ಕಾರವಾರ ನೌಕಾನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಕರ್ನಾಟಕ ನೌಕಾ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗ ಮಾಡಿದರು. ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ 2 ದಿನದ ಕಾರ್ಯಕ್ರಮ ನಿಮಿತ್ತ ಗುರುವಾರ ಆಗಮಿಸಿದ್ದ ರಕ್ಷಣಾ ಸಚಿವರು, ರಕ್ಷಣಾ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರೊಂದಿಗೆ ಸಂವಾದ ನಡೆಸಿದ್ದರು.ಶುಕ್ರವಾರ ಕಡಲ ತೀರದಲ್ಲಿ ಯೋಗ ಮಾಡಿದರು. ಬಳಿಕ ಜಲಾಂತರ್ಗಾಮಿ ನೌಕೆಯಲ್ಲಿ ಸಮುದ್ರಯಾನ ನಡೆಸಿದರು. ಯೋಗಾಭ್ಯಾಸದ ಫೋಟೋಗಳು ಇಲ್ಲಿವೆ.ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ಶುಕ್ರವಾರ ಬೆಳಿಗ್ಗೆ ಜಲಾಂತರ್ಗಾಮಿ ‘ಐ.ಎನ್.ಎಸ್ ಖಂಡೇರಿ’ಯಲ್ಲಿ ಸಮುದ್ರ ಯಾನ ಮಾಡಿದರು. ಸಮುದ್ರದಲ್ಲಿ ಕೈಗೊಳ್ಳಲಾಗುವ ವಿವಿಧ ಕಾರ್ಯಾಚರಣೆಗಳ ಮಾಹಿತಿಗಳನ್ನು ಪಡೆದುಕೊಂಡರು.ಐ.ಎನ್.ಎಸ್ ಖಂಡೇರಿ ಜಲಾಂತರ್ಗಾಮಿಯು ಸಂಪೂರ್ಣ ಸ್ವದೇಶಿ ನಿರ್ಮಾಣವಾಗಿದೆ. ಮುಂಬೈನ ಮಜಗಾಂ ಡಾಕ್ ಯಾರ್ಡ್ನಲ್ಲಿ ನಿರ್ಮಿಸಲಾಗಿರುವ ಈ ನೌಕೆಯನ್ನು ರಾಜನಾಥ ಸಿಂಗ್ ನೇತೃತ್ವದಲ್ಲಿ 2019ರಲ್ಲಿ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿತ್ತು
ಕಾರವಾರ ನೌಕಾನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಗ
Previous Articleಸತ್ತಂತೆ ನಾಟಕವಾಡಿ ಗುಂಡಿನ ದಾಳಿಯಿಂದ ಪಾರಾದ ಬಾಲಕಿ!
Next Article ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಪತ್ತೆ..!!