. ಕನಿಷ್ಠ 1 ರೂ. ಹಾಗೂ ಗರಿಷ್ಠ 5 ರೂ. ಹೆಚ್ಚಳವಾಗಲಿದೆ. ಕನಿಷ್ಠ 10 ಇರುವ ದರ 11ಕ್ಕೆ, ಗರಿಷ್ಠ 90 ಇರುವ ದರ 95ಕ್ಕೆ ಏರಿಕೆಯಾಗಲಿದೆ
Previous Articleಮೈಲಾರ ಕಾರ್ಣಿಕ ಭವಿಷ್ಯದ ಅರ್ಥ ಗೊತ್ತಾ..?
Next Article ಬಜೆಟ್ ದಾಖಲೆಗೆ ಸಿಎಂ ಸಿದ್ದತೆ

