ನವದೆಹಲಿ: ನೋಟುಗಳ ಮೇಲೆ ಗಾಂಧೀಜಿ ಚಿತ್ರವನ್ನು ಮಾತ್ರ ಇಷ್ಟು ದಿನ ನೋಡುತ್ತಿದ್ದೆವು. ಆದರೆ ಇನ್ನು ರವೀಂದ್ರ ನಾಥ್ ಟ್ಯಾಗೋರ್ ಮತ್ತು ಅಬ್ದುಲ್ ಕಲಾಂ ಚಿತ್ರವೂ ಬರಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ನೋಟಿನ ಮೇಲೆ ಟ್ಯಾಗೋರ್ ಮತ್ತು ಕಲಾಂ ಅವರು ವಾಟರ್ ಮಾರ್ಕ್ ಇರುವ ಮಾದರಿಗಳನ್ನು ಆರ್‌ಬಿಐ ಮತ್ತು ಸೆಕ್ಯುರಿಟಿ ಪ್ರಿಂಟಿಂಗ್ ಆಂಡ್ ಮೀಟಿಂಗ್ ಕಾರ್ಪೋರೇಷನ್ ಇಂಡಿಯಾವು ಪರಿಶೀಲನೆಗೆ ಕಳುಹಿಸಿದೆ ಎಂದು ಹೇಳಲಾಗಿದೆ.
ದೆಹಲಿ ಐಐಟಿ ಪ್ರಾಧ್ಯಾಪಕ ದಿಲೀಪ್ ಶಹಾನಿ ನೋಟಿನ ಪರಿಶೀಲನೆ ನಡೆಸಲಿದ್ದು, ಯಾವ ಮಾದರಿಯನ್ನು ಆಯ್ಕೆ ಮಾಡಬೇಕು ಎಂದು ತೀರ್ಮಾನಿಸಲಿದ್ದಾರೆ.
ಈ ಹಿಂದೆ 2020ರಲ್ಲಿ ಆರ್‌ಬಿಐ ಆಂತರಿಕ ಸಮಿತಿಯು ಟ್ಯಾಗೋರ್ ಮತ್ತು ಕಲಾಂ ಚಿತ್ರಗಳನ್ನು ಸೇರಿಸಬೇಕು ಎಂದು ಪ್ರಸ್ತಾವನೆ ನೀಡಿತ್ತು. 2021ರಲ್ಲಿ ಮೈಸೂರು ಮತ್ತು ಮಧ್ಯಪ್ರದೇಶದ ಪೇಪರ್ ಮಿಲ್‌ಗೆ ನೋಟಿನ ಮಾದರಿಯನ್ನು ರಚಿಸಲು ಸೂಚನೆ ನೀಡಿತ್ತು.
ಇದೀಗ ನೋಟು ಮುದ್ರಣಗೊಂಡು ಪರಿಶೀಲನೆ ಹಂತದಲ್ಲಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.