ಬೆಂಗಳೂರು,
ಜಾಗತಿಕ ವಿದ್ಯಮಾನಗಳು ಮತ್ತು ಷೇರು ಮಾರುಕಟ್ಟೆಯಲ್ಲಿನ ಅಸ್ಥಿರತೆಯ ಪರಿಣಾಮವಾಗಿ ಹಳದಿ ಲೋಹ ಚಿನ್ನಕ್ಕೆ ಬಂಪರ್ ಬೆಲೆ ಬಂದಿದೆ ಇದರ ಬೆನ್ನಲ್ಲೇ ವಂಚನೆಯ ಪ್ರಮಾಣ ಕೂಡ ಹೆಚ್ಚಾಗಿದೆ.
ಗ್ರಾಹಕರು ತಮ್ಮ ಬಳಿ ಅಡವಿಟ್ಟ ಚಿನ್ನವನ್ನು ಅವರಿಗೆ ವಾಪಸ್ ಕೊಡಲು ಮನಸಿಲ್ಲದೆ ಅದನ್ನು ಲಪಟಾಯಿಸಲು ಹೊಂಚುಹಾಕಿ ಕಳ್ಳತನದ ಕಥೆ ಕಟ್ಟಿದ ರಾಜಸ್ಥಾನದ ಮೂಲದ ಮಂಡ್ಯದಲ್ಲಿನ ವ್ಯಾಪಾರಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ರಾಜಸ್ಥಾನದಿಂದ ಬಂದು ಕಳೆದ ಹಲವು ವರ್ಷಗಳಿಂದ ಮಂಡ್ಯದ ಕ್ಯಾತನಹಳ್ಳಿಯಲ್ಲಿ ಚಿನ್ನಾಭರಣ ಅಂಗಡಿ ಹಾಗೂ ಗಿರವಿ ಶಾಪ್ ಇಟ್ಟುಕೊಂಡಿದ್ದ ಜಿತೇಂದ್ರ ಸಿಂಗ್, ಕಳ್ಳತನದ ಕಥೆಯೊಂದನ್ನು ಕಟ್ಟಿದ್ದಾನೆ.
ತಾನು ಒಬ್ಬನೇ ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ವೇಳೆ ದಿಢೀರ್ ದಾಳಿ ನಡೆಸಿದ
ದುಷ್ಕರ್ಮಿಗಳು ತನ್ನ ಮೇಲೆ ಹಲ್ಲೆ ನಡೆಸಿ ಆಸಿಫ್ ಎರಚಿ ಬಂಗಾರದ ಅಂಗಡಿ ದೋಚಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ
ಅಂಗಡಿಯಲ್ಲಿದ್ದ 170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ ದರೋಡೆ ಆಗಿದೆ ಎಂದು ದೂರಿನಲ್ಲಿ ತಿಳಿಸಿದ್ದ. ಆ ಬಳಿಕ ಈತ ಗಾಯಗಳ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆಗಿಳಿದಿದ್ದರು. ಈ ವೇಳೆ ಜಿತೇಂದ್ರ ಸಿಂಗ್ ಮುಖಕ್ಕೆ ಮಾತ್ರ ಗಾಯವಾಗಿರೋದು ಪೊಲೀಸರ ಅನುಮಾನಕ್ಕೆ ಕಾರಣವಾಗದೆ. ಆ್ಯಸಿಡ್ ಎರಚಿ ಆರೋಪಿಗಳು ದರೋಡೆ ನಡೆಸಿದ್ದರೆ ಅದು ಈತನ ಕಣ್ಣಿಗೂ ಹಾನಿ ಮಾಡಬೇಕಿತ್ತು, ಆದರೆ ಆಗಿರಲಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಗಗನಕ್ಕೇರಿದ ಚಿನ್ನದ ಸಾಲ ವಾಪಸ್ ಕೊಡದಿರಲು ಮತ್ತು ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಜಿತೇಂದ್ರ ಯೋಜನೆ ರೂಪಿಸಿದ್ದ. ಚಿನ್ನಕ್ಕೆ ಬಳಸುವ ರಾಸಾಯನಿಕ ಮುಖಕ್ಕೆ ಬಳಿದುಕೊಂಡಿದ್ದ ಈತ, ಅಂಗಡಿ ದರೋಡೆ ನಡೆದಿದೆ. ಕಳ್ಳತನ ಮಾಡಿದ ಆರೋಪಿಗಳು ಅಂಗಡಿಯಲ್ಲಿದ್ದ ಸಿಸಿಟಿವಿ ಡಿಪಿಆರ್ ಅನ್ನೂ ಬಿಡದೆ ಕದ್ದು ಪರಾರಿಯಾಗಿದ್ದಾರೆ ಎಂದಿದ್ದ. ಈ ರೀತಿಯ ನಾಟಕ ಮಾಡಿ ಎಲ್ಲರನ್ನು ನಂಬಿಸಿ ಕೆಲ ದಿನಗಳ ಬಳಿಕ ಅಂಗಡಿ ಮುಚ್ಚಿಕೊಂಡು ರಾಜಸ್ಥಾನಗೆ ಮರಳಲು ಪ್ಲ್ಯಾನ್ ಮಾಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಸತ್ಯಾಸತ್ಯತೆ ಬಯಲಿಗೆಳೆದ ಪೊಲೀಸರು ಚಿನ್ನದಂಗಡಿ ಮಾಲೀಕನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
Previous Articleರಾಹುಲ್ ಗಾಂಧಿಗೆ ಹೈಕೋರ್ಟ್ ನಲ್ಲಿ ಗೆಲುವು
Next Article ಸೇವಾದಳ ಘಟಕಗಳ ವಿಸರ್ಜನೆ

