ಬೆಂಗಳೂರು:
ಮದ್ಯ ಪ್ರಿಯರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್ )
ಸಂತಸದ ಸುದ್ದಿ ನೀಡಿದೆ.
ಮೆಟ್ರೋ ಪ್ರಯಾಣಿಕರು ಸೀಲ್ಡ್ ಮಾಡಿರುವ ಮದ್ಯದ ಬಾಟಲಿಗಳನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಸಾಗಿಸಲು ಅನುಮತಿ ನೀಡಲು ಮುಂದಾಗಿದೆ.
ಸೀಲ್ಡ್ ಮಾಡಿರುವ ಮದ್ಯದ ಬಾಟಲಿಗಳನ್ನು
ಸಾಗಿಸಲು ಅನುಮತಿ ನೀಡುವ ಸಂಬಂಧ ಬಿಎಂಆರ್ ಸಿಎಲ್ ನ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕೆ ತಾತ್ವಿಕ ಅನುಮತಿ ದೊರೆತಿದ್ದರೂ, ಜಾರಿಗೆ ಬರಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು ಎನ್ನಲಾಗಿದೆ.
ದೆಹಲಿ ಮಾದರಿಯನ್ನು ನಮ್ಮ ಮೆಟ್ರೋದಲ್ಲಿಯೂ ಅನುಸರಿಸುವ ಬಗ್ಗೆ ಚರ್ಚೆ ನಡೆದಿದೆ.
ಪ್ರಸ್ತುತ ದೆಹಲಿ ಮೆಟ್ರೋದ ಏರ್‌ಪೋರ್ಟ್ ಮಾರ್ಗದಲ್ಲಿ ಮದ್ಯ ಸಾಗಿಸಲು ಅನುಮತಿ ಇದೆ. ನಮ್ಮ ಮೆಟ್ರೋ ಏರ್‌ಪೋರ್ಟ್‌ಗೆ ಸಂಪರ್ಕ ಹೊಂದಿದ ಬಳಿಕ, ರಾಜ್ಯದಲ್ಲಿಯೂ ಮೆಟ್ರೋಗಳಲ್ಲಿ ಮದ್ಯ ಸಾಗಾಟಕ್ಕೆ ಅನುಮತಿ ನೀಡುವ ಬಗ್ಗೆ ಸಮಾಲೋಚನೆ ನಡೆದಿದೆ.
ಬಿಎಂಆರ್ ಸಿಎಲ್ ಅಧಿಕಾರಿಗಳ ಪ್ರಕಾರ ಮದ್ಯದ ಬಾಟಲಿ ಸಾಗಿಸಲು ಯಾವುದೇ ವಿಶೇಷ ಅನುಮತಿ ಅಥವಾ ಪ್ರತ್ಯೇಕ ಪರವಾನಗಿ ಅಗತ್ಯವಿಲ್ಲ. ಅನುಮೋದನೆ ಸಿಕ್ಕ ಬಳಿಕ ಮೆಟ್ರೋ ನಿಯಮಾವಳಿಗಳಲ್ಲಿ ಅಗತ್ಯ ತಿದ್ದುಪಡಿ ನಡೆಯಲಿದೆ.
ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಪ್ರಸ್ತುತವಾಗಿ ಅನುಮತಿ ಇಲ್ಲ. ಹೀಗಿದ್ದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋದಲ್ಲಿ ಮದ್ಯ ಸೇವಿಸಿರುವವರು ಪ್ರಯಾಣಿಸಬಹುದು. ಆದರೆ ಸೇವನೆ ಅನುಮತಿಸಿದ ಮಿತಿಯೊಳಗೇ ಇರಬೇಕು ಎಂದಿದ್ದರೂ ಆ ಕುರಿತ ಸ್ಪಷ್ಟ ವಿವರಣೆ ನೀಡಲಾಗಿಲ್ಲ. ಪ್ರಯಾಣಿಕರು ಅಸಭ್ಯವಾಗಿ ವರ್ತಿಸಬಾರದು ಅಥವಾ ಇತರರಿಗೆ ಅಸೌಕರ್ಯ ಉಂಟುಮಾಡಬಾರದು ಎಂಬುದೇ ಈ ನಿಯಮದ ಉದ್ದೇಶ ಎಂದು ತಿಳಿಸಿದ್ದಾರೆ.
Previous Articleಸಫಾರಿಗೆ ಹಸಿರು ನಿಶಾನೆ. ಆದರೆ, ಈ ಷರತ್ತು ಪಾಲಿಸಲೇಬೇಕು
Next Article ಪೆರೋಲ್ ಮೇಲೆ ಬಿಡುಗಡೆಯಾಗಿ ದರೋಡೆ ಮಾಡಿದ!

