ಧಾರವಾಡ: ಈಗಾಗಲೇ ಅಕ್ರಮ ಕಸಾಯಿಖಾನೆಗಳನ್ನು ತೆಗೆಯಲಾಗಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾದರೂ ಗೋಹತ್ಯೆ ಮಾತ್ರ ನಿಂತಿಲ್ಲ. ಗೋಮಾಂಸ ಈಗಲೂ ಮಾರಾಟ ಆಗುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಅವರು ಈ ಕುರಿತು ಧಾರವಾಡದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಸ್ಲಿಂ ಸಮುದಾಯ 60 ವರ್ಷದಿಂದ ಕಾಂಗ್ರೆಸ್ ಆಡಳಿತದಲ್ಲಿ ಗೋ ಮಾಂಸ ತಿಂದು ಕೊಬ್ಬಿದ್ದಾರೆ. ಸಿಕ್ಕಾಪಟ್ಟೆ ಹಣವನ್ನು ಗಳಿಸಿದ್ದಾರೆ. ಅದರಿಂದ ಆದಾಯವನ್ನು ಬರುವ ಹಾಗೆ ಮಾಡಿದ್ದಾರೆ. ಗೋವು ನಮಗೆ ಹಾಲು ಕೊಡುತ್ತದೆ. ಅತ್ಯಂತ ಪೂಜ್ಯವಾದ ಪ್ರಾಣಿಯಾಗಿದೆ. ಎಲ್ಲವನ್ನು ಕೊಡುವುದರಿಂದ ಅದಕ್ಕೆ ನಾವು ಕಾಮಧೇನು ಅಂತೀವಿ. ಅಕ್ರಮ ಕಸಾಯಿಖಾನೆಗಳನ್ನು ಬುಲ್ಡೋಜರ್ ಮೂಲಕ ಕಿತ್ತೆಸೆದಿದ್ದು ಸ್ವಾಗತಾರ್ಹ ಎಂದರು.
ಗೋವು ಅನಿವಾರ್ಯ ಅಂಶ ಆಗಿದೆ. ಚಿಕ್ಕಮಗಳೂರು ಸೇರಿದಂತೆ ಎಲ್ಲ ಭಾಗಗಳಲ್ಲೂ ಇನ್ನು ಅಕ್ರಮ ಕಸಾಯಿಖಾನೆಗಳಿವೆ.
ಅಂತಹವುಗಳನ್ನು ಹುಡುಕಿ ಕಿತ್ತೆಸೆದಿದ್ದು ಸ್ವಾಗತರ್ಹವಾಗಿದ್ದು, ಚಿಕ್ಕಮಗಳೂರಿನ ಎಲ್ಲ ನಗರಸಭೆಯ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಇದೇ ಮಾದರಿಯಲ್ಲಿ ಇಡೀ ಕರ್ನಾಟಕ ರಾಜ್ಯದ ತುಂಬೆಲ್ಲ ಆಗಬೇಕು. ಅಕ್ರಮ ಕಸಾಯಿಖಾನೆಗಳು ಸಾವಿರಾರಿವೆ. ಹಲವು ಪ್ರತಿಭಟನೆ ಹಿನ್ನೆಲೆಗಳು ಮತ್ತು ಗೋ ಕಳ್ಳರನ್ನು ಹಿಡಿಯುವ ಕಾರ್ಯವನ್ನು ಶ್ರೀರಾಮ ಸೇನೆ ಮಾಡುತ್ತಿದೆ. ನಿರಂತರವಾಗಿ ಗೋವನ್ನು ಸಾಗಿಸುವಂತ ಪ್ರಕ್ರಿಯೆಗೆ ಬುಲ್ಡೋಜರ್ ಒಂದೇ ದಾರಿಯಾಗಿದೆ ಎಂದರು.