ರಿಷಭ್ ಶೆಟ್ಟಿ ನಟಿಸಿರುವ ‘ಹರಿಕಥೆಯಲ್ಲ ಗಿರಿಕಥೆ’ ಸಿನಿಮಾದ ಟ್ರೈಲರ್ ಆನಂದ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು ಭರ್ಜರಿ ಸದ್ದು ಮಾಡಿದೆ.
ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾವನ್ನು ಕರಣ್ ಅನಂತ್ ಹಾಗು ಅನಿರುದ್ಧ್ ಮಹೇಶ್ ನಿರ್ದೇಶಿಸಿದ್ದಾರೆ. ಗಿರಿ ಕೃಷ್ಣ ಅವರು ಕಥೆ ಕೊಟ್ಟಿದ್ದಾರೆ. ಟ್ರೈಲರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ರೈಲರ್ ನೋಡಿದರೆ ರಿಷಭ್ ಶೆಟ್ಟಿ ಅವರು ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ಬಂದಿದ್ದಾರೆ ಎನಿಸುತ್ತಿದೆ ಎಂದು ಅನೇಕ ನೆಟ್ಟಿಗರು ಕಮೆಂಟ್‌ಗಳನ್ನು ಮಾಡಿದ್ಧಾರೆ.
ಚಿತ್ರದಲ್ಲಿ ತಪಶ್ವಿನಿ ಮತ್ತು ಲವ್ ಮಾಕ್‌ಟೈಲ್ ಖ್ಯಾತಿಯ ರಚನಾ ಇಂದರ್, ಯೋಗರಾಜ್ ಭಟ್, ಹೊನ್ನವಳ್ಳಿ ಕೃಷ್ಣ ನಟಸಿದ್ದಾರೆ. ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಜೂನ್ 23 ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನವಿದೆ.